ಬೆಂಗಳೂರು: ಸ್ಯಾಂಡಲ್ವುಡ್ನ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ 2020ನೇ ವರ್ಷದಲ್ಲಿ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಸದ್ಯ ಮದುವೆ ಮೂಡ್‌ನಲ್ಲಿರೋ ನಿಖಿಲ್ ಕುಮಾರಸ್ವಾಮಿಯನ್ನ ಹುಡುಕಿಕೊಂಡು ಪುಣೆಯ ಸುಂದರಿಯೊಬ್ಬರು ಬಂದಿದ್ದಾರೆ. ಆ ಚೆಲುವೆಯ ಹೆಸರು ಕಾಶ್ಮೀರಾ ಪರದೇಶಿ. ಯಾರು ಕಾಶ್ಮೀರಾ ಪರದೇಶಿ ಅಂತೀರಾ ಇವ್ರೇ ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರದ ಹೀರೋಯಿನ್.
ನಿಖಿಲ್ ಹುಟ್ಟು ಹಬ್ಬದಂದು ನಾಲ್ಕು ಸಿನಿಮಾಗಳನ್ನ ಅನೌನ್ಸ್ ಮಾಡಲಾಗಿತ್ತು. ಆ ಸಿನಿಮಾಗಳ ಪೈಕಿ ಕೆಲ ದಿನಗಳ ಹಿಂದೆ ಹೆಸರಿಡದ ಚಿತ್ರಕ್ಕೆ ಮುಹೂರ್ತ ಮಾಡಲಾಗಿತ್ತು. ಯಾರು ನಿಖಿಲ್ ಕುಮಾರಸ್ವಾಮಿ ಅವರ ಜೋಡಿಯಾಗುತ್ತಾರೆ ಅನ್ನೋ ಕುತೂಹಲ ಮೂಡಿತ್ತು. ಆದರೆ, ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.
2018ರಲ್ಲಿ ತೆರೆಕಂಡ ಟಾಲಿವುಡ್‌ನ ನರ್ತನಾ ಶಾಲಾ ಸಿನಿಮಾದಲ್ಲಿ ಕಾಶ್ಮೀರಾ ಪರದೇಶಿ ನಟಿಸಿದ್ದರು. ಆ ಸಿನಿಮಾದಲ್ಲಿನ ಕಾಶ್ಮೀರಾ ನಟನೆ ಗಮನಿಸಿರುವ ನಿರ್ದೇಶಕ ವಿಜಯ್ ಕುಮಾರ್ ಕೊಂಡ, ಈ ಹೊಸ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ನಿಖಿಲ್‌ಗೆ ಕಾಶ್ಮೀರಾ ಸೂಕ್ತ ಜೋಡಿ ಆಗುತ್ತಾರೆ ಎಂಬ ಭರವಸೆ ಮೇರೆಗೆ ಚಿತ್ರತಂಡ ಅವರಿಗೆ ಚಾನ್ಸ್ ನೀಡಿದೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಚಿತ್ರವನ್ನು ಲಹರಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಕಾಶ್ಮೀರಾ ಪರದೇಶಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.