ETV Bharat / sitara

ಡಬ್ಬಿಂಗ್​ ಪರ ನಿಂತ ಕಿಚ್ಚ ಸುದೀಪ್​, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಡಬ್ಬಿಂಗ್​ ಬೇಕು ಎಂದ ಅಭಿನಯ ಚಕ್ರವರ್ತಿ - dubbing movies

'ಸೈರಾ ನರಸಿಂಹ ರೆಡ್ಡಿ' ಚಿತ್ರದ ಸಕ್ಸಸ್ ಪ್ರೆಸ್​ಮೀಟ್​​ನಲ್ಲಿ‌ ಡಬ್ಬಿಂಗ್ ಚಿತ್ರಗಳ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಐದು ವರ್ಷಗಳ ಹಿಂದೆ ನಾನೇ ಡಬ್ಬಿಂಗ್ ಚಿತ್ರಗಳಿಗೆ ವಿರೋಧ ವ್ಯಕ್ತಪಡಿಸಿದ್ದೆ. ಐದು ವರ್ಷಗಳ ಹಿಂದಿನ ಮಟ್ಟಿಗೆ ಡಬ್ಬಿಂಗ್ ಚಿತ್ರಗಳನ್ನು ವಿರೋಧಿಸುವ ಅವಶ್ಯಕತೆ ಇತ್ತು. ಆದರೆ ಈಗ ಕನ್ನಡ ಚಿತ್ರರಂಗದಲ್ಲಿ ಬದಲಾವಣೆ ಅಗತ್ಯವಿದೆ ಎಂದರು.

ಕಿಚ್ಚ ಸುದೀಪ್
author img

By

Published : Oct 12, 2019, 8:02 AM IST

ನಮ್ಮ ಕನ್ನಡ ಚಿತ್ರರಂಗದಲ್ಲಿ ಬದಲಾವಣೆ ಅಗತ್ಯವಿದೆ, ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದರು.

'ಸೈರಾ ನರಸಿಂಹ ರೆಡ್ಡಿ' ಚಿತ್ರದ ಸಕ್ಸಸ್ ಪ್ರೆಸ್​ಮೀಟ್​​ನಲ್ಲಿ‌ ಡಬ್ಬಿಂಗ್ ಚಿತ್ರಗಳ ಬಗ್ಗೆ ಮಾತನಾಡಿದ ನಟ ಸುದೀಪ್, ಐದು ವರ್ಷಗಳ ಹಿಂದೆ ನಾನೇ ಡಬ್ಬಿಂಗ್ ಚಿತ್ರಗಳಿಗೆ ವಿರೋಧ ವ್ಯಕ್ತಪಡಿಸಿದ್ದೆ. ಈಗ ಇಲ್ಲಿ ಯಾರು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಐದು ವರ್ಷಗಳ ಹಿಂದಿನ ಮಟ್ಟಿಗೆ ಡಬ್ಬಿಂಗ್ ಚಿತ್ರಗಳನ್ನು ವಿರೋಧಿಸುವ ಅವಶ್ಯಕತೆ ಇತ್ತು. ಆದರೆ ಈಗ ನಮಗೆ ಬದಲಾವಣೆಯ ಅಗತ್ಯವಿದೆ ಎಂದರು.

