ETV Bharat / sitara

ಮೇಕಪ್ ಕೃಷ್ಣ ಅವರ ಆಸೆಯಂತೆಯೇ ಹುಟ್ಟೂರಿನಲ್ಲಿ ಜರುಗಿದ ಅಂತ್ಯಸಂಸ್ಕಾರ

ಮೇಕಪ್ ಕೃಷ್ಣ ಅವರ ಎರಡೂ ಕಿಡ್ನಿಗಳು ಫೇಲ್​​​​​​​​​ ಆಗಿ ಹಾಗೂ ಹೃದಯದಲ್ಲೂ ಸಮಸ್ಯೆ ಕಾಣಿಸಿಕೊಂಡು ಇಂದು ಬೆಳಗ್ಗೆ 6 ಗಂಟೆಯವರೆಗೆ ನಿಧನರಾಗಿದ್ದಾರೆ. ಕೃಷ್ಣ ಅವರ ಆಸೆಯಂತೆ ಅವರ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಅವರ ಪುತ್ರಿ ತಿಳಿಸಿದ್ದಾರೆ.

author img

By

Published : Jan 13, 2020, 7:27 PM IST

make up krishna
ಮೇಕಪ್ ಕೃಷ್ಣ

ಇಂದು ಬೆಳಗ್ಗೆ ಕಿಡ್ನಿ ವೈಫಲ್ಯದಿಂದ ನಿಧನರಾದ ಮೇಕಪ್ ಕೃಷ್ಣ ಅವರ ಅಂತಿಮ ಸಂಸ್ಕಾರವನ್ನು, ಅವರ ಕೊನೆ ಆಸೆಯಂತೆ ಹುಟ್ಟೂರು ಕುಂಬಳಗೋಡು ಸಮೀಪದ ಕೆಂಚನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.

15 ದಿನಗಳಿಂದ ನಮ್ಮ ತಂದೆಯವರ ಆರೋಗ್ಯದಲ್ಲಿ ಏರುಪೇರಾಗಿದ್ದು. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಎರಡೂ ಕಿಡ್ನಿಗಳು ಫೇಲ್​​ ಆಗಿ ಹಾಗೂ ಹೃದಯದಲ್ಲೂ ಸಮಸ್ಯೆ ಕಾಣಿಸಿಕೊಂಡು ಇಂದು ಬೆಳಗ್ಗೆ 6 ಗಂಟೆಯವರೆಗೆ ನಿಧನರಾಗಿದ್ದಾರೆ. ನಾನು ಸಾವನ್ನಪ್ಪಿದಾಗ ನನ್ನ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ಜರುಗಬೇಕೆಂದು ಕೃಷ್ಣ ಅವರು ಆಗ್ಗಾಗ್ಗೆ ಹೇಳುತ್ತಿದ್ದರು. ಅವರ ಆಸೆಯಂತೆ ಅವರ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಅವರ ಪುತ್ರಿ ತಿಳಿಸಿದ್ದಾರೆ.

ಹುಟ್ಟೂರಿನಲ್ಲಿ ಮೇಕಪ್ ಕೃಷ್ಣ ಅಂತ್ಯಕ್ರಿಯೆ

ಬಾಲ್ಯದಿಂದಲೂ ಕಲೆಯ ಗೀಳು ಹೆಚ್ಚಿಸಿಕೊಂಡಿದ್ದ ಕೃಷ್ಣ, ಅಣ್ಣಾವ್ರ ಆದರ್ಶಗಳಿಂದ ಬಹಳ ಪ್ರಭಾವಿತರಾಗಿದ್ದರು. ಅಲ್ಲದೆ ರಂಗಭೂಮಿಗೆ ಕಲಿಯಲು ಹೊಸದಾಗಿ ಬರುವ ವಿದ್ಯಾರ್ಥಿಗಳಿಗಾಗಿ, ಅಣ್ಣಾವ್ರ ಬಗ್ಗೆ ಸಂಶೋಧನೆ ಮಾಡುವ ಸಲುವಾಗಿ, 'ರಂಗ ಜಂಗಮ' ಎಂಬ ಸಂಶೋಧನಾ ಅಧ್ಯಯನ ಕೇಂದ್ರವನ್ನು ಮೇಕಪ್ ಕೃಷ್ಣ ಸ್ಥಾಪಿಸಿದ್ದರು. ಆದರೆ ಈಗ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಅವರ ಸ್ನೇಹಿತ ಗುರು ಪ್ರಸಾದ್​ ತಿಳಿಸಿದರು. ಜನಪದ ಅಕಾಡೆಮಿ ಮಾಜಿ ಸದಸ್ಯರಾಗಿ ಕೂಡಾ ಕೆಲಸ ನಿರ್ವಹಿಸಿದ್ದ ಕೃಷ್ಣ, ಚಿತ್ರರಂಗಕ್ಕೆ ಬರುವ ಮುನ್ನವೇ ಮೇಕಪ್​​​​​​​​​​​​​​​​​​​​ ಕೃಷ್ಣ ಎಂದೇ ಹೆಸರಾಗಿದ್ದರು. ರಂಗಭೂಮಿಗಾಗಿ ತಮ್ಮ ಇಡೀ ಜೀವನವನ್ನು ಸವೆಸಿದ್ದ ಕೃಷ್ಣ, ಇನ್ನು ನೆನಪು ಮಾತ್ರ ಎಂದು ಜಾನಪದ ಅಕಾಡೆಮಿ ಮಾಜಿ ಸದಸ್ಯ ಆರ್​​​​​​​.ವೆಂಕಟರಾಜ್ ಬೇಸರ ವ್ಯಕ್ತಪಡಿಸಿದರು.

