ಗಾನಕೋಗಿಲೆ ಎಂದೇ ಕರೆಸಿಕೊಳ್ಳುವ ಲತಾ ಮಂಗೇಶ್ಕರ್ಗೆ ಇಂದು 90ನೇ ಹುಟ್ಟು ಹಬ್ಬ. ದೇಶದ ಸರಿ ಸುಮಾರು ಭಾಷೆಗಳಲ್ಲಿನ ಹಾಡುಗಳಿಗೆ ತಮ್ಮ ಕಂಠದಾನ ಮಾಡಿದ್ದಾರೆ.
ಸುಮಾರು 36 ಸಾವಿರ ಹಾಡುಗಳನ್ನು ಹಾಡಿರುವ ಲತಾಜಿ ಮತ್ತು ಮಹಮದ್ ರಫಿ ಕಾಂಬಿನೇಷನ್ ತುಂಬಾ ಸೊಗಸಾಗಿ ಮೂಡಿಬರುತ್ತಿತ್ತು. ಅಲ್ಲದೇ ಇಂದಿಗೂ ಈ ಇಬ್ಬರ ಡ್ಯುಯೆಟ್ ಹಾಡುಗಳು ಪ್ರೇಮಿಗಳ ಮನ ಸೂರೆ ಮಾಡಿವೆ.
ಕುಟುಂಬದಿಂದಲೇ ಇವರಿಗೆ ಸಂಗೀತದ ಕಲೆ ಒಲಿದು ಬಂದಿತ್ತು. ಲತಾಜಿ ತಂದೆ ದೀನಾನಾಥ್ ಕೂಡ ಸಂಗೀತಗಾರನಾಗಿದ್ದು, ಇವರ ನಿಧನದ ನಂತರ ಅನಿವಾರ್ಯವಾಗಿ ಲತಾ ಮಂಗೇಶ್ಕರ್ ಸಂಗೀತ ಲೋಕಕ್ಕೆ ಪದಾರ್ಪಣೆ ಮಾಡಿದರು.
ಇವರ ಸಂಗೀತ ಲೋಕದ ಸಾಧನೆಯನ್ನು ಗುರುತಿಸಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು, ಆರು ಫಿಲ್ಮ್ ಫೇರ್ ಅವಾರ್ಡ್ಸ್ ಲಭಿಸಿವೆ. ಇನ್ನು 2001ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೂ ಇವರು ಭಾಜನರಾಗಿದ್ದಾರೆ.