ಸೈರಾ ನರಸಿಂಹ ರೆಡ್ಡಿ ಚಿತ್ರದ ಸಕ್ಸಸ್ ಪ್ರೆಸ್​ಮೀಟ್​​ನಲ್ಲಿ‌ ಕಿಚ್ಚ ಸುದೀಪ್

ಐದು ವರ್ಷಗಳ ಹಿಂದೆ ಇದ್ದ ರೀತಿಯಲ್ಲೇ ನಾವು ಈಗ ಇಲ್ಲ. ನಾವು ಕನ್ನಡದಲ್ಲಿ 50 ಕೋಟಿ ಬಜೆಟ್​​ನಲ್ಲಿ ಸಿನಿಮಾ ಮಾಡ್ತಿದ್ದೀವಿ. ಒಂದು ವೇಳೆ ನಾವು ಕೂಡ 100 ಅಥವಾ 200 ಕೋಟಿ ಬಜೆಟ್​ನಲ್ಲಿ ಚಿತ್ರ ಮಾಡಿದ್ರೆ, ಭಾಷೆಗಳ ಕಡೆ ಮುಖ ಮಾಡಲೇ ಬೇಕು. ಏಕಂದರೆ ಕನ್ನಡದಲ್ಲಿ ನಾವು ಇಷ್ಟೊಂದು ಬ್ಯುಸಿನೆಸ್ ಮಾಡೋಕೆ ಸಾಧ್ಯವಿಲ್ಲ. ತೆಲುಗು ಚಿತ್ರರಂಗದ ವ್ಯವಹಾರದ ವಿಷಯಕ್ಕೆ ಬಂದ್ರೆ, ದೊಡ್ಡದಾಗಿದೆ. ಆದರೆ ಹೈ ಬಜೆಟ್​ನಲ್ಲಿ ಸಿನಿಮಾ ಮಾಡಿದಾಗ ಅವರಿಗೂ ಕೂಡ ಆಂಧ್ರದಲ್ಲೇ ಇಷ್ಟು ಬ್ಯುಸಿನೆಸ್ ಮಾಡುವುದು ಸಾಕಾಗುವುದಿಲ್ಲ, ಹೀಗಾಗಿ ಬೇರೆ ಭಾಷೆಗಳ ಕಡೆ ಮುಖ ಮಾಡಲೇ ಬೇಕು. ಉದಾಹರಣೆಗೆ ಬಾಹುಬಲಿ ಹಾಗೂ ಕೆಜಿಎಫ್ ಚಿತ್ರಗಳನ್ನೆ ತೆಗೆದು ಕೊಂಡ್ರೆ ಬಾಹುಬಲಿ ಆಂಧ್ರಕ್ಕೆ ಮಾತ್ರ ಸೀಮಿತವಾಗಿದ್ರೆ ಹಾಗೂ ಕೆಜಿಎಫ್ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ರೆ ಅಷ್ಟು ದೊಡ್ಡ ಬ್ಯುಸಿನೆಸ್ ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ನಮ್ಮ ಭಾಷೆಗೆ ಸಿನಿಮಾಗಳು ಸೀಮಿತವಾಗಬೇಕಾದರೆ ಚಿತ್ರಗಳ ಬಜೆಟ್ ಸಹ ಕಡಿಮೆ ಮಾಡಿಕೊಳ್ಳಬೇಕು ಎಂದರು.

ಸದ್ಯ ಕನ್ನಡ ಚಿತ್ರರಂಗಕ್ಕೆ ವಿಕಾಸದ ಅವಶ್ಯಕತೆ ಇದೆ. ಪ್ರತಿಯೊಬ್ಬರಿಗೂ ಇಲ್ಲಿ ಬೆಳೆಯೋದಕ್ಕೆ ಅವಕಾಶ ಇದೆ, ನಮ್ಮ ಭಾಷೆ‌ ಮೇಲೆ ನಮಗೆ ನಂಬಿಕೆ ಇರಬೇಕು. ನಮ್ಮ ಭಾಷೆ ಇರೋತನಕ ಮಾತ್ರ ಚಿತ್ರರಂಗ ಇರಲು ಸಾಧ್ಯ. ಬೇರೆ ಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡ ಬೆಳೆಯುತ್ತೆ. ಇದರಿಂದ ನಮ್ಮ ತಂತ್ರಜ್ಞರು ಹಾಗೂ ಕಲಾವಿದರು ಬೇರೆ ಭಾಷೆಯವರಿಗೆ ಬೇಕಾಗುತ್ತೆ. ಇದೊಂದು‌ ವಿಕಾಸ ಅಷ್ಟೆ ಎಂದು ಡಬ್ಬಿಂಗ್​ ಚಿತ್ರಗಳ ಕುರಿತು ಕಿಚ್ಚ ಸುದೀಪ್​ ವಿವರಣೆ ನೀಡಿದರು.

