ETV Bharat / sitara

ತಿಥಿ ಮಾದರಿಯ 'ಫುಲ್ ಟೈಟ್ ಪ್ಯಾತೆ' ಸಿನಿಮಾಗೆ ಯೋಗಿ ಸಪೋರ್ಟ್: ಜು. 12ಕ್ಕೆ ಚಿತ್ರ ತೆರೆಗೆ

ಹೊಸಬರೇ ಸೇರಿ ತಯಾರಿಸಿರುವ ತಿಥಿ ಮಾದರಿಯ 'ಫುಲ್ ಟೈಟ್ ಪ್ಯಾತೆ' ಸಿನಿಮಾ ಜುಲೈ 12ರಂದು ತೆರೆಗೆ ಬರುತ್ತಿದೆ. ಲೂಸ್ ಮಾದ ಖ್ಯಾತಿಯ ಯೋಗೀಶ್ ಸಿನಿಮಾ ಟ್ರೇಲರ್ ನೋಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

'ಫುಲ್ ಟೈಟ್ ಪ್ಯಾತೆ'
author img

By

Published : Jul 9, 2019, 9:54 PM IST

'ತಿಥಿ' ಸಿನಿಮಾ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆದ ಸಿನಿಮಾ. ಇದೀಗ 'ತಿಥಿ' ಮಾದರಿಯಲ್ಲೇ ಪಕ್ಕಾ ಮಳವಳ್ಳಿ ಸ್ಲ್ಯಾಂಗ್ ಹೊಂದಿರುವ 'ಫುಲ್ ಟೈಟ್ ಪ್ಯಾತೆ' ಎಂಬ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ.

'ಫುಲ್ ಟೈಟ್ ಪ್ಯಾತೆ' ತಂಡಕ್ಕೆ ಯೋಗೇಶ್ ವಿಶ್

ಟೈಟಲ್‌ ಕೇಳಿದರೆ ವಿಚಿತ್ರ ಎನಿಸಿದರೂ ಸಿನಿಮಾ ನೋಡಿದರೆ ಶೀರ್ಷಿಕೆ ಬಗ್ಗೆ ಅರ್ಥ ಸಿಗಲಿದೆ. ಹೊಸಬರೇ ಸೇರಿ ತಯಾರಿಸಿರುವ ಈ ಚಿತ್ರವನ್ನು ನಟ ಯೋಗೀಶ್ ಬೆಂಬಲಿಸಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ನೋಡಿ ಯೋಗಿ ಈ ಸಿನಿಮಾಗೆ ಸಪೋರ್ಟ್ ಮಾಡಿದ್ದಾರೆ. ಚಿತ್ರದ ಟೈಟಲ್​​​ಗೆ ಬೋಲ್ಡ್ ಆಗಿರುವ ಯೋಗೀಶ್​​​ ಇದು ಕೂಡಾ 'ತಿಥಿ' ಮಾದರಿಯ ಸಿನಿಮಾ ಆಗಲಿ ಎಂದು ಹೊಸಬರ ತಂಡಕ್ಕೆ ವಿಶ್ ಮಾಡಿದ್ದಾರೆ.

biradar
ಬಿರಾದಾರ್

ಚಿತ್ರದುದ್ದಕ್ಕೂ ಮಳವಳ್ಳಿ ಭಾಷೆಯೇ ಹೈಲೈಟ್‌ ಆಗಿರುವುದು ವಿಶೇಷ. ಅದರಲ್ಲೂ ಇದೊಂದು ನೈಜ ಘಟನೆ ಕುರಿತಾದ ಚಿತ್ರ. ಎಸ್​​​.ಎಲ್​.ಜಿ. ಪುಟ್ಟಣ್ಣ ಎಂಬುವವರು ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ನಟನೆ ಕೂಡಾ ಮಾಡಿದ್ದಾರೆ. ಹಾಸ್ಯ ನಟ ಬಿರಾದಾರ ತಂದೆ ಪಾತ್ರ ಮಾಡಿದ್ದಾರೆ. ಪುಟ್ಟಣ್ಣನಿಗೆ ನಾಯಕಿಯಾಗಿ ಮಾನಸ ಗೌಡ ನಟಿಸಿದ್ದಾರೆ. ಚಿತ್ರಕ್ಕೆ ಮಹೇಶ್ ಶ್ರೀಧರ್ ಕ್ಯಾಮರಾ ವರ್ಕ್ ಇದೆ. ಸಿನಿಮಾ ಜುಲೈ 12ರಂದು ಬಿಡುಗಡೆಯಾಗುತ್ತಿದೆ.

full tight

Intro: ತಿಥಿ ಮಾದರಿಯ ಪುಲ್ ಟೈಟ್ ಪ್ಯಾತೆ ಚಿತ್ರಕ್ಕೆ ಲೂಸ್ ಮಾದ ಯೋಗಿ ಸರ್ಪೋರ್ಟ್!

