ಹೈದರಾಬಾದ್ : ಯಂಗ್ ಟೈಗರ್ ಎನ್‌ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'RRR' ರಿಲೀಸ್‌ಗೆ ಚಿತ್ರ ತಂಡ ಹೊಸ ಡೇಟ್ ಫಿಕ್ಸ್ ಮಾಡಿದೆ. ಈ ಬೆನ್ನಲ್ಲೇ ಕೊರಟಾಲ ಶಿವ ನಿರ್ದೇಶನದಲ್ಲಿ ನಟ ಜೂನಿಯರ್ ಎನ್‌ಟಿಆರ್ ಅವರ ಮುಂಬರುವ ಚಲನಚಿತ್ರ ಫೆಬ್ರವರಿ 7 ರಂದು ಅದ್ಧೂರಿಯಾಗಿ ಸೆಟ್ಟೇರಲಿದೆ.
ಸೂಪರ್‌ಹಿಟ್ ಚಲನಚಿತ್ರ 'ಜನತಾ ಗ್ಯಾರೇಜ್' ನಂತರ ಜೂನಿಯರ್ ಎನ್‌ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್ನಲ್ಲಿ ಎರಡನೇ ಬಾರಿಗೆ ಮತ್ತೊಂದು ಸಿನಿಮಾವನ್ನು ಮಾಡುತ್ತಿದ್ದಾರೆ. ಮುಂಬರುವ ಫೆ. 7 ರಂದು ಹೊಸ ಸಿನಿಮಾದ ಪೂಜಾ ಕಾರ್ಯಕ್ರಮ ನಡೆಯಲಿದೆ.
ತೆಲುಗು ಚಲನಚಿತ್ರೋದ್ಯಮದಲ್ಲಿ ಅತ್ಯಂತ ಯಶಸ್ವಿ ವಾಣಿಜ್ಯ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕೊರಟಾಲ ಶಿವ ಅವರು ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಇಷ್ಟವಾಗುವ ಕಥೆಯನ್ನೇ ಆಧರಿಸಿ ಚಿತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾವು ಕಮರ್ಷಿಯಲ್ ಡ್ರಾಮಾ ಆಗಿದ್ದು, ತಾತ್ಕಾಲಿಕವಾಗಿ "NTR30" ಎಂದು ಸಿನಿಮಾಕ್ಕೆ ಹೆಸರಿಡಲಾಗಿದೆ.
ಓದಿ:'RRR' ರಿಲೀಸ್‌ಗೆ ಹೊಸ ದಿನಾಂಕ ಫಿಕ್ಸ್.. ಅಂದಾದ್ರೂ ಬಿಡುಗಡೆಯಾಗುತ್ತಾ ಚಿತ್ರ?
"NTR30" ಸಿನಿಮಾವನ್ನು "ಅಲಾ ವೈಕುಂಠಪುರಮುಲೋ" ಖ್ಯಾತಿಯ ತ್ರಿವಿಕ್ರಮ್ ಶ್ರೀನಿವಾಸ್ ಸಹ ನಿರ್ದೇಶನ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಜೂನಿಯರ್ NTRಗೆ ನಾಯಕಿಯಾಗಿ ಜನಪ್ರಿಯ ಬಾಲಿವುಡ್ ನಟಿಯನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