ಕಳೆದ ವರ್ಷ ಹಾಗೂ ಈ ವರ್ಷ ಬಿಡುಗಡೆಯಾದ ಸಾಕಷ್ಟು ಕನ್ನಡ ಸಿನಿಮಾಗಳು ಉತ್ತಮ ವಿಮರ್ಶೆ ಪಡೆದಿದೆ. ಇವುಗಳಲ್ಲಿ ಎಷ್ಟೋ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆದುಹಾಕಲಾಗಿದೆ. ಅಂತಹ ಸಿನಿಮಾಗಳನ್ನು ಕೈ ಹಿಡಿದಿರುವುದು ಡಿಜಿಟಲ್ ಪ್ಲಾಟ್ಫಾರ್ಮ್.
![Manaroopa](https://etvbharatimages.akamaized.net/etvbharat/prod-images/manaroopa-movie-poster1584674212977-19_2003email_1584674224_937.jpg)
ಇತ್ತೀಚೆಗೆ ಅಮೆಜಾನ್ ಪ್ರೈಮ್ನಲ್ಲಿ ಕನ್ನಡದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ 'ಮನರೂಪ' ಬಿಡುಗಡೆ ಆಗಿದ್ದು ನಿರ್ದೇಶಕ ಕಿರಣ್ ಹೆಗ್ಡೆ ಅವರಿಂದ ಉತ್ತಮ ಪ್ರಶಂಸೆ ದೊರೆತಿದೆ. ವಿಶೇಷ ಎಂದರೆ ಈ ಸಿನಿಮಾಗೆ ಕೆಫೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ಅಮೆಜಾನ್ ಪ್ರೈಮ್ನಲ್ಲಿ 'ಮನರೂಪ' ಬಿಡುಗಡೆ ಆದ ಕೂಡಲೆ ನಿರ್ಮಾಪಕ ಹಾಗೂ ನಿರ್ದೇಶಕ ಕಿರಣ್ ಹೆಗ್ಡೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಾನ್ಯತೆ ದೊರೆಯುತ್ತಿದೆ. ‘ಮನರೂಪ’ ಚಿತ್ರದಲ್ಲಿ ಗೌರವ್, ಉಜ್ವಲ್, ಪೂರ್ಣ, ಶಶಾಂಕ್, ಶರವಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂಬೈನಲ್ಲಿ ನಡೆದ ಕೆಫೆ ಇರಾನಿ ಉತ್ಸವದಲ್ಲಿ ಉತ್ತಮ ಪ್ರಯೋಗಾತ್ಮಕ ಸಿನಿಮಾ ಎಂದು ಮತ್ತು ಅಮೆರಿಕದ ಮಿಯಾಮಿ ಇಂಟರ್ನ್ಯಾಷನಲ್ ಚಲನಚಿತ್ರೋತ್ಸವದಲ್ಲಿ, ಟರ್ಕಿಯ ಇಸ್ಟಾನ್ಬುಲ್ನಲ್ಲಿ ಕೂಡಾ ಸಿನಿಮಾ ಪ್ರದರ್ಶನಕ್ಕೆ ಆಯ್ಕೆ ಆಗಿದೆ.
![Manaroopa](https://etvbharatimages.akamaized.net/etvbharat/prod-images/manaroopa--nisha-br-11584674212978-85_2003email_1584674224_997.jpg)
'ಮನರೂಪ' ಚಿತ್ರದಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಷಾ ಯಶ್ ರಾಮ್, ಆರ್ಯನ್, ಶಿವ ಪ್ರಸಾದ್, ಅಮೋಘ್, ಸಿದ್ದಾರ್ಥ್, ಪ್ರಜ್ವಲ್ ಗೌಡ, ಗಜ ನೀನಾಸಂ, ರಮಾನಂದ್ , ಬಿ. ಸುರೇಶ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಗೋವಿಂದ ರಾಜ್ ಛಾಯಾಗ್ರಹಣ, ಸರವಣ ಸಂಗೀತ, ಲೋಕಿ-ಸೂರಿ ಸಂಕಲನ, ಹುಲಿವಾನ್ ನಾಗರಾಜ್ ಧ್ವನಿ ಸಂಗ್ರಹಣ, ಮಹಾಬಲ ಸಿತಾಳಭಾವಿ ಸಂಭಾಷಣೆ ಒದಗಿಸಿದ್ದಾರೆ.