ETV Bharat / sitara

ರಾಜ್ಯದಲ್ಲಿ 'ಸೈರಾ ನರಸಿಂಹ ರೆಡ್ಡಿ' ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಬಿಡುಗಡೆಯಾದರೆ ಉಗ್ರ ಹೋರಾಟದ​ ಎಚ್ಚರಿಕೆ - ಕಿಚ್ಚನ ಅಭಿಮಾನಿಗಳು

ಕರ್ನಾಟಕದಲ್ಲಿ ಕನ್ನಡ ಅವತರಣಿಕೆ ಬಿಟ್ಟು ಬೇರೆ ಭಾಷೆಗಳಲ್ಲಿ 'ಸೈರಾ ನರಸಿಂಹ ರೆಡ್ಡಿ' ಬಿಡುಗಡೆ ಮಾಡಿದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಕಲನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಳವಳಿ ನಾಗೇಶ್ ಎಚ್ಚರಿಸಿದ್ದಾರೆ.

'ಸೈ ರಾ ನರಸಿಂಹ ರೆಡ್ಡಿ'
author img

By

Published : Sep 21, 2019, 7:21 PM IST

ಮೆಗಾಸ್ಟಾರ್ ಚಿರಂಜೀವಿ ಹಾಗೂ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಸೈರಾ ನರಸಿಂಹ ರೆಡ್ಡಿ' ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಸಿನಿಮಾ ಬಿಡುಗಡೆಗೆ ವಿಘ್ನ ಎದುರಾಗಿದೆ.

'ಸೈ ರಾ ನರಸಿಂಹ ರೆಡ್ಡಿ' ಬಿಡುಗಡೆಗೆ ವಿರೋಧ

ಈ ಸಿನಿಮಾ ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗಿದೆ. ಚಿತ್ರವನ್ನು ಕರ್ನಾಟಕದಲ್ಲಿ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸುಮಾರು 800 ಸ್ಕ್ರೀನ್​​ಗಳಲ್ಲಿ ತೆಲುಗಿನ ಸೈರಾ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಒಂದು ವೇಳೆ ಹಾಗೆ ಆದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಕರ್ನಾಟಕದಲ್ಲಿ ಈ ಚಿತ್ರದ ಕನ್ನಡ ಅವತರಣಿಕೆ ಬಿಟ್ಟು ಬೇರೆ ಭಾಷೆಯ ಅವತರಣಿಗೆ ಬಿಡುಗಡೆಯಾಗಬಾರದು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಳವಳಿ ನಾಗೇಶ್ ಎಚ್ಚರಿಸಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ಕರ್ನಾಟಕದಲ್ಲಿ ಧೀರಜ್ ಫಿಲಮ್ಸ್​​​​​​​​​ ವಿತರಣೆ ಮಾಡುತ್ತಿದೆ. ಸುದೀಪ್ ಕೂಡಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಕಿಚ್ಚನ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.

Sye Raa Narasimha Reddy
ಮನವಿ ಪತ್ರ
Sye Raa Narasimha Reddy
ಫಿಲ್ಮ್ ಚೇಂಬರ್​ಗೆ ಮನವಿ ಪತ್ರ ಸಲ್ಲಿಸಿದ ಚಳವಳಿ ನಾಗೇಶ್

Intro:ಸೈರಾ ಬಿಡುಗಡೆಗೆ ಕಾದಿದ್ಯ ಕಂಟಕ..!!

ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಕಿಚ್ಚ ಸುದೀಪ್ ಅಭಿನಯದ ಸೈರಾ ಅಕ್ಟೋಬರ್ ೨ ರಂದು ವಿಶ್ವದಾದ್ಯಂತ ರಿಲೀಸ್ ಆಗ್ತಿದೆ. ಅದ್ರೆ ಕರ್ನಾಟಕದಲ್ಲಿ ಸೈರಾ ಚಿತ್ರದ ಬಿಡುಗಡೆಗೆ ವಿಘ್ನ ಎದುರಾಗಿದ್ದು, ತೆಲುಗಿನ ಸೈರಾ ಚಿತ್ರವನ್ನು ಕರ್ನಾಟಕದಲ್ಲಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.ರಾಜ್ಯದಲ್ಲಿ ಸುಮಾರು ೮೦೦ ಸ್ಕ್ರೀನ್ ಗಳಲ್ಲಿ ತೆಲುಗಿನ ಸೈರಾ ಚಿತ್ರವನ್ನು ರಿಲೀಸ್ ಮಾಡ್ತಿದ್ದಾರೆ. Body:ಒಂದು ವೇಳೆ ರಾಜ್ಯದಲ್ಲಿ ಇಷ್ಟು ಸ್ಕ್ರೀನ್ ಗಳಲ್ಲಿ ಸೈರಾ ಬಿಡುಗಡೆಯಾದ್ರೆ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಳುವಳಿ ನಾಗೇಶ್ ಹೇಳಿದ್ದಾರೆ. ಅಲ್ಲದೆ
ಒಂದೆರಡು ಚಿತ್ರಮಂದಿರಗಳಲ್ಲಿ ತೆಲುಗಿನ ಸೈರಾ ಚಿತ್ರ ಬಿಡುಗಡೆ ಮಾಡಿ,ಕನ್ನಡ ಅವತರಣಿಕೆಯಲ್ಲಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಲಿ ಎಂದು ನಾಗೇಶ್ ತಿಳಿಸಿದ್ರು.ಇನ್ನು ಸೈರಾ ಚಿತ್ರವನ್ನು ಕರ್ನಾಟಕದಲ್ಲಿ ಧೀರಜ್ ಫಿಲಂ ವಿತರಣೆ ಮಾಡ್ತಿದ್ದು. ಅಕ್ಟೋಬರ್ ೨ ರಂದು ಸೈರಾ ಬಿಡುಗಡೆಯಾಗ್ತಿದೆ.ಅಲ್ಲದೆ ಸೈರಾ ಕನ್ನಡಕ್ಕೂ ಡಬ್ ಆಗಿದ್ದು, ಕಿಚ್ಚ ಸುದೀಪ್ ಕನ್ನಡದಲ್ಲಿ ಡಬ್ ಮಾಡಿದ್ದು,ಕಿಚ್ಚನ ಅಭಿಮಾನಿಗಳಲ್ಲಿ ಸೈರಾ ಮೇಲೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.