ETV Bharat / sitara

'ಮಾಫಿಯಾ' ಹಿಂದೆ ಬಿದ್ದ ಪ್ರಜ್ವಲ್: ಹುಟ್ಟುಹಬ್ಬದಂದೇ ಫಸ್ಟ್​ಲುಕ್​ ರಿಲೀಸ್‌ - ನಟ ಪ್ರಜ್ವಲ್​ ಅಭಿನಯದ ಮಾಫಿಯಾ ಸಿನೆಮಾ ಪೋಸ್ಟರ್​ ಬಿಡುಗಡೆ

ಈ ಬಾರಿ ತಮ್ಮ ಹುಟ್ಟುಹಬ್ಬದ ಆಚರಣೆ ಇಲ್ಲ ಎಂದು ನಟ ಪ್ರಜ್ವಲ್ ದೇವರಾಜ್ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅದರಂತೆ ಅವರ ಮನೆ ಎದುರು ಯಾವುದೇ ಸಂಭ್ರಮಾಚರಣೆ ಇರಲಿಲ್ಲ. ಈ ಮಧ್ಯೆ, ಚಿತ್ರತಂಡದವರು ಪ್ರಜ್ವಲ್ ಮನೆಗೆ ಹೋಗಿ, ಅವರಿಂದ ಕೇಕ್ ಕತ್ತರಿಸುವುದರ ಜೊತೆಗೆ, ಚಿತ್ರದ ಟೈಟಲ್ ಅನಾವರಣ ಮತ್ತು ಫಸ್ಟ್​ಲುಕ್​ ಪೋಸ್ಟರ್ ಬಿಡುಗಡೆ ಮಾಡಿಸಿದರು.

First Look poster of Prajwal's Mafia released
ಮಾಫಿಯಾ ಚಿತ್ರದ ಫಸ್ಟ್​ಲುಕ್​ ಬಿಡುಗಡೆ
author img

By

Published : Jul 4, 2021, 5:28 PM IST

ಭಾನುವಾರ ಬೆಳಗ್ಗೆ ಪ್ರಜ್ವಲ್ ಅಭಿನಯದ ಹೊಸ ಚಿತ್ರದ ಟೈಟಲ್ ಘೋಷಣೆ ಎಂದು ನಿರ್ದೇಶಕ ಗುರುದತ್ ಗಾಣಿಗ ಮೊದಲೇ ಹೇಳಿದ್ದರು. ಅದರಂತೆ ಇಂದು ಬೆಳಗ್ಗೆ ಚಿತ್ರದ ಫಸ್ಟ್​ಲುಕ್​ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಮಾಫಿಯಾ ಎಂದು ಹೆಸರಿಡಲಾಗಿದೆ.

Film team Visits Acter Prajwal House
ಪ್ರಜ್ವಲ್ ಮನೆಗೆ ಬೇಟಿ ನೀಡಿದ ಮಾಫಿಯಾ ಚಿತ್ರ ತಂಡ

ಈ ಬಾರಿ ತಮ್ಮ ಹುಟ್ಟುಹಬ್ಬದ ಆಚರಣೆ ಇಲ್ಲ ಎಂದು ಪ್ರಜ್ವಲ್ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅದರಂತೆ ಅವರ ಮನೆಯ ಎದುರು ಯಾವುದೇ ಸಂಭ್ರಮಾಚರಣೆ ಇರಲಿಲ್ಲ. ಈ ಮಧ್ಯೆ, ಚಿತ್ರತಂಡದವರು ಪ್ರಜ್ವಲ್ ಮನೆಗೆ ಹೋಗಿ ಅವರಿಂದ ಕೇಕ್ ಕತ್ತರಿಸುವುದರ ಜೊತೆಗೆ, ಚಿತ್ರದ ಟೈಟಲ್ ಅನಾವರಣ ಮತ್ತು ಫಸ್ಟ್​ಲುಕ್​ ಪೋಸ್ಟರ್ ಬಿಡುಗಡೆ ಮಾಡಿಸಿ ಬಂದಿದ್ದಾರೆ. ಅಷ್ಟೇ ಅಲ್ಲ, ಪ್ರಜ್ವಲ್ ಅಭಿನಯಿಸುತ್ತಿರುವ ಈ 35ನೇ ಚಿತ್ರದ ಪೋಸ್ಟರ್​ ಅನ್ನು ಶಿವರಾಜಕುಮಾರ್ ಸಹ ಬಿಡುಗಡೆ ಮಾಡಿ, ಪ್ರಜ್ವಲ್​ಗೆ ಶುಭ ಹಾರೈಸಿದ್ದಾರೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ ಮಾಫಿಯಾ ಚಿತ್ರದ ಚಿತ್ರೀಕರಣ ಆಗಸ್ಟ್​ನಿಂದ ಪ್ರಾರಂಭವಾಗಲಿದೆ. ಅಷ್ಟರಲ್ಲಿ ಪ್ರಜ್ವಲ್, ವೀರಂ ಚಿತ್ರದ ಬಾಕಿ ಭಾಗದ ಚಿತ್ರೀಕರಣ ಮುಗಿಸಿ ವಾಪಸ್ ಆಗಲಿದ್ದಾರೆ. ಅಷ್ಟೇ ಅಲ್ಲ, ವೀರಂಗಾಗಿ ಉದ್ದಕೂದಲು ಬಿಟ್ಟಿದ್ದ ಪ್ರಜ್ವಲ್, ಮಾಫಿಯಾಗಾಗಿ ಅದನ್ನು ಕತ್ತರಿಸಲಿದ್ದಾರೆ. ಮಾಫಿಯಾದಲ್ಲಿ ಪ್ರಜ್ವಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರಕ್ಕಾಗಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.

ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಮಾನವ ಕಳ್ಳಸಾಗಣಿಕೆ ಕುರಿತಾದ ಮಾಫಿಯಾದ ಈ ಚಿತ್ರಕ್ಕೆ ನಿರ್ದೇಶಕ ಗುರುದತ್ ಗಾಣಿಗ ಅವರೇ ಕಥೆ, ಚಿತ್ರಕಥೆ ರಚಿಸಿದ್ದಾರೆ.

ಇದನ್ನೂ ಓದಿ: 'ನಾವು ತುಂಬಾ ಸಂತೋಷವಾಗಿದ್ದೇವೆ': ವಿಚ್ಛೇದನದ ಬಗ್ಗೆ ಅಮೀರ್ ಖಾನ್, ಕಿರಣ್ ರಾವ್ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.