ETV Bharat / sitara

ಪುನೀತ್ ರಾಜ್​​​ಕುಮಾರ್​​​​​​​​​​​​​​​, ದಿನಕರ್ ತೂಗುದೀಪ್ ಜೊತೆಯಾದ ಜಯಣ್ಣ - Jayanna new movie with Puneet

ಪರಮಾತ್ಮ ಹಾಗೂ ರಣವಿಕ್ರಮ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಜಯಣ್ಣ ಇದೀಗ ಪುನೀತ್ ಜೊತೆ ಮತ್ತೊಂದು ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಚಿತ್ರವನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.

Jayanna
ಪುನೀತ್, ಜಯಣ್ಣ
author img

By

Published : Mar 15, 2021, 1:07 PM IST

ಪುನೀತ್ ರಾಜ್​​​​​​​ಕುಮಾರ್ ಅಭಿನಯದಲ್ಲಿ ದಿನಕರ್ ತೂಗುದೀಪ್ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಲೇ ಇತ್ತು. ಆದರೆ ಅವರಿಬ್ಬರನ್ನು ಸೇರಿಸುತ್ತಿರುವವರು ಯಾರು? ಎಂಬ ಪ್ರಶ್ನೆ ಎಲ್ಲರಿಗೂ ಕಾಡಿತ್ತು. ಈದೀಗ ಈ ಪ್ರಶ್ನೆಗೆ ಉತ್ತರ ದೊರೆತಿದೆ. ಆ ಚಿತ್ರವನ್ನು ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ.

2006 ರಲ್ಲಿ ಬಿಡುಗಡೆಯಾದ 'ಜೊತೆ ಜೊತೆಯಲಿ' ಚಿತ್ರದ ಮೂಲಕ ನಿರ್ದೇಶಕರಾದ ದಿನಕರ್ ನಂತರ 'ನವಗ್ರಹ', 'ಸಾರಥಿ' ಮತ್ತು 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಗಳನ್ನು ಮಾತ್ರ ನಿರ್ದೇಶನ ಮಾಡಿದ್ದಾರೆ. ಒಂದೊಂದು ಚಿತ್ರಕ್ಕೂ ಸಾಕಷ್ಟು ಸಮಯ ತೆಗೆದುಕೊಂಡು ಹೋಂವರ್ಕ್ ಮಾಡುವ ದಿನಕರ್, ಲಾಕ್‍ಡೌನ್ ಸಮಯದಲ್ಲಿ ಒಂದು ಕಥೆ ಮಾಡಿಟ್ಟುಕೊಂಡಿದ್ದರಂತೆ. ಆ ಚಿತ್ರಕ್ಕೆ ಪುನೀತ್ ಸೂಕ್ತ ಎಂದು ಅಪ್ರೋಚ್ ಮಾಡಿದ್ದಾರೆ. ಪುನೀತ್ ಕೂಡಾ ಕಥೆ ಕೇಳಿ ಒಪ್ಪಿಕೊಂಡು ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರಂತೆ. ಇದು ಪುನೀತ್ ಜೊತೆಗೆ ದಿನಕರ್ ಮೊದಲ ಸಿನಿಮಾವಾಗಿದೆ.

ಇದನ್ನೂ ಓದಿ: ಗೆಳತಿ ಮೇಘನಾ ಮನೆಗೆ ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್ ಭೇಟಿ: ಜೂ.ಚಿರು ಜೊತೆ ಟೈಂಪಾಸ್​

ನಿರ್ಮಾಪಕ ಜಯಣ್ಣ, ಈಗಾಗಲೇ ಪುನೀತ್ ಜೊತೆಗೆ 'ಪರಮಾತ್ಮ' ಮತ್ತು 'ರಣವಿಕ್ರಮ' ಸಿನಿಮಾಗಳನ್ನು ನಿರ್ಮಿಸಿದ್ದು, ಈ ಹೊಸ ಸಿನಿಮಾ ಆರಂಭವಾದರೆ ಇದು ಇವರ ಕಾಂಬಿನೇಷನ್‍ನ 3ನೇ ಚಿತ್ರವಾಗಿದೆ. ಈ ಸಿನಿಮಾ ಯಾವಾಗ ಆರಂಭವಾಗುತ್ತದೆ..? ಚಿತ್ರದ ಹೆಸರನೇನು...? ಮುಂತಾದ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಬಹುಶಃ ಪುನೀತ್ ಹುಟ್ಟುಹಬ್ಬದಂದು ಈ ಕುರಿತಾಗಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.