ETV Bharat / sitara

2021ರಲ್ಲಿ ರಿಂಗಣಿಸಲಿದೆ 'ಫೋನ್​ ಬೂತ್'.. ಫಸ್ಟ್​ಲುಕ್ ಹಂಚಿಕೊಂಡ ಸ್ಟಾರ್ಸ್​ - ಪೋನ್​ ಬೂತ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕತ್ರಿನಾ ಕೈಫ್

ಬೂತ್​ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಒನ್​-ಸ್ಟಾಪ್-ಶಾಪ್, 2021ರಲ್ಲಿ ಚಿತ್ರಮಂದಿರಗಳಲ್ಲಿ ಫೋನ್​ ಬೂತ್​ ರಿಂಗಣಿಸಲಿದೆ" ಎಂದು ಕತ್ರಿನಾ ಬರೆದುಕೊಂಡಿದ್ದಾರೆ. ಬೂತ್​ ವರ್ಲ್ಡ್​ನಲ್ಲಿ ತ್ರಿಬಲ್ ಟ್ರಬಲ್, ಭಯಕ್ಕೆ ಅವಕಾಶವಿದೆ, ಅದರ ಜೊತೆ ಜೊತೆಗೆನೆ ನೀವೂ ನಗ್ತೀರಾ..

First Look of Pone Booth Movie Released
ಫಸ್ಟ್​ಲುಕ್ ಹಂಚಿಕೊಂಡ ಸ್ಟಾರ್ಸ್​
author img

By

Published : Jul 20, 2020, 3:48 PM IST

ಮುಂಬೈ : ಮುಂದಿನ ಹಾರರ್​-ಕಾಮಿಡಿ ಚಿತ್ರ 'ಫೋನ್​ ಬೂತ್'​ನಲ್ಲಿ ಕಾಣಿಸಿಕೊಳ್ಳುವುದಾಗಿ ನಟಿ ಕತ್ರಿನಾ ಕೈಫ್, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ತಿಳಿಸಿದ್ದಾರೆ.

ತಮ್ಮ ಚಿತ್ರದ ಫಸ್ಟ್​ ಲುಕ್‌ನ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮೂವರು ಸ್ಟಾರ್ಸ್, 2021ರಲ್ಲಿ ಚಿತ್ರ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫಸ್ಟ್​ಲುಕ್​ನಲ್ಲಿ ಕತ್ರಿನಾ, ಸಿದ್ಧಾಂತ್ ಮತ್ತು ಇಶಾನ್ ಬಿಳಿ ಬಣ್ಣದ ಶರ್ಟ್​ ಧರಿಸಿ ಅದರ ಮೇಲೆ ಕಪ್ಪು ಬಣ್ಣದ ಸೂಟ್‌ ಧರಿಸಿರುವುದು ಕಾಣಬಹುದು.

"ಬೂತ್​ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಒನ್​-ಸ್ಟಾಪ್-ಶಾಪ್, 2021ರಲ್ಲಿ ಚಿತ್ರಮಂದಿರಗಳಲ್ಲಿ ಫೋನ್​ ಬೂತ್​ ರಿಂಗಣಿಸಲಿದೆ" ಎಂದು ಕತ್ರಿನಾ ಬರೆದುಕೊಂಡಿದ್ದಾರೆ. ಬೂತ್​ ವರ್ಲ್ಡ್​ನಲ್ಲಿ ತ್ರಿಬಲ್ ಟ್ರಬಲ್, ಭಯಕ್ಕೆ ಅವಕಾಶವಿದೆ, ಅದರ ಜೊತೆ ಜೊತೆಗೆನೆ ನೀವೂ ನಗ್ತೀರಾ.. ಫೋನ್ ಬೂತ್​ 2021ರಲ್ಲಿ ಚಿತ್ರಮಂದಿರಗಳಲ್ಲಿ ರಿಂಗಣಿಸಲಿದೆ ಎಂದು ಗಲ್ಲಿ ಬಾಯ್​ ನಟ ಸಿದ್ಧಾಂತ್ ಚತುರ್ವೇದಿ ಬರೆದುಕೊಂಡಿದ್ದಾರೆ.

ಕೋವಿಡ್​ ಹಿನ್ನೆಲೆ ಕಳೆದ ಮಾರ್ಚ್​ ತಿಂಗಳಿನಿಂದ ಚಿತ್ರದ ಫಸ್ಟ್​ಲುಕ್ ಲಾಕ್ ಆಗಿತ್ತು ಎಂದು ಇಶಾನ್ ಖಟ್ಟರ್ ಹೇಳಿದ್ದಾರೆ. ಫೋನ್​ ಬೂತ್‌ನ ಗುರ್ಮೀತ್​ ಸಿಂಗ್ ನಿರ್ದೇಶನ ಮಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.