ಸ್ಯಾಂಡಲ್ವುಡ್ ಚಿಟ್ಟೆ, ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಕೊಡಗಿನ ಕುವರಿ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಕೊಂಡಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ಕೂಡ ಅನಾಥ ಮಕ್ಕಳ ಜತೆ ಕೇಕ್ ಕತ್ತರಿಸಿದ್ದಾರೆ ಈ ನಟಿ. ಆದರೆ, ಈ ಬಾರಿ ಕೊಂಚ ಡಿಫರೆಂಟಾಗೇ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಈ ಹಿಂದೆ ಅನಾಥಾಶ್ರಮ, ಅಂಧ ಮಕ್ಕಳ ಶಾಲೆಗಳಿಗೆ ಹೋಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅವರು, ಈ ಸಾರಿ ದೇವರ ಮಕ್ಕಳನ್ನೇ ಫೈವ್ ಸ್ಟಾರ್ ಹೋಟೆಲ್ಗೆ ಕರೆಯಿಸಿಕೊಂಡಿದ್ದರು. ಸ್ವರ್ಗದಂತಿದ್ದ ಐಷಾರಾಮಿ ಹೋಟೆಲ್ನಲ್ಲಿ ಮುಗ್ದಮಕ್ಕಳ ನಡುವೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಮೂಲಕ ಈ ಮಕ್ಕಳಿಗೂ ಒಂದು ಹೊಸ ಪ್ರಪಂಚ ತೋರಿಸಿದರು.
ಇನ್ನು ಅನಾಥ ಮಕ್ಕಳು ಸ್ಟಾರ್ ಹೊಟೇಲ್ ನೋಡಿ ಸಂಭ್ರಮಪಟ್ಟರು. ಹೋಟೆಲ್ ತುಂಬೆಲ್ಲಾ ಓಡಾಡುತ್ತಿದ್ದ ಆ ಮಕ್ಕಳ ಮುಖದಲ್ಲಿನ ಸಂತೋಷವನ್ನು ದೂರದಲ್ಲೇ ನಿಂತು ಹರ್ಷಿಕಾ ಕಣ್ತುಂಬಿಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಊಟ ಮಾಡಿ, ಸೆಲ್ಫಿಗೆ ಪೋಸ್ ಕೊಟ್ಟು, ಹಾಡಿಗೆ ಹೆಜ್ಜೆಹಾಕಿದರು. ಅಷ್ಟೇ ಅಲ್ಲದೆ, ಮಕ್ಕಳ ಜತೆಗೆ ತಮ್ಮ ದಿನವನ್ನು ಸುಂದರವಾಗಿಸಿಕೊಂಡರು. ಇದರ ಜೊತೆಗೆ ಹರ್ಷಿಕಾ ಸಿನಿ ಕರಿಯರ್ಗೆ ಈಗ ದಶಕದ ಸಂಭ್ರಮಕ್ಕೂ ಈ ವಿಶಿಷ್ಟ ಕಾರ್ಯಕ್ರಮ ಸಾಕ್ಷಿಯಾಯ್ತು.
ಇನ್ನು ಚಿಟ್ಟೆ ಸಿನಿಮಾ ಆದ್ಮಲೇ ಹರ್ಷಿಕಾ ಪೂಣಚ್ಚ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಹಾಗೂ ಸಾಮಾಜಿಕ ಕಾರ್ಯಗಳ ಬಗ್ಗೆ ಈಟಿವಿ ರಿಪೋರ್ಟರ್ ರವಿಕುಮಾರ್ ಜೊತೆ ಅವ್ರು ಹಂಚಿಕೊಂಡ್ರು.