ತಿಥಿ ಸಿನಿಮಾ ಕನ್ನಡ ಚಿತ್ರರಂಗ ಅಲ್ಲದೆ ಭಾರತೀಯ, ಚಿತ್ರರಂಗದಲ್ಲಿ ಗಮನ ಸೆಳೆದ ಸಿನಿಮಾ..ಇದೀಗ ಈ ಮಾದರಿಯ ಪಕ್ಕಾ ಮಳ್ಳವಳ್ಳಿ ಸ್ಲ್ಯಾಂಗ್ ಹೊಂದಿರುವ, ಪುಲ್ ಟೈಟ್ ಪ್ಯಾತೆ ಸಿನಿಮಾ, ಟೈಟಲ್‌ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರೋ, ಹೊಸಬರೇ ಸೇರಿ ಮಾಡಿರುವ ಪುಲ್ ಟೈಟ್ ಪ್ಯಾತೆ ಚಿತ್ರಕ್ಕೆ, ಲೂಸ್ ಮಾದ ಯೋಗೇಶ್
ಸಿನಿಮಾದ, ಟ್ರೈಲರ್ ಹಾಡುಗಳನ್ನು ನೋಡಿ, ಈ ಸಿನಿಮಾಗೆ ಸಪೋರ್ಟ್ ಮಾಡ್ತಾ ಇದ್ದಾರೆ..ಈ ಚಿತ್ರದ ಟೈಟಲ್ ಗೆ ಬೋಲ್ಡ್ ಆಗಿರುವ ಯೋಗೇಶ್ ಇದು ಕೂಡ ಮಾದರಿಯ ಸಿನಿಮಾ ಆಗುತ್ತೆ ಅಂತಾ ಹೊಸ ತಂಡಕ್ಕೆ ಗುಡ್ ಲಕ್ ಹೇಳಿದ್ರು.. ಈ ಚಿತ್ರದ ವಿಶೇಷವೆಂದರೆ, ಚಿತ್ರದುದ್ದಕ್ಕೂ ಮಳವಳ್ಳಿ ಭಾಷೆಯೇ ಹೈಲೈಟ್‌. ಅದರಲ್ಲೂ ಇದೊಂದು ನೈಜ ಘಟನೆ ಕುರಿತಾದ ಚಿತ್ರ..ಚಾಲಕನಾಗಿರೋ ಎಸ್, ಎಲ್ ,ಜಿ ಪುಟ್ಟಣ್ಣ, ನಟನೆ, ನಿರ್ದೇಶನ ಹಾಗು ನಿರ್ಮಾಣ ಮಾಡಿದ್ದಾರೆ.Body:ಈ ಯುವ ನಟನಿಗೆ ಕರುನಾಡ ಸೇವ ಕಾರ್ಯಕರ್ತ ರಾಜ್, ಹೆಚ್ಚಾಗಿ ಹಳ್ಳಿ ಕಥೆ ಆಧರಿತ ಚಿತ್ರಗಳೇ ಗೆದ್ದಿರೋದು, ಈ ಸಿನಿಮಾ ಕೂಡ ಗೆಲ್ಲುವ ಸೂಚನೆ ಇದೆ ಅಂತಾ ರಾಜ್ ಹೇಳಿದ್ರು..ಇನ್ನು ಎಸ್ ,ಎಲ್ ,ಜಿ ಪುಟ್ಟಣ್ಣ ಮಾತನಾಡಿ ಈ ಸಿನಿಮಾ ಕಥೆ ,ನನ್ನ ಅಜ್ಜಿ ಊರಲ್ಲೊಬ್ಬ ಕುಡುಕನಿದ್ದ. ಅವನ ಬಗ್ಗೆ ಕುತೂಹಲವಿತ್ತು. ಅಜ್ಜಿ ಅವನ ಬಗ್ಗೆ ಸಾಕಷ್ಟು ಹೇಳಿದ್ದರು. ಅವನ ಲೈಫ‌ಲ್ಲಿ ಒಂದಷ್ಟು ಸಮಸ್ಯೆಗಳು ಬಂದಿದ್ದರಿಂದ ಅವನು ಕುಡಿತಕ್ಕೆ ದಾಸನಾಗಿ, ಇಂದಿಗೂ ಹಾಸ್ಯ ಮಾಡಿಕೊಂಡೇ ತಿರುಗುತ್ತಾನೆ. ಎದೆಯಲ್ಲಿ ನೋವಿದ್ದರೂ, ಹೊರಗಡೆ ನಗುತ್ತಲೇ ಇರುವಂತಹ ವ್ಯಕ್ತಿಯ ಕಥೆ ಇದು ಅಂತಾರೆ..ಖ್ಯಾತ ಹಾಸ್ಯ ನಟ ಬಿರಾದಾರ್ ತಂದೆ ಪಾತ್ರ ಮಾಡಿದ್ದಾರೆ.. ನಟನೆ,ನಿರ್ದೇಶನ ಮಾಡಿರೋ ಪುಟ್ಟಣ್ಣನಿಗೆ ನಾಯಕಿಯಾಗಿ ಮಾನಸ ಗೌಡ ಆಕ್ಟ್ ಮಾಡಿದ್ದಾರೆ..ಈ ಚಿತ್ರಕ್ಕೆ ಮಹೇಶ್ ಶ್ರೀಧರ್ ಕ್ಯಾಮೆರಾ ವರ್ಕ್ ಇದ್ದು,ರೇಂಜ್ ಎಂ,ವಿ ಸಂಗೀತ ನೀಡಿದ್ದಾರೆ.. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಪುಲ್ ಟೈಟ್ ಪ್ಯಾತೆ ಇದೇ 12ಕ್ಕೆ ರಿಲೀಸ್ ಆಗಿದೆ..ವಿಚಿತ್ರ ಅಂದ್ರೆ ಹೀರೋ ಒಬ್ರನ್ನ ಹೊರತು ಪಡಿಸಿ, ನಟಿ ತಂತ್ರಜ್ಞಾನರು ಬಂದಿಲ್ಲ ಅನ್ನೋದು ಬೇಸರದ ಸಂಗತಿ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.