ETV Bharat / sitara

ಶರತ್​ ಲೋಹಿತಾಶ್ವ ಹೊಸ ಲುಕ್​​ಗೆ ನಿರ್ದೇಶಕರು ಫಿದಾ, ಸಾಲ್ಟ್​​ & ಪೆಪ್ಪರ್ ಲುಕ್​​ನಲ್ಲಿ ಖಳನಟ

ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳಲ್ಲೂ ಕಪ್ಪು ತಲೆಕೂದಲು, ದಪ್ಪ ಮೀಸೆ ಬಿಡುತ್ತಿದ್ದ ಶರತ್ ಲೋಹಿತಾಶ್ವ ವಿಶಿಷ್ಟ ಲುಕ್ ಈಗ ಬದಲಾಗಿದೆ. ಇನ್ನು ಮುಂದಿನ ಬಹುತೇಕ ಸಿನಿಮಾಗಳಲ್ಲಿ ಶರತ್ ಅವರನ್ನು ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್​ನಲ್ಲಿ ಅಭಿಮಾನಿಗಳು ನೋಡಬಹುದು.

ಶರತ್​ ಲೋಹಿತಾಶ್ವ
author img

By

Published : Aug 20, 2019, 4:16 PM IST

1995ರಲ್ಲಿ ಬಿಡುಗಡೆಯಾದ 'ಹುಲಿಯಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಖಳನಟ ಶರತ್ ಲೋಹಿತಾಶ್ವ ಇಂದಿಗೂ ತಮ್ಮ ಖದರ್​ ಉಳಿಸಿಕೊಂಡಿದ್ದಾರೆ. ಸದ್ಯಕ್ಕೆ, ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಶರತ್ ಲೋಹಿತಾಶ್ವ ಬಹು ಬೇಡಿಕೆಯ ಖಳನಟ ಎನ್ನಬಹುದು.

'ಉಡುಂಬ' ಪ್ರೆಸ್​​​ಮೀಟ್​​​ನಲ್ಲಿ ಶರತ್ ಲೋಹಿತಾಶ್ವ

ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶರತ್ ಲೋಹಿತಾಶ್ವ ಖಳನಟನಾಗಿ ನಟಿಸಿದ್ದಾರೆ. ಇತ್ತೀಚೆಗೆ ಶರತ್ ಅವರ ಶೈಲಿ ಬದಲಾಗಿದ್ದು ಇದೀಗ ಸಾಲ್ಟ್​ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಸಹಜವಾಗಿ ಶರತ್ ಅವರನ್ನು ಸಿನಿಮಾಗಳಲ್ಲಿ ಕಪ್ಪು ಬಣ್ಣದ ಕೂದಲು, ಉದ್ದವಾದ ಮೀಸೆಗಳಲ್ಲಿ ನೋಡಿರುತ್ತೇವೆ. ಆದರೆ 'ಉಡುಂಬ' ಚಿತ್ರದ ಪ್ರೆಸ್​ಮೀಟ್​​ಗೆ ಬಂದಿದ್ದ ಅವರನ್ನು ಕಂಡುಹಿಡಿಯಲು ಎಲ್ಲರಿಗೂ ಕಷ್ಟ ಎನಿಸಿತು. ಏಕೆಂದರೆ ಅವರು ತಮ್ಮ ಒರಿಜಿನಲ್​ ಗೆಟಪ್​​ನಲ್ಲಿದ್ದರು.

ಶರತ್ ಅವರ ಈ ಗೆಟಪ್ ಒಂದು ರೀತಿ ಹೊಸತನದಿಂದ ಕೂಡಿತ್ತು. ಸಿನಿಮಾಗಳಿಗಾಗಿ ಪ್ರತಿದಿನ ಶೇವ್ ಮಾಡೋದು, ತಲೆ ಕೂದಲಿಗೆ ಬಣ್ಣ ಹಾಕೋದೇ ಒಂದು ಕೆಲಸ ಆಗಿತ್ತಂತೆ. ಆದರೆ 15 ದಿನಗಳು ಶೂಟಿಂಗ್​​ನಿಂದ ಬಿಡುವು ಇದ್ದಾಗ ಕೂದಲಿಗೆ ಬಣ್ಣ ಹಚ್ಚದೆ ಹಾಗೇ ಬಿಟ್ಟಿದ್ದಾರೆ. ಇದೀಗ ಅವರ ರಿಯಲ್ ಲುಕ್​​ ನೋಡಿ ಕೆಲವು ನಿರ್ದೇಶಕರು ಫಿದಾ ಆಗಿದ್ದಾರಂತೆ. ಹೀಗಾಗಿ ಈ ಲುಕ್​​​​​ನಲ್ಲೇ ನನಗೆ ನಾಲ್ಕು ಸಿನಿಮಾಗಳಲ್ಲಿ ಆಫರ್ ಸಿಕ್ಕಿದೆ ಎನ್ನುತ್ತಾರೆ ಶರತ್. ಮುಂದೆ ಬರುವ ಸಿನಿಮಾಗಳಲ್ಲಿ ಶರತ್ ಅವರನ್ನು ಸಾಲ್ಟ್, ಪೆಪ್ಪರ್ ಲುಕ್​ನಲ್ಲಿ ನೀವು ನೋಡಬಹುದು.

Intro:ಪ್ರತಿದಿನ ಶೇವ್ ಮಾಡೋದು ನನ್ನ ಕೆಲಸ ಶರತ್ ಲೋಹಿತಾಶ್ವ

Body:ಪ್ರತಿದಿನ ಶೇವ್ ಮಾಡೋದು ನನ್ನ ಕೆಲಸ ಶರತ್ ಲೋಹಿತಾಶ್ವ

Conclusion:ಪ್ರತಿದಿನ ಶೇವ್ ಮಾಡೋದು ನನ್ನ ಕೆಲಸ ಶರತ್ ಲೋಹಿತಾಶ್ವ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.