ಕಂಗನಾ ರಣಾವತ್ ಸದ್ಯ ತಲೈವಿ ಸಿನಿಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ನಡುವೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಬರೋಬ್ಬರಿ ಐದು ದಶಕಗಳ ಕಾಲ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡಿರುವ ಮರಿಯಾ ಶರ್ಮಾ ಅವರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಕಂಗನಾ ಸಾಂಪ್ರದಾಯಿಕವಾಗಿ ಡ್ರೆಸ್ ಮಾಡಿಕೊಂಡಿದ್ದಾರೆ. ಕಂಗನಾ ಹಿಂಭಾಗದಲ್ಲಿ ಮರಿಯಾ ಶರ್ಮಾ ನಿಂತಿದ್ದಾರೆ. ಇವರ ಬಗ್ಗೆ ಬರೆದಿರುವ ಕಂಗನಾ, ನಿಮ್ಮ ಐದು ದಶಕಗಳ ಸಿನಿ ಜರ್ನಿಗೆ ಶುಭಾಶಯ. ಈ ಲೆಜೆಂಡರಿ ಕೇಶ ವಿನ್ಯಾಸಕಿ ಮರಿಯಾ, ಹೇಮ ಮಾಲಿನಿ, ಶರ್ಮಿಳಾ, ಹೆಲನ್, ಮನಿಷಾರಂತಹ ದೊಡ್ಡ ದೊಡ್ಡ ಸ್ಟಾರ್ಗಳಿಗೆ ಹೇರ್ಸ್ಟೈಲ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಕಂಗನಾ ಸಧ್ಯ ತಲೈವಿ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದು, ತಲೈವಿ ಸೆಟ್ನಲ್ಲಿ ಇವರ ಸಿನಿಮಾ ಜರ್ನಿ 50 ವರ್ಷಗಳನ್ನು ಪೂರೈಸಿದೆ. ತಮ್ಮ ಬಣ್ಣದ ಲೋಕದ ಹಾದಿಯನ್ನು 'ಓಹ್ ಲಮ್ಹೆ', 'ಒನ್ಸ್ ಅಪಾನ್ ಎ ಟೈ ಇನ್ ಮುಂಬೈ' ಸಿನಿಮಾ ಮೂಲಕ ಶುರು ಮಾಡಿದ್ದಾರೆ.
ಕಂಗನಾ ಲೀಡ್ ರೋಲ್ನಲ್ಲಿ ಅಭಿನಯಿಸುತ್ತಿರುವ ಕಂಗನಾ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿಯಾ ಬಯೋಪಿಕ್ ಆಗಿದೆ. ಈ ಚಿತ್ರದಲ್ಲಿಯೂ ಕೂಡ ಮಿರಿಯಾ ತಮ್ಮ ಕೇಶ ವಿನ್ಯಾಸದ ಕೈ ಚಳಕ ತೋರಿಸಿದ್ದಾರೆ.