ETV Bharat / sitara

ಲಹರಿ ತೆಕ್ಕೆಗೆ ಮೆಗಾಸ್ಟಾರ್ ಚಿರಂಜೀವಿ ‘ಸೈ ರಾ ನರಸಿಂಹ ರೆಡ್ಡಿ‘ ಹಾಡುಗಳು - ರೌಡಿ ಅಲ್ಲುಡು

ರಾಮ್​ಚರಣ್ ತೇಜ ನಿರ್ಮಾಣದಲ್ಲಿ ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿರುವ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದ ಎಲ್ಲ ಭಾಷೆಗಳ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ. ಈ ವಿಷಯವನ್ನು ಲಹರಿ ಸಂಸ್ಥೆಯ ವೇಲು ಹೇಳಿಕೊಂಡಿದ್ದಾರೆ.

‘ಸೈ ರಾ ನರಸಿಂಹ ರೆಡ್ಡಿ‘
author img

By

Published : Sep 13, 2019, 3:08 PM IST

‘ಲಹರಿ’ ಕನ್ನಡ ಚಲನಚಿತ್ರ ಉದ್ಯಮದ ಜನಪ್ರಿಯ ಆಡಿಯೋ ಸಂಸ್ಥೆ. ಲಹರಿ ಸ್ಥಾಪನೆಯಾಗಿ ಸುಮಾರು 40 ವರ್ಷಗಳೇ ಕಳೆದಿವೆ. ಅಂದಿನಿಂದ ಇಂದಿನವರೆಗೆ ಬಹಳಷ್ಟು ಬಿಗ್​​​ ಬಜೆಟ್​​​​​ ಚಿತ್ರಗಳ ಹಾಡುಗಳ ಹಕ್ಕನ್ನು ಈ ಸಂಸ್ಥೆ ಪಡೆದಿದೆ.

Sye ra narasimhareddy
‘ಸೈ ರಾ ನರಸಿಂಹ ರೆಡ್ಡಿ’

ಇತ್ತೀಚಿಗೆ ‘ಕೆಜಿಎಫ್​​​’ ಐದೂ ಭಾಷೆಗಳ ಧ್ವನಿಸುರಳಿ ಹಕ್ಕನ್ನು ಲಹರಿ ಪಡೆದಿತ್ತು. ಈಗ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಎಲ್ಲ ಭಾಷೆಯ ಹಾಡುಗಳ ಹಕ್ಕನ್ನು ಲಹರಿ ಸಂಸ್ಥೆ ಪಡೆದಿದೆ. ಈ ವಿಚಾರವನ್ನು ಲಹರಿ ವೇಲು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳ ಹಕ್ಕಿಗೆ ದೊಡ್ಡ ಮೊತ್ತವನ್ನು ನೀಡಿದ್ದೇವೆ ಎಂದು ವೇಲು ಹೇಳಿಕೊಂಡಿದ್ದಾರೆ. ಲಹರಿ ಸಂಸ್ಥೆ ಚಿರಂಜೀವಿ ಅಭಿನಯದ ತೆಲುಗು ಸಿನಿಮಾಗಳಾದ ಘರಾನಾ ಮೊಗುಡು, ಮುಠಾಮೇಸ್ತ್ರಿ, ಗ್ಯಾಂಗ್ ಲೀಡರ್, ಮುಗ್ಗುರು ಮುನಗಾಳ್ಳು, ಸ್ವಯಂಕೃಷಿ, ರೌಡಿ ಅಲ್ಲುಡು, ಕೈದಿ ನಂ 150 ಸಿನಿಮಾಗಳ ಆಡಿಯೋ ಹಕ್ಕನ್ನು ಪಡೆದುಕೊಂಡಿತ್ತು. ಪ್ರಿನ್ಸ್ ಮಹೇಶ್ ಬಾಬು ಅವರ ನೆನೊಕ್ಕಡೇನೆ, ಆಗಡು ಸಿನಿಮಾಗಳ ಆಡಿಯೋಗಳನ್ನು ಕೂಡಾ ಟಿ-ಸೀರೀಸ್ ಸಹಯೋಗದಲ್ಲಿ ಪಡೆದುಕೊಂಡಿತ್ತು. ಇದೀಗ ‘ಸರಿಲೇರು ನೀಕೆವರು‘ ಹಕ್ಕನ್ನು ಕೂಡಾ ಲಹರಿ ಸಂಸ್ಥೆಯೇ ಪಡೆದುಕೊಂಡಿದೆ.

