ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಶಿರಿನ್ ಚಿಕ್ಕವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟವರು. ತಮ್ಮ 16 ನೇ ವಯಸ್ಸಿನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧ್ರುವ ಚಿತ್ರಕ್ಕೆ ನಾಯಕಿಯಾಗಿ ಅಭಿನಯಕ್ಕೂ ಎಂಟ್ರಿಯಾಗಿದ್ದರು. ಚೊಚ್ಚಲ ಚಿತ್ರದಲ್ಲೇ ಸ್ಟಾರ್ ನಟ ದಚ್ಚು ಜತೆ ತೆರೆ ಹಂಚಿಕೊಂಡಿದ್ದ ಈ ಸುಂದರಿ, 2006ರಲ್ಲಿ ಬಿಡುಗಡೆಯಾಗಿದ್ದ 'ಭೂಪತಿ' ಸಿನಿಮಾದಲ್ಲಿ ಮತ್ತೆ ದಾಸನಿಗೆ ಜತೆಯಾಗಿದ್ದರು. ಅದಾದ ಬಳಿಕ ಕನ್ನಡದ AK 56, ಸಿಹಿಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದ ಶಿರಿನ್, ಸದ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಇನ್ನು ಕನ್ನಡದ ಟಾಪ್ ಹೀರೋ ಯಜಮಾನನ ಜತೆ ನಟಿಸಿರೋ ಈ ಕನ್ನಡದ ಹುಡುಗಿಯನ್ನು ತಮಿಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡಿ ಕನ್ನಡಿಗರು ಖುಷಿಯಾಗಿದ್ದಾರೆ. ಡಿ ಬಾಸ್ ಜೊತೆ ನಟಿಸಿದ್ರೆ ಅದೃಷ್ಟ ಕುಲಾಯಿಸುತ್ತೆ ಅನ್ನೋದು ಸತ್ಯ ಅನಿಸಿದೆ. ಈ ನಟಿಯನ್ನ ಬಿಗ್ಬಾಸ್ನಲ್ಲಿ ನೋಡಿದ ಮೇಲೆ ಅದು ಮತ್ತೊಮ್ಮೆ ಸಾಬೀತಾಗಿದೆ ಎಂಬುದು ದಚ್ಚು ಅಭಿಮಾನಿಗಳ ಮಾತಾಗಿದೆ.