ಪ್ರತಿ ವಾರವೂ ಬರುವಂತೆ ಈ ವಾರವೂ ಟಿಆರ್ಪಿ ಲಿಸ್ಟ್ ಪ್ರಕಟವಾಗಿದೆ. ಇದರಲ್ಲಿ ಒಂದು ಆಶ್ಚರ್ಯಕರ ಸಂಗತಿಯೂ ಇದೆ. ಅದೇನಂದರೆ ಒಂದೇ ವಾಹಿನಿಯ ಎರಡು ಧಾರಾವಾಹಿಗಳು ಮೊದಲ ಮತ್ತು ಎರಡನೇ ಸ್ಥಾನವನ್ನು ಬಾಚಿಕೊಂಡಿದೆ. ಆ ಮೂಲಕ ರೇಟಿಂಗ್ ವಿಚಾರದಲ್ಲಿ ಭಾರೀ ನಮೂನೆಯ ಪೈಪೋಟಿ ಆರಂಭವಾಗಿದೆ.
ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಅಭಿನಯದ ಜೊತೆಜೊತೆಯಲಿ ಧಾರಾವಾಹಿಯು ಮೊದಲ ಸ್ಥಾನವನ್ನು ಪಡೆದರೆ, ರಕ್ಷಿತ್ ಗೌಡ ಮತ್ತು ನಿಶಾ ರವಿಕೃಷ್ಣನ್ ಅಭಿನಯದ ಗಟ್ಟಿ ಮೇಳ ಧಾರಾವಾಹಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಆರಂಭದಲ್ಲಿ ಗಟ್ಟಿಮೇಳ ಧಾರಾವಾಹಿ ಮೊದಲ ಸ್ಥಾನವನ್ನು ಪಡೆದಿತ್ತು. ಜೊತೆಜೊತೆಯಲಿ ಧಾರಾವಾಹಿ ಆರಂಭವಾದ ಬಳಿಕ ಮೊದಲ ಸ್ಥಾನ ಜೊತೆಜೊತೆಯಲಿ ಪಾಲಾಯಿತು. ಮುಂದೆ ಜೊತೆಜೊತೆಗೆ ಧಾರಾವಾಹಿಗೆ ನಂಬರ್ ಒನ್ ಸ್ಥಾನ ಖಾಯಂ ಆಯಿತು. ಇದೀಗ ಈ ವಾರದ ಟಿ ಆರ್ ಪಿ ರೇಟ್ ಹೊರಬಂದಿದ್ದು ಕೂದಲೆಳೆಯ ಅಂತರದಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಹಂಚಿ ಹೋಗಿದೆ. ಜೊತೆಜೊತೆಯಲಿಗೆ 14.4 ರೇಟಿಂಗ್ ಬಂದಿದ್ದರೆ ಗಟ್ಟಿಮೇಳ ಕ್ಕೆ 14.2 ರೇಟಿಂಗ್ ಬಂದಿದೆ.
