ಪ್ರತೀ ವರ್ಷದಂತೆ ಈ ವರ್ಷವೂ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ವರ್ಷವೂ ಶಾಸ್ತ್ರೋಕ್ತವಾಗಿ ಉಪ್ಪಿ ಕುಟುಂಬ ಸರಳವಾಗಿ ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ.
ಉಪೇಂದ್ರ ಅವರ ನೆಚ್ಚಿನ ದೇವರಾದ ಗಣೇಶ ಚತುರ್ಥಿಯನ್ನು ಪ್ರತೀ ವರ್ಷ ಬಹಳ ಅದ್ಧೂರಿಯಾಗಿ ಸ್ನೇಹಿತರು, ಕುಟುಂಬದವರ ಜೊತೆ ಸೆಲೆಬ್ರೇಟ್ ಮಾಡ್ತಿದ್ದರು. ಆದರೆ ಈ ವರ್ಷ ಕೊರೊನಾ ಕಾರಣ ಗಣೇಶ ಹಬ್ಬ ಉಪ್ಪಿ ಕುಟುಂಬಕಷ್ಟೇ ಸೀಮಿತವಾಗಿದೆ.
ಅಲ್ಲದೆ ಈ ವರ್ಷ ಉಪ್ಪಿ ಮನೆಯಲ್ಲಿ ಕೇವಲ ಎರಡು ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿ ಕೂರಿಸುವ ಮೂಲಕ ಉಪೇಂದ್ರ ಕುಟುಂಬ ಪರಿಸರ ಕಾಳಜಿ ತೋರಿದೆ. ಅಲ್ಲದೆ ಎಲ್ಲಾ ವಿಘ್ನಗಳು ಅದಷ್ಟು ಬೇಗ ನಿವಾರಣೆ ಆಗಲಿ ಎಂದು ವಿಶೇಷ ಪೂಜೆ ಮಾಡಿದ್ದಾರೆ.