ETV Bharat / sitara

‘ಬಿಲ್ಲ ರಂಗ ಭಾಷಾ’ಗೂ ಮುನ್ನ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚನ ಮತ್ತೊಂದು ಸಿನಿಮಾ..! - undefined

ಅನೂಪ್ ಭಂಡಾರಿ ನಿರ್ದೇಶನದ ಜ್ಯಾಕ್ ಮಂಜುನಾಥ್ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಕಿಚ್ಚ ಸುದೀಪ್​​ ನಟಿಸುತ್ತಿದ್ದು ಈ ಸಿನಿಮಾ ನಂತರ ‘ಬಿಲ್ಲ ರಂಗ ಭಾಷಾ’ ಸೆಟ್ಟೇರಲಿದೆ ಎನ್ನಲಾಗಿದೆ.

ಅನೂಪ್, ಕಿಚ್ಚ
author img

By

Published : Jul 16, 2019, 4:00 PM IST

ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಚಿತ್ರ ಬಹುನಿರೀಕ್ಷೆ ಹುಟ್ಟಿಸಿದೆ. ಅಗಸ್ಟ್​ 29 ರಂದು ಪೈಲ್ವಾನ್‌ ಸಿನಿಮಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ​'ಪ್ರಮೋಷನ್ ಮಾಡೋದರಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಕಿಚ್ಚ ಅವರು 'ಕೋಟಿಗೊಬ್ಬ-3' ಸಿನಿಮಾ ಚಿತ್ರೀಕರಣದಲ್ಲೂ ಕೂಡಾ ತೊಡಗಿಸಿಕೊಂಡಿದ್ದು, ಈಗ ಹೈದರಾಬಾದ್​​​ನಲ್ಲಿ ನೆಲೆಸಿದ್ದಾರೆ.

manjunath
ನಿರ್ಮಾಪಕ ಜ್ಯಾಕ್ ಮಂಜುನಾಥ್

ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಸೆಟ್ ಕೂಡಾ ಹಾಕಲಾಗಿದೆ. ಚಿತ್ರದ ಪ್ರಮುಖ ಸಾಹಸ ದೃಶ್ಯಗಳೊಂದಿಗೆ ಮಾತಿನ ಭಾಗದ ಚಿತ್ರೀಕರಣ ಕೂಡಾ ನಡೆಯುತ್ತಿದೆ. ಬಿಡುವಿನ ವೇಳೆ ಸುದೀಪ್ ಕೆಲ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಅನೂಪ್ ಭಂಡಾರಿ ಅವರ ‘ಬಿಲ್ಲ ರಂಗ ಭಾಷಾ’ ಸದ್ಯಕ್ಕೆ ಸೆಟ್ಟೇರುತ್ತಿಲ್ಲ. ಆದರೆ, ಇದೇ ವರ್ಷ ಅಕ್ಟೋಬರ್​​​ನಲ್ಲಿ ಅನೂಪ್ ಭಂಡಾರಿ ಅವರ ನಿರ್ದೇಶನದ ಹಾಗೂ ಜ್ಯಾಕ್ ಮಂಜುನಾಥ್ ನಿರ್ಮಾಣದ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ. ಸುದೀಪ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ’ಬಿಲ್ಲಾ ರಂಗ ಭಾಷಾ’ ಸೆಟ್ಟೇರಲಿದೆಯಂತೆ.

anup
ನಿರ್ದೇಶಕ ಅನೂಪ್ ಭಂಡಾರಿ

ಸದ್ಯಕ್ಕೆ ಜ್ಯಾಕ್ ಮಂಜುನಾಥ್ ಅವರು ಸುದೀಪ್ ಅವರ ಗೆಟಪ್​​, ವಸ್ತ್ರಾಲಂಕಾರ, ಚಿತ್ರೀಕರಣದ ಸ್ಥಳಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಜೊತೆ ಸೇರಿ ಜ್ಯಾಕ್ ಮಂಜುನಾಥ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ನಿರ್ಮಿಸಿದ್ದರು. ಈಗ ಈ ಪೂರ್ಣ ಪ್ರಮಾಣದ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ‘ದಬಾಂಗ್- 3’ ಸಿನಿಮಾದಲ್ಲಿ ಕಿಚ್ಚ ನಟಿಸುತ್ತಿದ್ದು, ಅದಕ್ಕೂ ಕೂಡಾ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಜ್ಯಾಕ್ ಮಂಜು ಕಿಚ್ಚ ಸುದೀಪ್ ಮುಂದಿನ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ

