ಹೈದ್ರಾಬಾದ್ : ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮುಂದಿನ ವರ್ಷದ ಆಗಸ್ಟ್ 25ರಂದು ಚಿತ್ರ ತೆರೆ ಮೇಲೆ ಅಪ್ಪಳಿಸಲಿದೆ ಎಂದು ಚಿತ್ರದ ನಿರ್ಮಾಪಕ ಕರಣ್ ಜೋಹರ್ ತಿಳಿಸಿದ್ದಾರೆ.
'ಪೋಕಿರಿ' 'ಇಸ್ಮಾರ್ಟ್ ಶಂಕರ್'ನಂತಹ ಹಿಟ್ ಸಿನಿಮಾ ನೀಡಿರುವ ಸ್ಟಾರ್ ಡೈರೆಕ್ಟ್ ಪುರಿ ಜಗನ್ನಾಥ್ ಚಿತ್ರವನ್ನು ನಿರ್ದೇಶಿಸಿದ್ದು, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕರಣ್ ಜೋಹರ್ 'ಆ್ಯಕ್ಷನ್, ಥ್ರಿಲ್ಲರ್ ಮತ್ತು ಮ್ಯಾಡ್‌ನೆಸ್' ಲೈಗರ್ ಸಿನಿಮಾ ಆಗಸ್ಟ್ 25, 2022ಕ್ಕೆ ಜಗತ್ತಿನಾದ್ಯಂತ ತೆರೆ ಕಾಣಲಿದೆ. ಡಿಸೆಂಬರ್ 31ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ಟ್ಟೀಟ್ ಮಾಡಿದ್ದಾರೆ.
-
THE ACTION, THE THRILL & THE MADNESS - it’s going to be a total knockout! #Liger arrives in theatres worldwide on 25th August, 2022. #LigerOnAug25th2022
— Karan Johar (@karanjohar) December 16, 2021 " class="align-text-top noRightClick twitterSection" data="
Catch the first glimpse on 31st Dec and start your new year with a BANG!💥 pic.twitter.com/dj1TBgVbUW
">THE ACTION, THE THRILL & THE MADNESS - it’s going to be a total knockout! #Liger arrives in theatres worldwide on 25th August, 2022. #LigerOnAug25th2022
— Karan Johar (@karanjohar) December 16, 2021
Catch the first glimpse on 31st Dec and start your new year with a BANG!💥 pic.twitter.com/dj1TBgVbUWTHE ACTION, THE THRILL & THE MADNESS - it’s going to be a total knockout! #Liger arrives in theatres worldwide on 25th August, 2022. #LigerOnAug25th2022
— Karan Johar (@karanjohar) December 16, 2021
Catch the first glimpse on 31st Dec and start your new year with a BANG!💥 pic.twitter.com/dj1TBgVbUW
mike tyson liger film : ಚಿತ್ರದಲ್ಲಿ ವಿಜಯ್ ಜೊತೆ ಅನನ್ಯಾ ಪಾಂಡೆ ಮತ್ತು ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಅಭಿನಯಿಸಿದ್ದಾರೆ. ವಿಜಯ್ ದೇವರಕೊಂಡ ಅವರು ಬಾಕ್ಸರ್ ಪಾತ್ರ ನಿರ್ವಹಿಸುತ್ತಿದ್ದು, ಟೈಸನ್ ಪಾತ್ರದ ಬಗ್ಗೆ ಇದುವರೆಗೂ ಚಿತ್ರ ತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಇಬ್ಬರೂ ಬಾಕ್ಸಿಂಗ್ ರಿಂಗ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ.