ETV Bharat / sitara

ಚಳಿಗಾಲದಲ್ಲೊಂದು ಬಿಸಿ ಸುದ್ದಿ: 'ಶಕೀಲಾ'ರನ್ನು ಕರೆತರುತ್ತಿದ್ದಾರೆ ಇಂದ್ರಜಿತ್​​

author img

By

Published : Dec 5, 2020, 5:43 PM IST

Updated : Dec 5, 2020, 6:37 PM IST

ಬಾಕ್ಸ್​​ ಆಫೀಸ್​ ಕ್ವೀನ್​ ಅಂತಾನೆ ಕರೆಸಿಕೊಂಡಿದ್ದ ಶಕೀಲಾ ಜೀವನ ಆಧಾರಿತ ಸಿನಿಮಾವನ್ನು ಇಂದ್ರಜಿತ್​​ ಲಂಕೇಶ್​​​ ನಿರ್ದೇಶಿಸಿದ್ದು, ಇದೇ ಡಿಸೆಂಬರ್​ 25ರಂದು ಸಿನಿಮಾ ತೆರೆ ಕಾಣುತ್ತಿದೆ.

indrajit lankesh directed shakeela movie
ಚಳಿಗಾಲದಲ್ಲೊಂದು ಬಿಸಿಬಿಸಿ ಸುದ್ದಿ : 'ಶಕೀಲಾ'ಳನ್ನು ಕರೆತರುತ್ತಿದ್ದಾರೆ ಇಂದ್ರಜಿತ್​​

ಶಕೀಲಾ ಎಂದ ತಕ್ಷಣ ಪಡ್ಡೆ ಹುಡುಗರಿಗೆ ಎಲ್ಲಿಲ್ಲದ ವ್ಯಾಮೋಹ. ಇನ್ನು ಆಕೆಯ ನಟನೆಯ ಸಿನಿಮಾ ಎಂದರೆ ಸಾಕು ಮುಗು ಬಿದ್ದು ನೋಡುವ ಕಾಲ ಒಂದಿತ್ತು. ಬಾಕ್ಸ್​​ ಆಫೀಸ್​ ಕ್ವೀನ್​ ಅಂತಾನೆ ಕರೆಸಿಕೊಂಡಿದ್ದ ಶಕೀಲಾ ಜೀವನ ಆಧಾರಿತ ಸಿನಿಮಾವನ್ನು ಇಂದ್ರಜಿತ್​​ ಲಂಕೇಶ್​​​ ನಿರ್ದೇಶನ ಮಾಡಿದ್ದು, ಇದೇ ಡಿಸೆಂಬರ್​ 25ರಂದು ರಿಲೀಸ್​ ಆಗುತ್ತಿದೆ.

indrajit lankesh directed shakeela movie
ಶಕೀಲಾ ಪೋಸ್ಟರ್​​

ಬಾಲಿವುಡ್​ ನಟಿ ರಿಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಈ ಚಿತ್ರ ಕಳೆದ ವರ್ಷವೇ ಸೆಟ್ಟೇರಿತ್ತು. ಚಿತ್ರವನ್ನು ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಕೊರೊನಾ ಲಾಕ್​ಡೌನ್ ನಂತ್ರ ದೊಡ್ಡ ಮಟ್ಟಕ್ಕೆ ಅಂದ್ರೆ ಐದು ಭಾಷೆಗಳಲ್ಲಿ ‘ಶಕೀಲಾ’ ಬಿಡುಗಡೆ ಮಾಡಲು ಇಂದ್ರಜಿತ್​​​​ ಸಜ್ಜಾಗಿದ್ದಾರೆ.

ಶಕೀಲಾ ಚಿತ್ರದ ಪೋಸ್ಟರ್​​

ಓದಿ : ಗ್ಲಾಮರ್​ ಬಿಟ್ಟು ಹಾರರ್​ ಹಾದಿ ಹಿಡಿದ ನಿಧಿ ಸುಬ್ಬಯ್ಯ.. ನೈಜ ಘಟನೆ ಆಧಾರಿತ ಚಿತ್ರಕ್ಕೆ ನಿರ್ದೇಶಕರು ಯಾರು?

ಕೊರೊನಾ ನಂತ್ರ ಯಾವ ನಿರ್ಮಾಪಕರೂ ಕೂಡ ತಮ್ಮ ಸಿನಿಮಾಗಳನ್ನು ರಿಲೀಸ್​​ ಮಾಡಲು ಮುಂದೆ ಬರುತ್ತಿಲ್ಲ. ಈ ಸಂದರ್ಭದಲ್ಲಿ ಶಕೀಲಾ ಸಿನಿಮಾವನ್ನು ರಿಲೀಸ್​ ಮಾಡಲು ಇಂದ್ರಜಿತ್​ ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಚಾರಕಾರ್ಯ ಶುರು ಮಾಡಲಿದ್ದಾರಂತೆ.

ಒಂದು ಕಾಲದಲ್ಲಿ ಮಲಯಾಳಂ ನೀಲಿ ಸಿನಿಮಾದ ನೀಲಾಂಬರಿಯಾಗಿ ಮಿಂಚಿದ್ದ ಶಕೀಲಾ ಜೀವನಾಧಾರಿತ ಸಿನಿಮಾ ರಿಲೀಸ್​ ಆಗುತ್ತಿದ್ದು, ಚಿತ್ರ ಹೇಗಿದೆ ಅಂತ ಕಾದು ನೋಡಬೇಕಿದೆ.

Last Updated : Dec 5, 2020, 6:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.