ETV Bharat / sitara

ನಟ ಹೃತಿಕ್ ರೋಷನ್‌ಗೆ ಸಮನ್ಸ್​ ನೀಡಿದ ಸಿಐಯು - ಕಂಗನಾ ರಣಾವತ್

ಹೃತಿಕ್ ರೋಷನ್, ಕಂಗನಾ ರಣಾವತ್ ವಿರುದ್ಧ 2016 ರಲ್ಲಿ ದೂರು ದಾಖಲಿಸಿದ್ದರು. ಕಂಗನಾ ಫೇಕ್ ಇ-ಮೇಲ್ ಖಾತೆಯನ್ನು ತೆರೆದು ಮೇಲ್​ ಕಳಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್​ ನಟ ಹೃತಿಕ್ ರೋಷನ್‌ ಹೇಳಿಕೆ ದಾಖಲಿಸಿಕೊಳ್ಳಲು ಮುಂಬೈ ಅಪರಾಧ ವಿಭಾಗವು ಸಮನ್ಸ್​ ಜಾರಿ ಮಾಡಿದೆ.

ಹೃತಿಕ್ ರೋಷನ್
ಹೃತಿಕ್ ರೋಷನ್
author img

By

Published : Feb 26, 2021, 12:50 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ನಟ ಹೃತಿಕ್ ರೋಷನ್‌ಗೆ ಶನಿವಾರ ಬೆಳಗ್ಗೆ 11 ಗಂಟೆಗೆ ಮುಂಬೈ ಅಪರಾಧ ವಿಭಾಗಕ್ಕೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ಹೃತಿಕ್ ರೋಷನ್ ಹಾಗೂ ಕಂಗನಾ ರಣಾವತ್ ನಡುವೆ 2016 ರ ಸಂದರ್ಭದಲ್ಲಿ ವಿವಾದವೊಂದು ಹುಟ್ಟಿಕೊಂಡಿತ್ತು. ಕಂಗನಾ ವಿರುದ್ಧ ದೂರು ನೀಡಿದ್ದ ಹೃತಿಕ್ ರೋಷನ್, ಕಂಗನಾ ತಮಗೆ ನಕಲಿ ಇ - ಮೇಲ್ ಮೂಲಕ ಮೇಲ್​ ಕಳಿಸುತ್ತಿದ್ದಾರೆ ಎಂದು ಆರೋಪಿಸಿ, ದೂರು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ದೂರು ನೀಡಿದ್ದ ಕಂಗನಾ, ಅಕ್ರಮ ಸಂಬಂಧವನ್ನು ಮುಚ್ಚಿಹಾಕಲು ಹೃತಿಕ್ ದೂರು ನೀಡಿದ್ದಾನೆ. ಅಲ್ಲದೇ ಹೃತಿಕ್ ರೋಷನ್ ಕೂಡ ನನಗೆ ನೂರಕ್ಕೂ ಹೆಚ್ಚು ಇ-ಮೇಲ್ ಕಳುಹಿಸಿದ್ದಾನೆ ಆರೋಪಿಸಿದ್ದರು.

2020 ರಲ್ಲಿ ಹೃತಿಕ್ ರೋಷನ್ ಪರ ವಕೀಲ ಮಹೇಶ್ ಜೆಠ್ಮಲಾನಿ ಅವರು 2016 ರಲ್ಲಿ ನೀಡಿದ್ದ ಪ್ರಕರಣ ಏನಾಯಿತು ಎಂದು ಪೊಲೀಸರ ಬಳಿ ಲಿಖಿತವಾಗಿ ವಿಚಾರಿಸಿದ ನಂತರ, ಪ್ರಕರಣವನ್ನು ಅಪರಾಧ ಗುಪ್ತಚರ ಘಟಕಕ್ಕೆ (ಸಿಐಯು) ವರ್ಗಾವಣೆ ಮಾಡಲಾಯಿತು. ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೃತಿಕ್ ರೋಷನ್‌ ಹಾಗೂ ಕಂಗನಾ ರಣಾವತ್ ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಇದೀಗ ಅಪರಾಧ ವಿಭಾಗದ ಅಧಿಕಾರಿಗಳು ಪ್ರಕರಣ ಕುರಿತು ಹೃತಿಕ್ ರೋಷನ್‌ಗೆ ಸಮನ್ಸ್ ನೀಡಿದ್ದು, ಅವರು ನೀಡುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಕಂಗನಾ ರಣಾವತ್​ಗೂ ಸಹ ಸಮನ್ಸ್ ನೀಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.