ಲಹರಿ ತೆಕ್ಕೆಗೆ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಹಾಡುಗಳು

ಕನ್ನಡ ಚಲನಚಿತ್ರ ಉಧ್ಯಮದಲ್ಲಿ ಜನಪ್ರಿಯ ರೆಕಾರ್ಡಿಂಗ್ ಸಂಸ್ಥೆ ಲಹರಿ. ಆಗಿನಿಂದ ಇಂದಿನ ವರೆಗೆ 40 ಪ್ಲಸ್ ವರ್ಷಗಳಲ್ಲಿ ಆನೆಕೆ ದೊಡ್ಡ ಪರಭಾಷಾ ಚಿತ್ರಗಳ ಹಾಡುಗಳ ಹಕ್ಕನ್ನು ಈ ಸಂಸ್ಥೆ ಪಡೆದಿದೆ.

ಇತ್ತೀಚಿಗೆ ಕೆ ಜಿ ಎಫ್ ಎಲ್ಲ ಭಾಷೆಗಳ ಧ್ವನಿ ಸುರುಳಿ ಹಕ್ಕು ಸಹ ಪಡೆದಿತ್ತು. ಈಗ ಮತ್ತೊಂದು ತೆಲುಗು ಸಿನಿಮಾ ಮೆಗಾ ಸ್ಟಾರ್ ಚಿರಂಜೀವಿ ಅವರ ಅಭಿನಯದ ಚಿತ್ರ ಸೈರಾ ನರಸಿಂಹ ರೆಡ್ಡಿ ಎಲ್ಲ ಭಾಷೆಯ ಹಾಡುಗಳ ಹಕ್ಕನ್ನು ಲಹರಿ ಸಂಸ್ಥೆ ಪಡೆದಿದೆ.

ಈ ವಿಚಾರವನ್ನು ಲಹರಿ ವೇಲು ಅವರು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ. ದೊಡ್ಡ ಮೊತ್ತವನ್ನು ಈ ಚಿತ್ರದ ಹಾಡುಗಳ ಹಕ್ಕಿಗೆ ನಿಡಿದ್ದೇವೆ ಎಂದು ಲಹರಿ ವೇಲು ಅವರು ಹೇಳಿಕೊಂಡಿದ್ದಾರೆ.

ಲಹರಿ ಸಂಸ್ಥೆ ಆಗಿನ ಕಾಲದಲ್ಲೇ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ತೆಲುಗು ಸಿನಿಮಗಳಾದ ಘರಾನಾ ಮೊಗಡು, ಮುಟ್ಟಾ ಮೇಸ್ತ್ರಿ, ಗ್ಯಾಂಗ್ ಲೀಡರ್, ಮುಗ್ಗುರು ಮನಗದು, ಸ್ವಯಂ ಕೃಷಿ, ರೌಡಿ ಅಲ್ಲುಡು, ಕೈದಿ ನಂ 150...ಅಂತಹ ಸಿನಿಮಾಗಳ ಹಕ್ಕನ್ನು ಪಡೆದುಕೊಂಡಿತ್ತು. ಇತ್ತೀಚಿಗೆ ಪ್ರಿನ್ಸ್ ಮಹೇಶ್ ಬಾಬು ಅವರ ನಂ 1, ಆಗಡು, ಇತ್ತೀಚಿನ ಸರಿಳೆದು ನೀಕ್ಕೆವರು ಸಿನಿಮಾಗಳನ್ನು ಸಹ ಲಹರಿ ಸಂಸ್ಥೆ ಟಿ ಸೀರೀಸ್ ಸಹಯೋಗದಲ್ಲಿ ಪಡೆದುಕೊಂಡಿತ್ತು. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.