ETV Bharat / sitara

ಅನಂತ್​​ ನಾಗ್​ @ 73... ಎವರ್​​​ಗ್ರೀನ್​​ ಹೀರೋಗೆ ಜನ್ಮ ದಿನದ ಸಂಭ್ರಮ

'ಸಂಕಲ್ಪ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿ ಸುಮಾರು 270ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಎವರ್​​ ಗ್ರೀನ್ ಹೀರೋ ಎಂದೇ ಕರೆಸಿಕೊಳ್ಳುವ ಹಿರಿಯ ನಟ ಅನಂತ್​ ನಾಗ್​​ ಅವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ.

kannada-actor-anant-nag-73rd-birthday
ಅನಂತ್​​ ನಾಗ್​ @ 73... ಎವರ್​​​ಗ್ರೀನ್​​ ಹೀರೋಗೆ ಜನ್ಮ ದಿನದ ಸಂಭ್ರಮ
author img

By

Published : Sep 4, 2021, 8:01 AM IST

Updated : Sep 4, 2021, 9:07 AM IST

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ, ಹಿರಿಯ ನಟ ಅನಂತ್​ನಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹಿರಿಯ ನಟ 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1948ರ ಸೆಪ್ಟೆಂಬರ್​ 4ರಂದು ಕೊಂಕಣಿ ಕುಟುಂಬದ ಸದಾನಂದ್ ನಾಗರಕಟ್ಟೆ ಹಾಗೂ ಆನಂದಿ ನಾಗರಕಟ್ಟೆ ದಂಪತಿಗೆ ಮುಂಬೈನಲ್ಲಿ ಜನಿಸಿದ ಅನಂತ್ ನಾಗ್ ಮೂಲ ಹೆಸರು ಅನಂತ್ ನಾಗರಕಟ್ಟೆ. ಕರಾಟೆ ಕಿಂಗ್​​​​​​ ಶಂಕರ್ ನಾಗ್​, ಅನಂತ್​ ನಾಗ್ ಅವರ ಪ್ರೀತಿಯ ಸಹೋದರ. ಕಾಲೇಜಿನಲ್ಲಿರುವಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅನಂತ್ ನಾಗ್,​ 1973ರಲ್ಲಿ 'ಸಂಕಲ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

kannada-actor-anant-nag-73rd-birthday
'ನಾರದ ವಿಜಯ' ಚಿತ್ರದ ದೃಶ್ಯ

‘ಹಂಸಗೀತೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ, ನಾರದ ವಿಜಯ, ಅನುಪಮ, ಮುಳ್ಳಿನ ಗುಲಾಬಿ, ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು, ಮನೆಯೇ ಮಂತ್ರಾಲಯ, ಗಣೇಶ ಸುಬ್ರಹ್ಮಣ್ಯ, ನಿಷ್ಕರ್ಷ, ಬೆಳದಿಂಗಳ ಬಾಲೆ, ಲಂಕೇಶ್ ಪತ್ರಿಕೆ, ಪಂಚರಂಗಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕವಲು ದಾರಿ ಸೇರಿದಂತೆ ಇದುವರೆಗೂ ಸುಮಾರು 270ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತ್​​ನಾಗ್ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಅನಂತ್‌ನಾಗ್​ ಬಗ್ಗೆ ನಿಮಗೆಷ್ಟು ಗೊತ್ತು? ಸಾಕ್ಷ್ಯಚಿತ್ರ ಹೊರತಂದ ರಿಷಬ್ & ಟೀಂ

ಕನ್ನಡ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಅನಂತ್​ನಾಗ್ ಬಣ್ಣ ಹಚ್ಚಿದ್ದಾರೆ. ‘ಸಿನಿಮಾಗಳ ಜೊತೆಜೊತೆಗೆ ಮಾಲ್ಗುಡಿ ಡೇಸ್, ಗರ್ವ, ಪ್ರೀತಿ ಇಲ್ಲದ ಮೇಲೆ, ಚಿಟ್ಟೆ ಹೆಜ್ಜೆ, ಲಾಟರಿ, ನಿತ್ಯೋತ್ಸವದಂತ ಧಾರಾವಾಹಿಗಳಲ್ಲಿ ಕೂಡಾ ಅನಂತ್ ನಾಗ್ ಅಭಿನಯಿಸಿದ್ದಾರೆ. 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ಅನಂತ್​ನಾಗ್ ಸಹೋದರ ಶಂಕರ್​​ನಾಗ್ ನಿರ್ದೇಶಿಸಿದ್ದರು.

kannada-actor-anant-nag-73rd-birthday
ಪತ್ನಿ ಗಾಯತ್ರಿ, ಪುತ್ರಿ ಅದಿತಿಯೊಂದಿಗೆ ಅನಂತ್ ನಾಗ್

ಚಿತ್ರಂಗವಷ್ಟೇ ಅಲ್ಲದೆ ರಾಜಕೀಯದಲ್ಲಿಯೂ ಸಹ ಅನಂತ್​​ನಾಗ್ ಗುರುತಿಸಿಕೊಂಡಿದ್ದರು. ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಅನಂತ್​ನಾಗ್,​ 1994ರಲ್ಲಿ ಬಿಡಿಎ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಆದರೆ ಬಳಿಕ ಅವರು ರಾಜಕೀಯದಿಂದ ದೂರವಾದರು.

1987ರಲ್ಲಿ ಸಹನಟಿ ಗಾಯತ್ರಿ ಅವರನ್ನು ಅನಂತ್​ನಾಗ್ ಕೈ ಹಿಡಿದರು. ಈ ದಂಪತಿಗೆ ಅದಿತಿ ಎಂಬ ಪುತ್ರಿ ಇದ್ದಾರೆ. ಅದಿತಿ ಮದುವೆಯಾದ ನಂತರ ಗಾಯತ್ರಿ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.

ಇದನ್ನೂ ಓದಿ: ಡೈರೆಕ್ಟರ್ ಆಗಲು ಬಂದ ಶಂಕರ್ ನಾಗ್ ಹೀರೋ ಆಗಿದ್ದು ನನ್ನಿಂದ: ಅನಂತನಾಗ್

Last Updated : Sep 4, 2021, 9:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.