ಸ್ಯಾಂಡಲ್ವುಡ್ನಲ್ಲಿ ನಟರಾಗಿ, ನಿರ್ದೇಶಕರಾಗಿ, ಗೀತ ರಚನಾಕಾರರಾಗಿ, ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವವರು ವಿ ನಾಗೇಂದ್ರ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಮೊದಲು ಇವರು ಗುರುತಿಸಿಕೊಂಡಿದ್ದು ಸಂಗೀತ ಕ್ಷೇತ್ರದಲ್ಲಿ. ನಂತರ ಇವರು ಕಿಚ್ಚ ಸುದೀಪ್ ಅಭಿನಯದ 'ನಲ್ಲ' ಸಿನಿಮಾ ಮೂಲಕ ನಿರ್ದೇಶನಕ್ಕೂ ಸೈ ಎಂದರು.
ಇವರು ಸುಮಾರು ಸಾವಿರಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇವರು ಮೊಟ್ಟ ಮೊದಲ ಬಾರಿಗೆ 'ಶಿಷ್ಯ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಂಗೀತ ನಿರ್ದೇಶಕರಾದರು. ಡಿಸೆಂಬರ್ 3,1975ರಲ್ಲಿ ಜನಿಸಿದ್ದು ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.