ETV Bharat / sitara

ಸ್ಯಾಂಡಲ್​ವುಡ್​​​​ಗೆ ಬರ್ತಿದ್ದಾರಂತೆ ಮಹಾನಟಿ ಕೀರ್ತಿ ಸುರೇಶ್! - ಕೀರ್ತಿ ತಾಯಿ ಮೇನಕಾ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಮದಗಜ' ಸಿನಿಮಾ ಮೂಲಕ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಕನ್ನಡಕ್ಕೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಸೈಮಾ ಪ್ರಶಸ್ತಿ ಸಮಾರಂಭದ ವೇಳೆ ನಿರ್ದೇಶಕ ಮಹೇಶ್ ಕುಮಾರ್ ಕೀರ್ತಿ ಜೊತೆ ಮಾತುಕತೆ ನಡೆಸಿದ್ದು, ಡೇಟ್ಸ್ ಹೊಂದಾಣಿಕೆಯಾದರೆ ಕೀರ್ತಿ ಕನ್ನಡದಲ್ಲಿ ನಟಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಕೀರ್ತಿ ಸುರೇಶ್
author img

By

Published : Aug 24, 2019, 1:51 PM IST

ಕನ್ನಡಕ್ಕೆ ಬೇರೆ ಭಾಷೆಯಿಂದ ಚಿತ್ರನಟಿಯರ ಬಂದು ಇಲ್ಲಿ ಸಾಕಷ್ಟು ಮಿಂಚಿದ್ದಾರೆ. ಇದೀಗ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಕೂಡಾ ಕನ್ನಡಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಲಯಾಳಂ, ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲೂ ನಟಿಸಿರುವ ಕೀರ್ತಿ ಕನ್ನಡ ಎಂಟ್ರಿಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

Keerthy Suresh
ಕೀರ್ತಿ ಸುರೇಶ್

ಶ್ರೀ ಮುರಳಿ ಅಭಿನಯದ 'ಮದಗಜ' ಸಿನಿಮಾ ಮೂಲಕ ಕೀರ್ತಿ ಕನ್ನಡಕ್ಕೆ ಬರುತ್ತಿದ್ಧಾರೆ ಎನ್ನಲಾಗುತ್ತಿದೆ. ಉಮಾಪತಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಮಹೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಮೊದಲು 'ಮದಗಜ' ನಾಯಕಿಯಾಗಿ ಸಾಯಿ ಪಲ್ಲವಿ ನಂತರ ಅನುಪಮಾ ಪರಮೇಶ್ವರನ್ ಬರುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಕೀರ್ತಿ ಸುರೇಶ್ ಹೆಸರು ಹರಿದಾಡುತ್ತಿದೆ. 'ಅಯೋಗ್ಯ' ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಸಮಾರಂಭದ ವೇಳೆ ಕೀರ್ತಿ ಜೊತೆ ಮಾತುಕತೆ ನಡೆಸಿದ್ದು, ಕೀರ್ತಿ ಕೂಡಾ ಕನ್ನಡಕ್ಕೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ. ಜೊತೆಗೆ ಕೀರ್ತಿ ಅವರ ತಾಯಿಯೊಂದಿಗೆ ಕೂಡಾ ಕಥೆ ಬಗ್ಗೆ ಚರ್ಚೆ ನಡೆಸಿದ್ಧಾರೆ ಎನ್ನಲಾಗಿದೆ. ಕೀರ್ತಿ ತಾಯಿ ಮೇನಕಾ ಕೂಡಾ ನಟಿಯಾಗಿದ್ದು, 1984ರಲ್ಲಿ ಬಿಡುಗಡೆಯಾದ 'ಸಮಯದ ಗೊಂಬೆ' ಸಿನಿಮಾದಲ್ಲಿ ಡಾ. ರಾಜ್​​​​ಕುಮಾರ್ ಜೊತೆ ನಟಿಸಿದ್ದರು.

