ETV Bharat / sitara

Love You Rachchu: ಮರ್ಡರ್​ ಮಿಸ್ಟ್ರಿಯ ಸುತ್ತ ಅಜಯ್​ ರಾವ್​​ 'ಲವ್​​ ಯು ರಚ್ಚು' ಕಹಾನಿ - ಲವ್​ ಯು ರಚ್ಚು ಸಿನಿಮಾ

ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಅಭಿನಯದ ಬಹು ನಿರೀಕ್ಷಿತ 'ಲವ್‌ ಯು ರಚ್ಚು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

Love you rachchu movie trailer
Love you rachchu movie trailer
author img

By

Published : Dec 17, 2021, 2:07 AM IST

ಸ್ಯಾಂಡಲ್​​​ವುಡ್​ನಲ್ಲಿ ಫೋಟೋ ಶೂಟ್​ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ ಲವ್ ಯು ರಚ್ಚು. ಅಜಯ್​ ರಾವ್​ ಹಾಗೂ ರಚಿತಾ ರಾಮ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿರುವ ಚಿತ್ರ ಇದಾಗಿದೆ. ಚಿತ್ರದ ಪೋಸ್ಟರ್ ಹಾಗೂ ಹಾಡುಗಳಿಂದಲೇ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ಚಿತ್ರದ ಟ್ರೇಲರ್​​​ ಅನಾವರಣ ಮಾಡಲಾಗಿದೆ.

Love you rachchu movie trailer
'ಲವ್​​ ಯು ರಚ್ಚು ಟ್ರೇಲರ್ ರಿಲೀಸ್​​

ಆಂಜನೇಯನ ಮಹಾನ್ ಭಕ್ತ ಧ್ರುವ ಸರ್ಜಾ 'ಲವ್ ಯು ರಚ್ಚು' ಚಿತ್ರದ ಟ್ರೇಲರ್​​ ಲಾಂಚ್ ಮಾಡಿದ್ದಾರೆ. ಸದ್ಯ ಅಜಯ್ ರಾವ್ ಹಾಗೂ ರಚಿತಾ ರಾಮ್ ರೊಮ್ಯಾಂಟಿಕ್ ಕೆಮಿಸ್ಟ್ರಿ ವರ್ಕ್ ಔಟ್ ಆಗಿದೆ. ಟ್ರೇಲರ್​​​​ನಲ್ಲಿ ಮುದ್ದಾದ ಲವ್ ಸ್ಟೋರಿ, ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್​ ಎಲಿಮೆಟ್ಸ್​​ನೊಂದಿಗೆ ಮರ್ಡರ್ ಮಿಸ್ಟ್ರಿ ಕಥೆ ಒಳಗೊಂಡಿದೆ ಅನಿಸುತ್ತೆ. ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಗುರು ದೇಶಪಾಂಡೆ ನಿರ್ಮಿಸುತ್ತಿರುವ ಲವ್‌ ಯು ರಚ್ಚು ಚಿತ್ರಕ್ಕೆ ಶಂಕರ್‌ ಎಸ್‌. ರಾಜ್‌ ನಿರ್ದೇಶನವಿದೆ.

ಕೃಷ್ಣನ್‌ ಲವ್‌ಸ್ಟೋರಿ, ಕೃಷ್ಣಲೀಲಾ ಸಿನಿಮಾಗಳ ಸಕ್ಸಸ್‌ ನಂತರ ನಿರ್ದೇಶಕ ಶಶಾಂಕ್‌, ನಟ ಅಜೇಯ್‌ ರಾವ್‌ ಅವರಿಗಾಗಿಯೇ ಮಾಡಿಕೊಂಡಿದ್ದ ಕಥೆ ಇದಾಗಿದ್ದು, ಚಿತ್ರಕ್ಕೆ ಶಶಾಂಕ್‌ ಕಥೆಯ ಜೊತೆಗೆ ಚಿತ್ರಕಥೆ, ಸಂಭಾಷಣೆಯನ್ನ ಬರೆದಿದ್ದಾರೆ.

Love you rachchu movie trailer
ಬಹು ನಿರೀಕ್ಷಿತ 'ಲವ್‌ ಯು ರಚ್ಚು' ಚಿತ್ರ

ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಓಯ್ ಡಿಂಪಲ್ ಡಿಂಪಲ್ ಹುಡುಗಿ, ನಿನ್ನ ಡಾರ್ಲಿಂಗ್ ಅನ್ಬೋದಾ.. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ.. ಎಂಬ ಹಾಡು ಬಿಡುಗಡೆ ಆಗಿ ಸಿನಿ ಪ್ರಿಯರಿಂದ ಸಖತ್ ಮೆಚ್ಚುಗೆ ಪಡೆದಿದೆ. ನಿರ್ದೇಶಕ ಹಾಗೂ ಗೀತ ರಚನೆಕಾರ ಚೇತನ್ ಕುಮಾರ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ನವೀನ್ ಸಜ್ಜು ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ.

ಇದನ್ನೂ ಓದಿರಿ: ಭಾರತಕ್ಕೆ ಕಾಲಿಟ್ಟ ಭುವನ ಸುಂದರಿ ಹರ್ನಾಜ್ ಸಂಧುಗೆ ಕ್ವಾರಂಟೈನ್

ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಈ ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ಸ್‌ ಛಾಯಾಗ್ರಹಣ ಮತ್ತು ಸಂಕಲನವಿದೆ. ಸದ್ಯ ಲವ್ ಯು ರಚ್ಚು ಚಿತ್ರದ ಟ್ರೇಲರ್​​ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಇದೇ ಡಿಸೆಂಬರ್ 31ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಒಟ್ಟಿನಲ್ಲಿ ಅಜಯ್ ರಾವ್, ರಚಿತಾ ರಾಮ್ ಜೋಡಿ ವರ್ಕ್ ಔಟ್ ಆಗಿದ್ದು, ಸ್ಯಾಂಡಲ್​​ವುಡ್​ನಲ್ಲಿ ಹಿಟ್ ಆಗುವ ಲಕ್ಷಣಗಳು ಕಾಣ್ತಾ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.