Intro:ಇಂದು ಬೆಳಗಗ್ಗೆ ಕಿಡ್ನಿ ವೈಫಲ್ಯದಿಂದ ನಿಧನರಾದ ಮೇಕಪ್ ಕೃಷ್ಣ ಅವರ ಅಂತಿಮ ಸಂಸ್ಕಾರವನ್ನು, ಅವರ ಕೊನೆಯಾಸೆಯಂತೆ ಹುಟ್ಟೂರು ಕುಂಬಳಗೋಡು ಸಮೀಪದ ಕೆಂಚನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೇಕಪ್ ಕೃಷ್ಣ ಅವರ ಪುತ್ರಿ ತಿಳಿಸಿದ್ದಾರೆ. ಕಳೆದ 15 ದಿನಗಳಿಂದ ನಮ್ಮ ತಂದೆಯವರ ಆರೋಗ್ಯದಲ್ಲಿ ಏರುಪೇರಾಗಿದ್ದು. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರ ಎರಡು ಕಿಡ್ನಿಗಳು ಫೇಲ್ಯೂರ್ ಆಗಿ ಹಾಗೂ ಹೃದಯದಲ್ಲೂ ಸಮಸ್ಯೆ ಕಾಣಿಸಿಕೊಂಡು ಇಂದು ಬೆಳಗ್ಗೆ 6 ಗಂಟೆಯವರೆಗೆ ನಿಧನರಾಗಿದ್ದಾರೆ. ದೀರ್ಘ ಗಂಟೆವರೆಗೂ ಪಾರ್ಥಿವ ಶರೀರವನ್ನು ಇಟ್ಟಿದ್ದು. ಸಾಯಂಕಾಲ 4 ಗಂಟೆ ವೇಳೆಗೆ ನಮ್ಮ ತಂದೆಯವರ ಆಸೆಯಂತೆ ಹುಟ್ಟೂರಲ್ಲಿ ಅಂತ್ಯಸಂಸ್ಕಾರ ಮಾಡುವುದಾಗಿ ಮೇಕಪ್ ಕೃಷ್ಣ ಅವರ ಪುತ್ರಿ ತಿಳಿಸಿದರು.

Body:ಇನ್ನು ಬಾಲ್ಯ ಜೀವನದಿಂದಲೂ ಕಲೆಯ ಗೀಳು ಹೆಚ್ಚಿಸಿಕೊಂಡಿದ್ದ ಕೃಷ್ಣ, ಅಣ್ಣಾವ್ರ ಆದರ್ಶಗಳಿಂದ ತುಂಬಾ ಪ್ರಭಾವಿತರಾಗಿದ್ದರು, ಅಲ್ಲದೆ ರಂಗಭೂಮಿಗೆ ಕಲಿಯಲು ಹೊಸದಾಗಿ ಬರುವ ವಿದ್ಯಾರ್ಥಿಗಳಿಗಾಗಿ, ಅಣ್ಣಾವ್ರ ಬಗ್ಗೆ ಸಂಶೋಧನೆ ಮಾಡುವ ಸಲುವಾಗಿ, ರಂಗ ಜಂಗಮ ಎಂಬ ಸಂಶೋಧನಾ ಅಧ್ಯಯನ ಕೇಂದ್ರವನ್ನು ಮೇಕಪ್ ಕೃಷ್ಣ ಸ್ಥಾಪಿದ್ರು. ಆದರೆ ಈಗ ಅನಾರೋಗ್ಯದಿಂದ ಮುಕ್ತರಾಗಿದ್ದಾರೆ ಎಂದು ಅವರ ಗೆಳೆಯ ಚಲನಚಿತ್ರ ನಿರ್ದೇಶಕ ಪ್ರತಿ ಗುರುಪ್ರಸಾದ್ ಹೇಳಿದರು.

Conclusion:ಜನಪದ ಅಕಾಡೆಮಿಯ ಮಾಜಿ ಸದಸ್ಯರು ಆಗಿ ಕೆಲಸ ನಿರ್ವಹಿಸಿದ್ದ ಕೃಷ್ಣ ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆಯೇ ಮೇಕಪ್ ಕೃಷ್ಣ ಎಂದೇ ಹೆಸರಾಗಿದ್ದರು. ರಂಗಭೂಮಿಗಾಗಿ ತಮ್ಮ ಇಡೀ ಜೀವನವನ್ನು ಸವೆಸಿದ್ದ ಕೃಷ್ಣ ಇನ್ನು ನೆನಪು ಮಾತ್ರ ಎಂದು ಜಾನಪದ ಅಕಾಡೆಮಿ ಮಾಜಿ ಸದಸ್ಯ ಅರ್ ವೆಂಕಟರಾಜ್ ತಿಳಿಸಿದ್ರು‌.

ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.