menaka, keerti
ತಾಯಿ ಮೇನಕಾ ಜೊತೆ ಕೀರ್ತಿ

ಮೇನಕಾ ಅವರಿಗೂ ಮಗಳು ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇದೆಯಂತೆ. ಕೀರ್ತಿ ಸುರೇಶ್ ಬ್ಯುಸಿ ಇದ್ದು ಡೇಟ್ ಸಿಕ್ಕರೆ ಖಂಡಿತಾ ಅವರು ಮುರಳಿ ಜೊತೆ 'ಮದಗಜ' ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಇನ್ನು ಸೆಪ್ಟೆಂಬರ್ ಅಂತ್ಯದಲ್ಲಿ ‘ಮದಗಜ’ ಚಿತ್ರೀಕರಣ ಪ್ರಾರಂಭ ಆಗಲಿದೆ ಎಂದು ನಿರ್ಮಾಪಕರಾದ ಉಮಾಪತಿ ಹಾಗೂ ಶ್ರೀನಿವಾಸ್ ಹೇಳಿದ್ದಾರೆ.

ಕನ್ನಡಕ್ಕೆ ಬರ್ತಾರಂತೆ ಕೀರ್ತಿ ಸುರೇಶ್ ಎಂಬ ಮಹಾನಟಿ

ಈಗ ರಾಷ್ಟ್ರ ಪ್ರಶಸ್ತಿ ವಿಜೇತ ಮಹಾನಟಿ ಚಿತ್ರದ ಕೀರ್ತಿ ಸುರೇಶ್ ಕನ್ನಡಕ್ಕೆ ನಾಯಕಿ ಆಗಿ ಶ್ರೀ ಮುರಳಿ ಅಭಿನಯದ ನಿರ್ಮಾಪಕ ಉಮಾಪತಿ ಮದಗಜ ಚಿತ್ರಕ್ಕೆ ಕರೆತರುತ್ತಿದ್ದಾರೆ ಎಂದು ಸುದ್ದಿ ದಟ್ಟವಾಗಿ ಹರಡಿದೆ.

ಈ ಮೊದಲು ಸಾಯಿ ಪಲ್ಲವಿ, ಆಮೇಲೆ ಅನುಪಮ ಪರಮೇಶ್ವರನ್ (ನಾಟಸಾರ್ವಭೌಮ ನಟಿ) ಹೆಸರು ಸಹ ಹಾರಿಬಿಟ್ಟಿದ್ದರು ಅಯೋಗ್ಯ ಇಂದ ಖ್ಯಾತಿ ಪಡೆದ ನಿರ್ದೇಶಕ ಮಹೇಶ್ ಕುಮಾರ್. ಇತ್ತೀಚಿನ ಸೈಮಾ ಪ್ರಶಸ್ತಿ ದುಬೈ ಅಲ್ಲಿ ನಡೆದಾಗ ನಿರ್ದೇಶಕ ಮಹೇಶ್ ಕುಮಾರ್ ಖ್ಯಾತ ನಟಿ ಕೀರ್ತಿ ಸುರೇಶ್ ಅವರ ಜೊತೆ ಒಂದು ಸುತ್ತಿನ ಮಾತು ಕಥೆ ನಡೆಸಿದ್ದಾರಂತೆ. ಕೀರ್ತಿ ಸುರೇಶ್ ಅವರ ತಾಯಿಯ ಬಳಿ ಸಹ ಚಿತ್ರದ ಕಥಾ ವಸ್ತು ಬಗ್ಗೆ ಚರ್ಚೆ ನಡೆಸಿದ್ದಾರೆ. ಅದಕ್ಕೆ ಕಾರಣ ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್ ಸಹ ಕನ್ನಡದಲ್ಲಿ 1984 ರಲ್ಲಿ ಬಿಡುಗಡೆ ಆದ ಸಮಯದ ಗೊಂಬೆ ಡಾ ರಾಜಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಕೀರ್ತಿ ಸುರೇಶ್ ಅವರ ದಿನಾಂಕಗಳು ಹೊಂದಾಣಿಕೆ ಆಗಬೇಕು. ಕೀರ್ತಿ ಸುರೇಶ್ ಅವರ ತಾಯಿಗೆ ಕನ್ನಡ ಚಿತ್ರದಲ್ಲಿ ಮಗಳು ನಟಿಸಬೇಕು ಎಂಬ ಆಸೆಯಿದೆ.

ಸೆಪ್ಟೆಂಬರ್ ಅಂತ್ಯದಲ್ಲಿ ಮದಗಜ ಚಿತ್ರೀಕರಣ ಪ್ರಾರಂಭ ಆಗುವುದು ಎಂದು ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ್ ಅಂದುಕೊಂಡಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.