ETV Bharat / sitara

ಆಲಿಯಾ-ರಣಬೀರ್​​ ಜೋಡಿ ಬಗ್ಗೆ ಕರೀನಾ ಕಪೂರ್​​ ಹೇಳಿದ್ರು ಹೊಸ ಸುದ್ದಿ.. - kareena kapoor latest news

ಕರಣ್​ ಜೋಹರ್​ ಕರೀನಾ ಕಪೂರ್​ ಅವರನ್ನು ನಿಮಗೆ ಆಲಿಯಾ ಭಟ್​​ ಅತ್ತಿಗೆಯಾದರೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರೀನಾ, 'ಆಲಿಯಾ ಭಟ್​ ನನ್ನ ಅತ್ತಿಗೆಯಾದರೆ, ಈ ಪ್ರಪಂಚದಲ್ಲಿ ಅತೀ ಹೆಚ್ಚು ಸಂತೋಷ ಪಡುವವಳು ನಾನೇ' ಎಂದು ಹೇಳಿದ್ದಾರೆ.

ಅಲಿಯಾ-ರಣಬೀರ್​​ ಜೋಡಿ ಬಗ್ಗೆ ಕರೀನ ಕಪೂರ್​​ ಹೇಳಿದ್ರು ಹೊಸ ಸುದ್ದಿ...!
author img

By

Published : Oct 14, 2019, 6:04 PM IST

ಆಲಿಯಾ ಭಟ್​ ಮತ್ತು ರಣ್​ಬೀರ್​ ಜೋಡಿ ಕಳೆದ ಎರಡು ವರ್ಷಗಳಿಂದ ಜೊತೆಯಲ್ಲಿ ಸುತ್ತಾಟ ನಡೆಸುತ್ತಿದ್ದು, ಇದರ ಬಗ್ಗೆ ಹಲವು ಉಹಾಪೋಹಗಳು ಕೇಳಿ ಬರುತ್ತಿವೆ. ಈ ಜೋಡಿ ಮದುವೆಯಾಗುತ್ತೆ ಎಂಬ ವದಂತಿಯನ್ನೂ ಕೆಲವರು ಹಬ್ಬಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ರಣಬೀರ್​​​​ ಕಪೂರ್​ ಸಹೋದರಿ ಕರೀನಾ ಕಪೂರ್​ ಹೊಸ ಸುದ್ದಿ ಕೊಟ್ಟಿದ್ದಾರೆ.

ಸದ್ಯ ನಡೆಯುತ್ತಿರುವ ಜಿಯೋ ಮಮಿ ಮೂವಿ ಮೇಳ-2019 ಫಿಲ್ಮ್​ ಫೆಸ್ಟ್​ನಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್​, ರಣಬೀರ್ ಕಪೂರ್​ ಮತ್ತು ಆಲಿಯಾ ಭಟ್​ ಜೋಡಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿರ್ದೇಶಕ ಕರಣ್​ ಜೋಹರ್​, ಆಲಿಯಾ ಭಟ್​​ ಅತ್ತಿಗೆಯಾದರೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರೀನಾ, 'ಅಲಿಯಾ ಭಟ್​ ನನ್ನ ಅತ್ತಿಗೆಯಾದರೆ, ಈ ಪ್ರಪಂಚದಲ್ಲಿ ಅತೀ ಹೆಚ್ಚು ಸಂತೋಷ ಪಡುವವಳು ನಾನೆ' ಎಂದು ಹೇಳಿದ್ದಾರೆ.

ಈ ಬಗ್ಗೆ ಆಲಿಯಾ ಭಟ್​ರನ್ನು ಕೇಳಿದಾಗ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ನಾನು ಈ ಬಗ್ಗೆ ಯಾವ ರೀತಿಯಲ್ಲೂ ಯೋಚಿಸಿಲ್ಲ. ಸದ್ಯ ನಮ್ಮ ಮದುವೆ ಬಗ್ಗೆ ಯೋಚಿಸುವುದು ಅವಶ್ಯಕತೆಯೂ ಇಲ್ಲ. ಅಂತಹ ಸಂದರ್ಭ ಬಂದರೆ ನಾವು ಅದನ್ನು ಎದುರಿಸುತ್ತೇವೆ ಎಂದಿದ್ದಾರೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆಯಾದರೆ ಕರೀನಾ ಕಪೂರ್​ ರೀತಿಯಲ್ಲಿಯೇ ಜೀನವ ಸಾಗಿಸುತ್ತಾರೆ. ಆಲಿಯಾ ಭಟ್​ ಕರೀನಾ ಕಪೂರ್​ ಅವರ ಅಭಿಮಾನಿ. ಅವರಿಂದ ಹಲವು ಅಂಶಗಳನ್ನು ಕಲಿತಿದ್ದಾರೆ ಎಂದು ನಿರ್ದೇಶಕ ಕರಣ್​ ಜೋಹರ್ ಹೇಳಿದ್ದಾರೆ.

Intro:Body:

khali 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.