Intro: ನಮ್ಮ ಕನ್ನಡ ಚಿತ್ರರಂಗದಲ್ಲಿ ನಮಗೆ ಬದಲಾವಣೆ ಅಗತ್ಯವಿದೆ.ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.ಸೈರಾ ನರಸಿಂಹ ರೆಡ್ಡಿ ಚಿತ್ರದ ಸಕ್ಸಸ್ ಪ್ರೆಸ್ ಮೀಟ್ ನಲ್ಲಿ‌ ಡಬ್ಬಿಂಗ್ ಚಿತ್ರಗಳ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಐದು ವರ್ಷಗಳ ಹಿಂದೆ ನಾನೇ ಡಬ್ಬಿಂಗ್ ಚಿತ್ರಗಳಿಗೆ ವಿರೋಧ ವ್ಯಕ್ತಪಡಿಸಿದ್ದೆ.ಈಗ ಇಲ್ಲಿ ಯಾರು ಯಾರ ಪರವಾಗಿಯೂ ಇಲ್ಲ ವಿರೋಧವಾಗಿಯೂ ಇಲ್ಲ. ಐದು ವರ್ಷಗಳ ಹಿಂದಿನ ಮಟ್ಟಿಗೆ ಡಬ್ಬಿಂಗ್ ಚಿತ್ರಗಳ ವಿರೋಧಿಸೊದು ಅವಶ್ಯಕತೆ ಇತ್ತು.ಅದ್ರೆ ಈಗ ನಮಗೆ ಬದಲಾವಣೆ ಅಗತ್ಯವಿದೆ.

Body:ಐದು ವರ್ಷಗಳ ಹಿಂದೆ ಇದ್ದ ರೀತಿಯಲ್ಲೇ ನಾವು ಈಗ ಇಲ್ಲ. ನಾವು ಕನ್ನಡದಲ್ಲಿ ೫೦ ಕೋಟಿ ಬಜೆಟ್ ನಲ್ಲಿ ಸಿನಿಮಾ ಮಾಡ್ತಿದ್ದೀವಿ ಒಂದು ವೇಳೆ ನಾವು ಕೂಡ ೧೦೦ ಕೋಟಿ ಇಲ್ಲ ೨೦೦ ಕೋಟಿ ಬಜೆಟ್ ಹಾಕಿ ಚಿತ್ರ ಮಾಡಿದ್ರೆ.ನಾವು ಕೂಡ ಬೇರೆ ಭಾಷೆಗಳ ಕಡೆ ಮುಖ ಮಾಡಲೇ ಬೇಕು.ಏಕಂದ್ರೆ ಕನ್ನಡದಲ್ಲಿ ನಾವು ಇಷ್ಟೋಂದು ಬ್ಯುಸಿನೆಸ್ ಮಾಡೋಕೆ ಸಾಧ್ಯವಿಲ್ಲ.ತೆಲುಗು ಚಿತ್ರರಂದ ವ್ಯವಹಾರದ ವಿಷಯಕ್ಕೆ ಬಂದ್ರೆ ದೊಡ್ಡದಾಗಿದೆ ಅದ್ರೆ ಹೈ ಬಜೆಟ್ ನಲ್ಲಿ ಸಿನಿಮಾ ಮಾಡಿದಾಗ ಅವರಿಗೂ ಕೂಡ ಆಂಧ್ರದಲ್ಲೇ ಇಷ್ಟು ಬ್ಯುಸಿನೆಸ್ ಮಾಡುವುದು ಸಾಕಾಗುವುದಿಲ್ಲ ಅದ್ದರಿಂದ ಬೇರೆ ಭಾಷೆಗಳ ಕಡೆ ಮುಖ ಮಾಡಲೇ ಬೇಕು.ಉದಾಹರಣೆಗೆ ಬಾಹುಬಲಿ ಹಾಗೂ ಕೆಜಿಎಫ್ ಚಿತ್ರವಳನ್ನೆ ತೆಗೆದು ಕೊಂಡ್ರೆ ಬಾಹುಬಲಿ ಆಂಧ್ರಕ್ಕೆ ಸೀಮಿತವಾಗಿದ್ರೆ.ಹಾಗೂ ಕೆಜಿಎಫ್ ಕನಡಕ್ಕೆ ಸೀಮಿತವಾಗಿದ್ರೆ ಅಷ್ಟು ದೊಡ್ಡ ಬ್ಯುಸಿನೆಸ್ ಸಾಧ್ಯವಾಗ್ತಿರಲಿಲ್ಲ.ಒಂದು ವೇಳೆ ನಮ್ಮ ಭಾಷೆಗೆ ಸಿನಿಮಾಗಳು ಸೀಮಿತವಾಗಬೇಕಾದ್ರೆ ಚಿತ್ರಗಳ ಬಜೆಟ್ ಸಹ ಕಡಿಮೆ ಮಾಡಿಕೊಳ್ಳ ಬೇಕು.

