ಲವ್ ಮಾಕ್ ಟೈಕ್ ಚಿತ್ರಮಂದಿರಗಳಿಗಿಂತ, ಡಿಜಿಟಲ್ ಪ್ಲಾಟ್ ಫಾರ್ಮ್ನಲ್ಲಿ ಸೂಪರ್ ಹಿಟ್ ಆದ ಸಿನಿಮಾ. ಮದರಂಗಿ ಸಿನಿಮಾ ಖ್ಯಾತಿಯ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ಚಿತ್ರ ಇದು. ಈ ಸಿನಿಮಾಕ್ಕೆ ಸ್ವತಃ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದಾರೆ.
ಇದೀಗ ಈ ಚಿತ್ರ ಲಾಕ್ ಡೌನ್ ಬಳಿಕ ರಿ ರಿಲೀಸ್ ಆಗ್ತಾ ಇರೋ ಮೊಟ್ಟ ಮೊದಲ ಚಿತ್ರವಾಗಿದೆ. ಹೌದು ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಾ ಇದ್ದ ಲವ್ ಮಾಕ್ ಟೈಲ್ ಚಿತ್ರ ಲಾಕ್ ಡೌನ್ ಇದ್ದ ಕಾರಣ ಪ್ರದರ್ಶನ ರದ್ದಾಗಿತ್ತು. 43 ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಲವ್ ಮಾಕ್ ಟೈಲ್ ಈಗ ಅಕ್ಟೋಬರ್ 16ರಂದು ರಿ ರಿಲೀಸ್ ಆಗುತ್ತಿರುವ ಮೊದಲ ಚಿತ್ರವಾಗಿದೆ.
ಈ ಸಿನಿಮಾನ್ನ ಬಿಗ್ ಸ್ಕ್ರೀನ್ನಲ್ಲಿ ನೋಡೋದಿಕ್ಕೆ ಆಗಲಿಲ್ಲ ಅಂತಾ ತುಂಬಾ ಜನ ಮೆಸೇಜ್ಗಳನ್ನ ಮಾಡಿದ್ರು. ಹೀಗಾಗಿ ಈ ಸಿನಿಮಾವನ್ನ ಮತ್ತೆ ರಿಲೀಸ್ ಮಾಡ್ತಾ ಇದ್ದೀವಿ ಅಂದ್ರು ನಿರ್ದೇಶಕ ಕಮ್ ನಟ ಕೃಷ್ಣ ಹೇಳಿದ್ದಾರೆ.
ಇನ್ನು ಮಿಲನಾ ನಾಗರಾಜ್ ಮಾತನಾಡಿ, ಥಿಯೇಟರ್ನಲ್ಲಿ ಮತ್ತೆ ಜನರು ಈ ಸಿನಿಮಾ ನೋಡ್ತಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.