ಚಿರು ಅಗಲಿಕೆಯಿಂದ ದುಃಖದಲ್ಲಿದ್ದ ಎರಡೂ ಕುಟುಂಬಗಳಲ್ಲಿ ಜೂನಿಯರ್ ಚಿರುವಿನ ಆಗಮನದಿಂದ ಸಂತಸ ಮನೆ ಮಾಡಿದೆ.
ಅಕ್ಟೋಬರ್ 22, 2017 ರಂದು ಚಿರು-ಮೇಘನಾ ನಿಶ್ಚಿತಾರ್ಥ ಮಾಡಿಕೊಂಡ ದಿನವೇ, ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಚಿರು-ಮೇಘನಾ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಚಿರು ಅಗಲಿದ ದಿನದಿಂದಲೇ ಅತ್ತಿಗೆಯನ್ನು ಅಮ್ಮನಂತೆ ನೋಡಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಜೂನಿಯರ್ ಚಿರು ಆಗಮಿಸುತ್ತಿದ್ದಂತೆ, ಎತ್ತಿ ಮುದ್ದಾಡಿ ಸಂತಸ ಪಟ್ಟಿದ್ದಾಗಿದೆ.
ಇದೀಗ ಅಜ್ಜಿಯಂದಿರಾದ ಪ್ರಮೀಳಾ ಜೋಷಾಯ್ ಹಾಗೂ ಅಮ್ಮಾಜಿ ಮೊಮ್ಮಗನನ್ನು ಮುದ್ದಾಡುವುದರಲ್ಲಿ ನಿರತರಾಗಿದ್ದಾರೆ. ಪುಟ್ಟ ಕಂದನ ಪೋಟೋ ಹಾಗೂ, ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಚಿರು ಮತ್ತೆ ಹುಟ್ಟಿ ಬಂದಿರುವುದಾಗಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಚಿರು ಆಕಸ್ಮಿಕ ಅಗಲಿಕೆಯಿಂದ ನೋವಿನಲ್ಲಿದ್ದ ಎರಡೂ ಕುಟುಂಬಗಳಿಗೂ ಜೂನಿಯರ್ ಚಿರು ಸಂತಸವನ್ನು ಹೊತ್ತು ತಂದಿದ್ದಾನೆ.