Conclusion:ಇವತ್ತು ಡಿಜಿಟಲ್‌ ದೊಡ್ಡ ಮಟ್ಟದಲ್ಲಿ ಬೆಳೆದಿದೆ ನಾವು ಕೂಡ. ಅಲ್ಲಿ ಕಾಂಪಿಟೇಷನ್ ಮಾಡಬೇಕಾಗಿದೆ.ಸದ್ಯ ಕನ್ನಡ ಚಿತ್ರರಂಗಕ್ಕೆ ರೆಸಲ್ಯೂಷನ್ ಅವಶ್ಯಕತೆ ಇದೆ. ಪ್ರತಿಯೊಬ್ಬರಿಗೂ ಇಲ್ಲಿ ಬೆಳೆಯೋದಕ್ಕೆ ಅವಕಾಶ ಇದೆ .ಬೆಳೆಯೋದಕ್ಕೆ ಒಳ್ಳೆ ಉದ್ದೇಶ ಇರಬೇಕು .ನಾವು ಇನ್ನೊಬ್ಬರನ್ನು ತಡೆದು‌
ಬೆಳೆಯೋದು ಅದು ನಮ್ಮ ಬೆಳವಣಿಗೆ ಅಲ್ಲ ಪ್ರತಿಯೊಬ್ಬರೂ ಶಕ್ತಿ ಇದೆ.ನಮ್ಮ ಭಾಷೆ‌ ಮೇಲೆ ನಮಗೆ ನಂಬಿಕೆ ಇರಬೇಕು,ನಮ್ಮ ಭಾಷೆ ಇರೋತನಕ ಮಾತ್ರ ಚಿತ್ರರಂಗ ಇರಲು ಸಾಧ್ಯ, ಬೇರೆ ಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡ ಬೆಳೆಯುತ್ತೆ.ಇದರಿಂದ ನಮ್ಮ ತಂತ್ರಜ್ಞರು ಹಾಗೂ ಕಲಾವಿದರು ಬೇರೆ ಭಾಷೆಯವರಿಗೆ ಬೇಕಾಗುತ್ತೆ.ಇದೊಂದು‌ ರೆಸಲ್ಯೂಷನ್ ಅಷ್ಟೆ,ಇದರಿಂದ ಯಾರಿಗೂ ತೊಂದರೆಕೊಡುವ ಉದ್ಧೇಶ ಇಲ್ಲ. ಐದು‌ ವರ್ಷಗಳ ಹಿಂದೆ ಅನ್ಲೈನ್ ನಲ್ಲಿ ಮನೆಗೆ ಊಟ ಪಾರ್ಸಲ್ ತಂದು ಕೊಡುವ ವ್ಯವಸ್ಥೆಇರಲಿಲ್ಲ,ಅದ್ರೆ ಈಗ ಇದೆ ಈ ಸಿಸ್ಟಮ್ ನಲ್ಲಿ ಬದಲಾವಣೆ ನಮಗೆ ಅಗತ್ಯವಿದೆ ಇಲ್ಲವಾದ್ರೆ ನಾವು ಹಿಂದೆ ಉಳಿದುಬಿಡ್ತಿವಿ ಎಂದು ಕಿಚ್ಚ‌ ಸುದೀಪ್ ಡಬ್ಬಿಂಗ್ ಬಗ್ಗೆ ವಿವರವಾಗಿ ಮಾತನಾಡಿದ್ರು.

ಸತೀಶ ಎಂಬಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.