ETV Bharat / sitara

ಕೋವಿಡ್​ನಿಂದ ಚೇತರಿಸಿಕೊಂಡ ಕಮಲ್ ಹಾಸನ್: ಆಸ್ಪತ್ರೆಯಿಂದ ಡಿಸ್ಚಾರ್ಜ್ - ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್ ಕೋವಿಡ್​ನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Kamal Hassan
ಕಮಲ್ ಹಾಸನ್
author img

By

Published : Dec 4, 2021, 2:30 PM IST

ಚೆನ್ನೈ (ತಮಿಳುನಾಡು): ಕೊರೊನಾ ವೈರಸ್​ ವಕ್ಕರಿಸಿದಾಗಿನಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್ (67) ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಹಾಸನ್​, "ಮುನ್ನೆಚ್ಚರಿಕಾ ಕ್ರಮಗಳು ಸಾಧ್ಯವಾದಷ್ಟು ನಮ್ಮನ್ನು ರಕ್ಷಿಸುತ್ತವೆ. ಅವುಗಳನ್ನು ಮೀರಿ ನಾವು ಅಸ್ವಸ್ಥರಾದರೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ನಾನು ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಅದೆಷ್ಟೋ ಆತ್ಮಗಳು ನನ್ನ ಬಗ್ಗೆ ಯೋಚಿಸಿವೆ ಎಂದು ನೆನೆದು ನನಗೆ ಖುಷಿಯಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಭಿಮಾನಿಯ ಆಸೆ ಈಡೇರಿಸಿದ ಗೋಲ್ಡನ್‌ ಸ್ಟಾರ್ ಗಣೇಶ್

ಅಮೆರಿಕದಿಂದ ಮರಳಿದ್ದ ಕಮಲ್​ ಹಾಸನ್​ ಅವರಿಗೆ ನವೆಂಬರ್ 22 ರಂದು ಕೋವಿಡ್​ ದೃಢಪಟ್ಟಿತ್ತು. ಚೆನ್ನೈ ರಾಮಚಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.