ಮೇಡಮ್ ಟುಸ್ಸಾಡ್ ಮ್ಯೂಸಿಯಂ ಎಂದರೆ ನೆನಪಾಗುವುದು ಸೆಲಬ್ರಿಟಿಗಳ ಮೇಣದ ಪ್ರತಿಮೆ. ರಾಜಕೀಯ, ಕ್ರೀಡೆ, ಸಿನಿರಂಗದಲ್ಲಿ ಹೆಸರು ಮಾಡಿರುವ ಸೆಲಬ್ರಿಟಿಗಳ ಮೇಣದ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸುವ ಮೂಲಕ ಸಾಧನೆ ಮಾಡಿದ ಖ್ಯಾತನಾಮರಿಗೆ ಗೌರವ ಸಲ್ಲಿಸಲಾಗುತ್ತದೆ.
ತೆಲುಗು ಚಿತ್ರರಂಗದ ಮಹೇಶ್ ಬಾಬು, ಪ್ರಭಾಸ್ , ಶ್ರೀದೇವಿ ಮೇಣದ ಪ್ರತಿಮೆ ಈಗಾಗಲೇ ಮೇಡಮ್ ಟುಸ್ಸಾಡ್ನಲ್ಲಿ ಸ್ಥಾಪಿತವಾಗಿದೆ. ಇದೀಗ 'ಮಗಧೀರ' ಸುಂದರಿ ಕಾಜಲ್ ಅಗರ್ವಾಲ್ ವ್ಯಾಕ್ಸ್ ಸ್ಟ್ಯಾಚು ಕೂಡಾ ಇಂದು ಸಿಂಗಪೂರ್ ಮೇಡಮ್ ಟುಸ್ಸಾಡ್ ಮ್ಯೂಸಿಯಂನಲ್ಲಿ ಅನಾವರಣಗೊಂಡಿದೆ. ಸ್ವತ: ಕಾಜಲ್ ಅಗರ್ವಾಲ್ ತಮ್ಮ ಮೇಣದ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಕಾಜಲ್ ತಮ್ಮ ಕುಟುಂಬದೊಂದಿಗೆ ಸಿಂಗಾಪುರ್ಗೆ ತೆರಳಿದ್ದು ಮೇಣದ ಪ್ರತಿಮೆಯೊಂದಿಗೆ ತೆಗೆದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ' ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಆತ್ಮವಿಶ್ವಾಸ ಹಾಗೂ ಶಿಸ್ತು ಬೇಕು. ಬಯಸಿದ ಗುರಿಯನ್ನು ತಲುಪಲು ನಾವು ಪ್ರಯತ್ನಿಸುತ್ತಲೇ ಇರಬೇಕು' ಎಂದು ಹೇಳಿಕೊಂಡಿದ್ದಾರೆ ಕಾಜಲ್.
-
Deeply humbled and ecstatic to be honoured, standing amongst global icons. Feels like I'm seeing
— Kajal Aggarwal (@MsKajalAggarwal) February 5, 2020 " class="align-text-top noRightClick twitterSection" data="
myself through the eyes of an artist 😍 The resemblance is uncanny and the attention to detail is spectacular. pic.twitter.com/WmOz38QBpS
">Deeply humbled and ecstatic to be honoured, standing amongst global icons. Feels like I'm seeing
— Kajal Aggarwal (@MsKajalAggarwal) February 5, 2020
myself through the eyes of an artist 😍 The resemblance is uncanny and the attention to detail is spectacular. pic.twitter.com/WmOz38QBpSDeeply humbled and ecstatic to be honoured, standing amongst global icons. Feels like I'm seeing
— Kajal Aggarwal (@MsKajalAggarwal) February 5, 2020
myself through the eyes of an artist 😍 The resemblance is uncanny and the attention to detail is spectacular. pic.twitter.com/WmOz38QBpS
ತೇಜ ನಿರ್ದೇಶನದ 'ಲಕ್ಷ್ಮಿ ಕಲ್ಯಾಣಂ' ಚಿತ್ರದಲ್ಲಿ ಲಕ್ಷ್ಮಿ ಪಾತ್ರಕ್ಕಾಗಿ ಟಾಲಿವುಡ್ಗೆ ಕಾಲಿಟ್ಟ ಕಾಜಲ್ ಅಗರ್ವಾಲ್ ನಂತರ ಆರ್ಯ-2, ಡಾರ್ಲಿಂಗ್, ಬೃಂದಾವನಂ, ಮಿ. ಪರ್ಫೆಕ್ಟ್, ಮಗಧೀರ, ಬ್ರಹ್ಮೋತ್ಸವಂ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದರು. ಸದ್ಯಕ್ಕೆ ಇಂಡಿಯನ್ -2 ಚಿತ್ರದಲ್ಲಿ ಕಮಲ್ ಹಾಸನ್ ಜೋಡಿಯಾಗಿ ಕಾಜಲ್ ನಟಿಸುತ್ತಿದ್ದಾರೆ.