ETV Bharat / sitara

'ಜಿಪಿಎಸ್' ಮೂಲಕ 'ಕೆಂಪಾಪುರದ ಕಳ್ಳರ' ಹುಡುಕುತ್ತಿರುವ 'ನಾನಿ' ಮನೀಶ್​​​​​ - ಹೊಸ ಸಿನಿಮಾ ಕೆಂಪಾಪುರದ ಕಳ್ಳರು

ನಾಲ್ಕು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಟ ಮನೀಶ್​ ಆರ್ಯ, ಈಗ ಎರಡು ಚಿತ್ರಗಳ ಮೂಲಕ ಚಂದನವನಕ್ಕೆ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

Kempapuradha_kallaru
ಕೆಂಪಾಪುರದ ಕಳ್ಳರು
author img

By

Published : Jun 1, 2020, 1:16 PM IST

'ನಾನಿ' ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಮಾಯವಾಗಿದ್ದ ನಟ ಮನೀಶ್​ ಆರ್ಯ, ಮತ್ತೆ ನಾಲ್ಕು ವರ್ಷಗಳ ಬಳಿಕ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

ಮೊದಲ ಚಿತ್ರದಲ್ಲೇ ನಟನೆಯಿಂದ ಗಮನ ಸೆಳೆದಿದ್ದ ಆರ್ಯ, ಚಂದನವನದಲ್ಲಿ ನೆಲೆಯೂರುವ ಭರವಸೆ ಮೂಡಿಸಿದ್ದರು. ನಾನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗಿ ನಂತರ ಕಾಣೆಯಾಗಿದ್ದ ಆರ್ಯ, ಈಗ ಸದ್ದಿಲ್ಲದೇ ಎರಡು ಚಿತ್ರಗಳ ಮೂಲಕ ಗಾಂಧಿನಗರಕ್ಕೆ ಬರಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಮನೀಶ್​ ಅಭಿನಯದ ಕೆಂಪಾಪುರದ ಕಳ್ಳರು ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ‌ ಸಿನಿಮಾದಲ್ಲಿ ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಂಪಾಪುರದ ಕಳ್ಳರು ಚಿತ್ರ ತಂಡದ ಪೋಸ್ಟ್​​ ಪ್ರೊಡಕ್ಷನ್​​

ನಿಖಿಲ್ ಸ್ವಾಮಿ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಶೃತಿ ರಾಜ್ (ಭಜರಂಗಿ ಚಿತ್ರದಲ್ಲಿ ಶಿವಣ್ಣನ ತಂಗಿ ಪಾತ್ರ ಮಾಡಿದ್ದರು) ಕಾಣಿಸಿಕೊಳ್ಳಲಿದ್ದಾರೆ. ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದಾರೆ. ಮೇ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಬೇಕಾಗಿದ್ದ ಕೆಂಪಾಪುರದ ಕಳ್ಳರನ್ನು ಕೊರೊನಾ ವೈರಸ್​ ಕಟ್ಟಿ ಹಾಕಿದೆ.

ಮನೀಶ್​ ನಟನೆ ಮತ್ತೊಂದು ಚಿತ್ರ 'ಜಿಪಿಎಸ್' ಕೂಡ ತೆರೆಗೆ ಬರಲು ಸಿದ್ದಗೊಳ್ಳುತ್ತಿದೆ. ತಮಿಳು ಭಾಷೆಯಲ್ಲೂ ಬಿಡುಗಡೆಯಾಗಲು ಸಿದ್ದವಾಗಿದೆ. ಇವುಗಳ ಜೊತೆಗೆ ಇನ್ನೂ ಎರಡು ಸಿನಿಮಾಗಳು ಮಾತುಕತೆ ಹಂತದಲ್ಲಿವೆ ಎಂದು ತಿಳಿದು ಬಂದಿದೆ. ಅದರಲ್ಲಿ ಒಂದು ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಮಿಂಚಲಿದ್ದಾರೆ. ಸಿನಿಮಾದ ಸುಮಾರು ಶೇ.80ರಷ್ಟು ಮನೀಶ್​ ಬಿಟ್ಟರೆ ಬೇರ್ಯಾವ ನಟರೂ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.