ಕಿಚ್ಚ ಸುದೀಪ್ ಭರ್ಜರಿ ಖುಷಿ ಮೂಡ್ ಅಲ್ಲಿ ಇದ್ದಾರೆ. ವೃತ್ತಿ ಜೀವನದಲ್ಲಿ ಪಟ್ಟ ಕಷ್ಟದಲ್ಲಿ ಅತಿ ಹೆಚ್ಚು ಅಂದರೆ ಪೈಲ್ವಾನ್ ಸಿನಿಮಾಕ್ಕೆ ಎನ್ನುವ ಅವರು ಕೋಟಿಗೊಬ್ಬ 3 ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಹೈದರಾಬಾದಿನಲ್ಲಿ ಒಂದು ಮನೆ ಸಹ ಮಾಡಿಕೊಂಡಿದ್ದಾರೆ. ಹೈದರಾಬಾದಿನಲ್ಲಿ 2 ಕೋಟಿ ವೆಚ್ಚದಲ್ಲಿ ಸೆಟ್ ಸಹ ಹಾಕಲಾಗಿದೆ. ಇಲ್ಲಿ ಚಿತ್ರದ ಪ್ರಮುಖ ಸಾಹಸ ಜೊತೆ ಮಾತಿನ ಭಾಗದ ಚಿತ್ರೀಕರಣ ಸಹ ನಡೆಯಲಿದೆ.

ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾದ ಅನೇಕ ಸಂದರ್ಭಗಳನ್ನು ಬಿಚ್ಚಿಡುತ್ತಾ ಹೋದರು. ಅತ್ತ ಕಡೆ ಅವರ ನೆಚ್ಚಿನ ಸ್ನೇಹಿತ ಜ್ಯಾಕ್ ಮಂಜುನಾಥ್ ಅವರ ಮುಂದಿನ ಸಿನಿಮಾ ಬಗ್ಗೆ ಕೆಲವು ವಿಚಾರಗಳನ್ನು ಬಹಿರಂಗಪಡಿಸಿದರು.

ಅಂದಹಾಗೆ ಅನೂಪ್ ಭಂಡಾರಿ ಅವರ ಬಿಲ್ಲ ರಂಗ ಭಾಷಾ ಸಧ್ಯಕ್ಕೆ ಸೆಟ್ಟೇರುತ್ತಾ ಇಲ್ಲ. ಇದೆ ವರ್ಷದ ಅಕ್ಟೋಬರ್ ಅಲ್ಲಿ ಅನೂಪ್ ಭಂಡಾರಿ ಅವರೇ ನಿರ್ದೇಶನ ಹಾಗೂ ಜ್ಯಾಕ್ ಮಂಜುನಾಥ್ ನಿರ್ಮಾಣದ ಚಿತ್ರ ಕಿಚ್ಚ ಸುದೀಪ್ ಮುಖ್ಯ ತಾರಾಗಣದಲ್ಲಿ ಸೆಟ್ಟೇರುತ್ತಾ ಇದೆ. ಈ ಚಿತ್ರ ಆದ ನಂತರ ಬಿಲ್ಲ ರಂಗ ಬಾಶ ಎಂದು ತಿಳಿಸಿದ್ದಾರೆ.

ಸಧ್ಯಕ್ಕೆ ಜ್ಯಾಕ್ ಮಂಜುನಾಥ್ ಅವರು ಸುದೀಪ್ ಅವರ ಗೆಟ್ ಅಪ್, ವಸ್ತ್ರಲಂಕಾರ, ಚಿತ್ರೀಕರಣದ ಸ್ಥಳಗಳ ಬಗ್ಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಜೊತೆ ಸೇರಿ ಜ್ಯಾಕ್ ಮಂಜುನಾಥ್ ಅಂಬಿ ನಿಂಗ್ ವಯಸ್ಸಾಯಿತು ಸಿನಿಮಾ ನಿರ್ಮಾಣ ಮಾಡಿದ್ದರು.

ಈಗ ಒಂದು ಪೂರ್ಣ ಪ್ರಮಾಣದ ಚಿತ್ರ ಕಿಚ್ಚ ಸುದೀಪ್ ಅಭಿನಯದಲ್ಲಿ ಜ್ಯಾಕ್ ಮಂಜುನಾಥ್ ಅವರು ನಿರ್ಮಾಪಕರು. ಸುದೀಪ್ ಈಗ ಸೈರಾ ನರಸಿಂಹ ರೆಡ್ಡಿ ತೆಲುಗು ಭಾಷೆಯಲ್ಲಿ ಅವರ ಭಾಗದ ಚಿತ್ರೀಕರಣ ಮಾಡಿದ್ದಾರೆ, ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ದಬ್ಬಾಂಗ್ 3 ಸಿದ್ದತೆ ಆಗುತ್ತಿದೆ.

ಪೈಲ್ವಾನ್ 5 ಭಾಷೆಗಳಲ್ಲಿ ಆಗಸ್ಟ್ 29 ರಂದು ಬಿಡುಗಡೆ ಆಗುತ್ತಿದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.