ETV Bharat / sitara

ಅದೆಲ್ಲಾ ಸಾಧ್ಯವಾಗಿದ್ದು ನಿಮ್ಮಿಂದ.. ಫ್ಯಾನ್ಸ್​​​ಗೆ ಧನ್ಯವಾದ ಹೇಳಿದ ಇಸ್ಮಾರ್ಟ್ ಬೇಬಿ.. - ಮರ್ಸಿಡಿಸ್ ಬೆನ್ಜ್​ ಖರೀದಿಸಿದ ಇಸ್ಮಾರ್ಟ್ ನಟಿ ನಭಾ

'ಇಸ್ಮಾರ್ಟ್ ಶಂಕರ್' ಚಿತ್ರದ ಖುಷಿಯಲ್ಲಿರುವ ನಭಾ ನಟೇಶ್ ಇದೀಗ ಮರ್ಸಿಡಿಸ್ ಬೆನ್ಜ್ ಕಾರು ಖರೀದಿಸಿದ್ದಾರೆ. ಇದರೊಂದಿಗೆ ತಮ್ಮ ಇನ್ಸ್​​ಟಾಗ್ರಾಂ ಫಾಲೋವರ್ಸ್ ಸಂಖ್ಯೆ 10 ಲಕ್ಷ ದಾಟಿರುವುದಕ್ಕೆ ಕೂಡಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ನಭಾ ನಟೇಶ್
author img

By

Published : Oct 14, 2019, 9:12 PM IST

ನಭಾ ನಟೇಶ್​ ಹುಟ್ಟಿ, ಬೆಳೆದದ್ದು ಸಿನಿಮಾ ಕರಿಯರ್ ಆರಂಭಿಸಿದ್ದು ಬೆಂಗಳೂರಿನಲ್ಲಾದರೂ ಇದೀಗ ಮಿಂಚುತ್ತಿರುವುದು ಟಾಲಿವುಡ್​​ನಲ್ಲಿ. ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಾದರೂ ಇದೀಗ ತೆಲುಗಿನ ಬಹುಬೇಡಿಕೆ ನಟಿ.

'ನನ್ನು ದೋಚುಕುಂದುವಟೇ' ತೆಲುಗು ಚಿತ್ರದಿಂದ ಟಾಲಿವುಡ್​​ ಕರಿಯರ್ ಆರಂಭಿಸಿದ ನಭಾ ನಂತರ ರಾಮ್​ ಪೋತಿನೇನಿ ಜೊತೆ 'ಇಸ್ಮಾರ್ಟ್ ಶಂಕರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದೇ ತಡ ಪಡ್ಡೆಗಳ ಮನಸ್ಸು ಕದ್ದುಬಿಟ್ರು. ಸಿನಿಮಾ ಸಕ್ಸಸ್ ಆಗಿದ್ದೇ ಆಗಿದ್ದು, ನಭಾಗೆ ಸಾಲು ಸಾಲು ಆಫರ್​​​ಗಳು ಬರತೊಡಗಿವೆ. ಸದ್ಯಕ್ಕೆ 'ವರುಸ' , 'ಡಿಸ್ಕೋರಾಜ' 'ಸೋಲೋ ಬ್ರತುಕೇ ಸೋ ಬೆಟರ್​' ಚಿತ್ರಗಳಲ್ಲಿ ನಭಾ ಬ್ಯುಸಿ ಇದ್ದಾರೆ.

ಇದರೊಂದಿಗೆ ನಭಾ ಬಹಳ ಖುಷಿಯಲ್ಲಿದ್ದಾರೆ. ಅವರ ಇನ್ಸ್​​​ಟಾಗ್ರಾಂ ಫಾಲೋವರ್ಸ್ ಸಂಖ್ಯೆ 10 ಲಕ್ಷ ದಾಟಿರುವುದು ಒಂದು ಖುಷಿಯಾದರೆ ಮರ್ಸಿಡಿಸ್ ಬೆನ್ಜ್​ ಕಾರು ಖರೀದಿಸಿರುವುದು ಮತ್ತೊಂದು ಖುಷಿಯಾಗಿದೆ. ಈ ಖುಷಿಯನ್ನು ನಭಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಕೆಂಪು ಬಣ್ಣದ ಹೊಸ ಕಾರಿನೊಂದಿಗೆ ಇರುವ ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Intro:Body:

Nabha natesh

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.