ಹಲವು ಕಿರುತೆರೆ ನಟರು ಐಷಾರಾಮಿ ಕಾರು ಖರೀದಿಸಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಕನ್ನಡದ ಖ್ಯಾತ ನಟರಾದ ಕಿರಣ್ ರಾಜ್ ಹಾಗೂ ಚಂದು ಬಿ. ಗೌಡ ಸೇರ್ಪಡೆ ಆಗಿದ್ದಾರೆ.
ಕನ್ನಡದಲ್ಲಿ ಕಿನ್ನರಿ ಧಾರಾವಾಹಿ ಮೂಲಕ ಮನೆಮಾತಾದ ಕಿರಣ್ ರಾಜ್ ಹಿಂದಿಯ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಇದೀಗ ಕನ್ನಡತಿ ಧಾರಾವಾಹಿ ಮೂಲಕ ಮತ್ತಷ್ಟು ಪ್ರಸಿದ್ಧರಾಗಿದ್ದಾರೆ.
ಅಲ್ಲದೆ ಕನ್ನಡತಿ ಧಾರಾವಾಹಿ ನಟನೆ ನಂತರ ಕಿರಣ್ ರಾಜ್ ಅವರಿಗೆ ಸಿನಿಮಾಗಳ ಆಫರ್ಗಳು ಒಂದರ ಮೇಲೊಂದರಂತೆ ಬಂದವು. ಹೀಗಾಗಿ ಕಿರಣ್ ರಾಜ್ ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
2018ರಲ್ಲಿ ತೆರೆಕಂಡ ‘ಅಟೆಮ್ಟ್ ಟು ಮರ್ಡರ್’ ಚಿತ್ರದ ಮೂಲಕ ಬೆಳ್ಳಿ ತೆರೆಗೂ ಕಾಲಿಟ್ಟರು. ಇತ್ತೀಚೆಗೆ ತೆರಕಂಡ ರಾಬರ್ಟ್ ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.