ಈ ಸಿನಿಮಾ ಎಂಬ ಗ್ಲಾಮಾರ್ ಲೋಕದಲ್ಲಿ ಯಾರು ಯಾವಾಗ ಏನು ಆಗ್ತಾರೆ, ಹೇಗೆ ಉಲ್ಟಾ ಹೊಡೆಯುತ್ತಾರೆ ಅಂತಾ ಹೇಳೋದಕ್ಕೆ ಬರೋಲ್ಲ. ಬಹುಶಃ ಈ ಮಾತು ಡಿಂಪಲ್ ಕ್ವೀನ್ ರಚಿತಾ ರಾಮ್ ವಿಷಯದಲ್ಲಿ ನಿಜವಾಗಿದೆ.
![Ek love ya movie Actress Rachita ram getting trolled](https://etvbharatimages.akamaized.net/etvbharat/prod-images/kn-bng-03-rachita-ram-boldlook-nodia-fans-fida-7204735_24022022155243_2402f_1645698163_16.jpg)
ಆರ್ ಚಂದ್ರ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿತ್ತು. ಈ ಚಿತ್ರದ ಹಾಡುಗಳು ಎಷ್ಟು ಸದ್ದು ಮಾಡಿದ್ವೋ ಅದಕ್ಕಿಂತ ಮೂರು ಪಟ್ಟು ರಚಿತಾ ರಾಮ್ ಅವತಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಐ ಲವ್ ಯೂ ಚಿತ್ರದ 'ಮಾಯವಾದೆ' ಹಾಡಿನಲ್ಲಿ ಉಪೇಂದ್ರ ಜೊತೆ ಯಾವ ಬಾಲಿವುಡ್ ಹೀರೋಯಿನ್ಗೂ ಕಡಿಮೆ ಇಲ್ಲ ಎಂಬ ಮಟ್ಟಿಗೆ ರಚಿತಾ ರಾಮ್ ಹಸಿ ಬಿಸಿ ದೃಶ್ಯಗಳಲ್ಲಿ ಅಭಿನಯಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತೂ ಸುಳ್ಳಲ್ಲ. ಆದರೆ, ರಚಿತಾ ತಂದೆ ಸಿನಿಮಾ ನೋಡಿ ಮಗಳ ಹಾಟ್ ಅವತಾರ ನೋಡಿ ಬೇಸರ ವ್ಯಕ್ತಪಡಿಸಿದ್ದರು.
![Ek love ya movie Actress Rachita ram getting trolled](https://etvbharatimages.akamaized.net/etvbharat/prod-images/kn-bng-03-rachita-ram-boldlook-nodia-fans-fida-7204735_24022022155243_2402f_1645698163_149.jpg)
ಇದರಿಂದ ನೊಂದ ರಚಿತಾ ರಾಮ್, ಖಾಸಗಿ ಚಾನಲ್ವೊಂದರಲ್ಲಿ ಕಣ್ಣೀರು ಇಡುತ್ತಾ, ನಾನು ಇನ್ಮುಂದೆ ಇಂತ ದೃಶ್ಯಗಳಲ್ಲಿ ಕಾಣಿಸಲ್ಲ ಅಂತ ಹೇಳಿದ್ರು. ಆದರೆ, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನನಿಮಾದಲ್ಲಿ ರಚಿತಾ ರಾಮ್, ಯಾವ ದೃಶ್ಯಗಳಲ್ಲಿ ನಟಿಸಲ್ಲ ಅಂತ ಹೇಳಿದ್ರೋ ಅದೇ ದೃಶ್ಯಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ಮೈ ಚಳಿ ಬಿಟ್ಟು ಎಣ್ಣೆ ಬಾಟ್ಲು ಹಿಡಿದು, ಸಿಗರೇಟ್ ಸೇದಿ ಲಿಪ್ ಲಾಕ್ ದೃಶ್ಯ ಗಳಲ್ಲಿ ಸಿನಿ ರಸಿಕರುಗೆ ದರ್ಶನ ಕೊಟ್ಟಿದ್ದಾರೆ.
![Ek love ya movie Actress Rachita ram getting trolled](https://etvbharatimages.akamaized.net/etvbharat/prod-images/kn-bng-03-rachita-ram-boldlook-nodia-fans-fida-7204735_24022022155243_2402f_1645698163_973.jpg)
ಏಕ್ ಲವ್ ಯಾ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸೋಕೆ ಚಿತ್ರದ ಕಥೆ ಕಾರಣ. ಸಿನಿಮಾದ ಡಿಮ್ಯಾಂಡ್ಗೆ ತಕ್ಕಂತೆ ನಾನು ಮತ್ತೆ ಬೋಲ್ಡ್ ಆಗಿ ನಟಿಸಿದ್ದೀನಿ ಎಂದು ರಚಿತಾ ರಾಮ್ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದಾರೆ.
![Ek love ya movie Actress Rachita ram getting trolled](https://etvbharatimages.akamaized.net/etvbharat/prod-images/kn-bng-03-rachita-ram-boldlook-nodia-fans-fida-7204735_24022022155243_2402f_1645698163_479.jpg)
ಆದರೆ, ಸಿನಿಮಾ ನೋಡಿದವರು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಹೇಳ್ತಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾದ ಕಮರ್ಷಿಯಲ್ ದೃಷ್ಟಿಯಿಂದ ರಚಿತಾ ಪಾತ್ರವನ್ನು ನಿರ್ದೇಶಕ ಪ್ರೇಮ್ ಬೋಲ್ಡ್ ಆಗಿ ತೋರಿಸಿದ್ದಾರೆ ಎನ್ನುತ್ತಿದ್ದಾರೆ.
ಅಂದು ಐ ಲವ್ ಯೂ ಚಿತ್ರದಲ್ಲಿ ನಾನು ಬೋಲ್ಡ್ ಆಗಿ ನಟಿಸ ಬಾರದಿತ್ತು ಎಂದು ರಚಿತಾ ರಾಮ್ ಕಣ್ಣೀರಿಟ್ಟಿದ್ದು, ಪ್ರಚಾರದ ಗಿಮಿಕ್ ಅಂತಿದ್ದಾರೆ ಸಿನಿಮಾ ಪ್ರೇಕ್ಷಕರು.