ಕೊರೊನಾ ಕಾಟದಿಂದ ಮುಕ್ತರಾಗಲು ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಇದರಿಂದ ಸಿನಿಮಾ, ಧಾರಾವಾಹಿಗಳ ಶೂಟಿಂಗ್ ಕೂಡಾ ನಿಂತಿದೆ. ಸದಾ ಕಾಲ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಿದ್ದ ಕಲಾವಿದರು, ಈಗ ಮನೆ ಮಂದಿಯೊಂದಿಗೆ ಸಮಯ ಕಳೆಯುವಂತಾಗಿದೆ.
ಈ ನಡುವೆ 'ಗಟ್ಟಿಮೇಳ' ಧಾರಾವಾಹಿಯ ಸಾಹಿತ್ಯ ಪಾತ್ರಧಾರಿ ಶರಣ್ಯ ಶೆಟ್ಟಿ ತಮ್ಮ ಅಜ್ಜಿಮನೆ ತೀರ್ಥಹಳ್ಳಿಯಲ್ಲಿ ಕುಟುಂಬಸ್ಥರೊಡನೆ ಕಾಲ ಕಳೆಯುತ್ತಿದ್ದಾರೆ. ನಟನೆಯ ಜೊತೆಗೆ ಓದು ನಡೆಸುತ್ತಿರುವ ಶರಣ್ಯಗೆ ಅಜ್ಜಿ ಮನೆಯಲ್ಲಿ ಎಲ್ಲರೊಂದಿಗೆ ಸೇರಿ ಕಾಲ ಕಳೆಯುತ್ತಿರುವುದಕ್ಕೆ ತುಂಬಾನೇ ಖುಷಿಯಾಗ್ತಿದೆಯಂತೆ.
ಕುಟುಂಬಸ್ಥರೊಡನೆ ಸೇರಿ ಮಜಾ ಮಾಡಲು ರಜೆ ಬೇಕಿತ್ತು. ಆದರೆ, ಈ ದಿಗ್ಭಂದನ ಬೇಡ ಎಂದು ಹೇಳುವ ನಟಿ, ಸದ್ಯ ಮನೆಯವರೊಂದಿಗೆ ಆಟಗಳನ್ನು ಆಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.