ETV Bharat / sitara

ಮಧ್ಯರಾತ್ರಿಯೇ ಶುರುವಾಯಿತು ದುರ್ಯೋಧನ ದರ್ಬಾರ್...ಡಿ ಬಾಸ್​ ಕಟೌಟ್​ಗೆ ಹಾಲಿನ ಅಭಿಷೇಕ - ದುರ್ಯೋಧನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದ್ದು, ಅಭಿಮಾನಿಗಳು ಮಧ್ಯರಾತ್ರಿಯೇ ಚಿತ್ರ ವೀಕ್ಷಿಸಿ ದುರ್ಯೋಧನನಿಗೆ ವಿಶೇಷವಾಗಿ ಸ್ವಾಗತಿಸಿದ್ದಾರೆ.

kurukshetra movie release fans dance in theater
author img

By

Published : Aug 9, 2019, 2:44 AM IST

Updated : Aug 9, 2019, 7:38 AM IST

ಬೆಂಗಳೂರು: ಬಾಕ್ಸ್ ಆಫೀಸ್ ಸುಲ್ತಾನ​ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಶುಕ್ರವಾರ ಬಿಡುಗಡೆಗೊಳ್ಳುತ್ತಿದ್ದು, ದರ್ಶನ್​ ಅಭಿಮಾನಿಗಳು ಮಧ್ಯರಾತ್ರಿಯೇ ಚಿತ್ರ ವೀಕ್ಷಿಸುವ ಮೂಲಕ ದುರ್ಯೋಧನನಿಗೆ ವಿಶೇಷವಾಗಿ ಸ್ವಾಗತ ಕೋರಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಶ್ರೀಸಿದ್ಧೇಶ್ವರ ಚಿತ್ರಮಂದಿರದಲ್ಲಿ ರಾತ್ರಿ ಒಂದು ಗಂಟೆಗೆ ಕುರುಕ್ಷೇತ್ರ ಚಿತ್ರದ ಪ್ರದರ್ಶನ ಆರಂಭವಾಗಿದ್ದು, ಮಳೆ-ಚಳಿಯನ್ನು ಲೆಕ್ಕಿಸದ ಅಭಿಮಾನಿಗಳು, ಚಿತ್ರ ನೋಡಲು ಚಿತ್ರಮಂದಿರದ ಮುಂದೆ ಸಾಗರೋಪಾದಿಯಲ್ಲಿ ಜಮಾಯಿಸಿದ್ದರು.

ಮಧ್ಯರಾತ್ರಿ ಕುರುಕ್ಷೇತ್ರ ವೀಕಕ್ಷಿಸಿದ ಅಭಿಮಾನಿಗಳು

ಇನ್ನು ಸುಯೋಧನನ ಅಬ್ಬರವನ್ನು ನೋಡಲು ಹೆಣ್ಣು ಮಕ್ಕಳೂ ಚಿತ್ರಮಂದಿರಕ್ಕೆ ಬಂದಿದ್ದು ವಿಶೇಷವಾಗಿತ್ತು. ಚಿತ್ರಮಂದಿರದ ಬಳಿ ದಾಸನ ಕಟೌಟ್​​ಗೆ ಹಾಲಿನ‌ ಅಭಿಷೇಕ ಮಾಡಿ ಇಡುಗಾಯಿ ಹೊಡೆದು ಸಂಭ್ರಮಿಸಿದರು.

ಪರದೆಯ ಮೇಲೆ ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಕನ್ನಡ ಚಿತ್ರರಂಗದಲ್ಲೇ ಯಾರೇ ಆಗಲಿ, ದಾಸನ ರೀತಿ ದುರ್ಯೋಧನನಾಗಿ ಅಬ್ಬರಿಸಲು ಸಾಧ್ಯವಿಲ್ಲ. ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗಿರುವುದು ಕರುನಾಡಿನ ಹಬ್ಬ. ಇದು ಕರುನಾಡಿನ ಉತ್ಸವ ಎಂದು ದಚ್ಚು ಅಭಿಮಾನಿಗಳು ಹುಚ್ಚೆದು ಕುಣಿದರು.

Intro: ಭಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರದ ಫ್ಯಾನ್ಸ್ಗಳ ವಿಶೇಷ ಶುರುವಾಗಿದೆ‌. ಜೆಪಿ ನಗರದ ಶ್ರೀ ಸಿದ್ಧೇಶ್ವರ ಚಿತ್ರಮಂದಿರದಲ್ಲಿ ರಾತ್ರಿ ಒಂದು ಗಂಟೆಗೆ ಕುರುಕ್ಷೇತ್ರ ಚಿತ್ರದ ಪ್ರದರ್ಶನ ಆರಂಭವಾಗಿದೆ. ಇನ್ನು ಹೆಚ್ಚು ಅಭಿಮಾನಿಗಳು ಕುರುಕ್ಷೇತ್ರ ಚಿತ್ರವನ್ನು ಚಳಿ ಮಳೆಯನ್ನು ಲೆಕ್ಕಿಸದೆ ಬಹಳ ಹುಮ್ಮಸ್ಸಿನಿಂದಲೇ ಬಂದಿದ್ದಾರೆ.

ಸತೀಶ ಎಂಬಿ

Body:ಇನ್ನು ಸುಯೋಧನನ ಅಬ್ಬರವನ್ನು ನೋಡಲು ಹೆಣ್ಣು ಮಕ್ಕಳು ಸಹ ಚಿತ್ರಮಂದಿರಕ್ಕೆ ಬಂದಿದ್ದು ವಿಶೇಷವಾಗಿತ್ತು. ಸಿದ್ದಲಿಂಗೇಶ್ವರ ಚಿತ್ರಮಂದಿರದ ಬಳಿ ದಾಸನ ಭಕ್ತಗಣ ದಾಸನ ಕಟೌಟ್ ಗೆ ಹಾಲಿನ‌ ಅಭಿಷೇಕ ಮಾಡಿ ಇಡುಗಾಯಿ ಹೊಡೆದು ಸಂಭ್ರಮಿಸಿದ್ರು.ಅಲ್ಲದೆ ಸ್ಕೀನ್ ಮೇಲೆ ದರ್ಶನ್ ಎಂಟ್ರಿಗೆ ದರ್ಶನ್ ಅಭಿಮಾನಿಗಳು ಚಿತ್ರಮಂದಿರದಲ್ಲೇ ಹುಚ್ಚೆದ್ದು ಕುಣಿದ್ರು.ಅಲ್ಲದೆ ಕನ್ನಡ ಚಿತ್ರರಂಗದಲ್ಲೇ ಯಾರು ದಾಸ ರೀತಿ ದುರ್ಯೋಧನನಾಗಿ ಅಬ್ಬರಿಸಲು ಸಾಧ್ಯವಿಲ್ಲ.ಅಲ್ಲದೆ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗಿರುವುದ ಕರುನಾಡಿನ ಹಬ್ಬ.ಅಲ್ಲದೆ ಇದನ್ನು ಕರುನಾಡಿನ ಉತ್ಸವದ ರೀತಿ ಆಚರಿಸುತ್ತೇವೆ ಎಂದು ದಚ್ಚು ಅಭಿಮಾನಿಗಳು ಥಿಯೇಟರ್ ಮುಂದೆ ಹುಚ್ಚೆದು ಕುಣಿದು. ಮಧ್ಯರಾತ್ರಿ ದುರ್ಯೋಧನನ್ನು ಅದ್ದೂರಿಯಾಗಿ ಸ್ವಾಗತಿಸಿದ್ರು.

Conclusion:
Last Updated : Aug 9, 2019, 7:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.