ಭಾರತದ ಹಲವಾರು ಸಿನಿಮಾಗಳು ವಿದೇಶದಲ್ಲಿ ಪ್ರದರ್ಶನ ಕಂಡು ಭಾರತದ ಖ್ಯಾತಿಯನ್ನು ವಿಶ್ವಮಟ್ಟದಲ್ಲಿ ಸಾರುತ್ತಿವೆ. ಇದೀಗ "ಗಲ್ಲಿ ಬಾಯ್" ಸಿನಿಮಾ ಕೂಡ ಇಂತಹ ಸಾಹಸ ಮಾಡಲು ಮುಂದಾಗಿದೆ.
ಹೌದು, ಬಾಲಿವುಡ್ನ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಗಲ್ಲಿ ಬಾಯ್ ಸಿನಿಮಾ ಇದೇ ಅಕ್ಟೋಬರ್ನಲ್ಲಿ ಜಪಾನ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಸಿನಿಮಾಕ್ಕೆ ಅಖ್ತರ್ ಆಕ್ಷನ್ ಕಟ್ ಹೇಳಿದ್ದಾರೆ.
- " class="align-text-top noRightClick twitterSection" data="">
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಣ್ವೀರ್, ಗಲ್ಲಿ ಬಾಯ್ ಜಪಾನ್ನಲ್ಲಿ ರಿಲೀಸ್ ಆಗುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ. ನಾನು ಜಪಾನ್ ದೇಶವನ್ನು ನೋಡಿಲ್ಲ. ಆದ್ರೆ ಸೂರ್ಯ ಉದಯಿಸುವ ಆ ದೇಶದ ಬಗ್ಗೆ ಕೆಲವು ವಿಷಯಗಳನ್ನು ನಾನು ತಿಳಿದುಕೊಂಡಿದ್ದೇನೆ ಎಂದಿದ್ದಾರೆ. ಅಲ್ಲದೆ ಜಪಾನ್ ಅಭಿಮಾನಿಗಳು ಭಾರತ ರ್ಯಾಪ್ ಸಿಂಗರ್ ಬಗ್ಗೆ ನಿರ್ಮಾಣವಾಗಿರುವ ಗಲ್ಲಿ ಬಾಯ್ ಸಿನಿಮಾ ನೋಡುತ್ತಿರುವುದು ನನಗೆ ಕುತೂಹಲ ಮೂಡಿಸಿದೆ ಎಂದಿದ್ದಾರೆ.
ಇನ್ನು ಈ ಸಿನಿಮಾ ಬರ್ಲಿನ್ ಫಿಲ್ಮ್ ಫೆಸ್ಟಿವಲ್ 2019ರಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಅಲ್ಲದೆ ದಕ್ಷಿಣ ಕೋರಿಯಾದಲ್ಲಿ ನಡೆದ 23ನೇ ಅಂತಾರಾಷ್ಟ್ರೀಯ ಬುಚಿಯಾನ್ ಚಲನಚಿತ್ರೋತ್ಸವದಲ್ಲಿಯೂ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.