ಕಿರುತೆರೆಯಲ್ಲಿ ಮತ್ತೊಂದು ಪೌರಾಣಿಕ ಧಾರಾವಾಹಿ ಇದೇ 21 ರಿಂದ ಆರಂಭವಾಗಲಿದೆ. ಎಡೆಯೂರು ಸಿದ್ಧಲಿಂಗೇಶ್ಚರ ಮಹಿಮೆ ಧಾರಾವಾಹಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ತಿಕ ಅಮಾವಾಸ್ಯೆಯ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ತ ದೇಗುಲಕ್ಕೆ ವಾಹಿನಿಯಿಂದ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.
![edeyuru siddalingeshwara serial in str suvrna](https://etvbharatimages.akamaized.net/etvbharat/prod-images/kn-bng-04-edeyuru-siddalingeshwara-serial-photo-ka10018_16122020181516_1612f_1608122716_1036.jpg)
ಸ್ಟಾರ್ ಸುವರ್ಣ ವಾಹಿನಿಯು ರಾಜ್ಯಾದ್ಯಂತ ವಿಶೇಷವಾದ ಸಿದ್ಧಿರಥದ ಮೂಲಕ ಎಡೆಯೂರು ಸಿದ್ಧಲಿಂಗೇಶ್ಚರ ಮಹಿಮೆ ಸಾರಲು ಮುಂದಾಗಿದೆ. ಈ ಮೂಲಕ ಎಡೆಯೂರು ಶ್ರೀ ಸಿದ್ಧಲಿಂಗೇಶ್ಚರರ ಜೀವನ ಚರಿತ್ರೆ ಪ್ರಸಾರವಾಗಲಿದೆ.
![edeyuru siddalingeshwara serial in str suvrna](https://etvbharatimages.akamaized.net/etvbharat/prod-images/kn-bng-04-edeyuru-siddalingeshwara-serial-photo-ka10018_16122020181516_1612f_1608122716_418.jpg)
ಎಡೆಯೂರು ಸಿದ್ಧಲಿಂಗೇಶ್ವರ ಪಾತ್ರವನ್ನು ವಲ್ಲಭ ಅವರು ನಿರ್ವಹಿಸಿದ್ದಾರೆ. ಶಿವನ ಪಾತ್ರದಲ್ಲಿ ವಿನಯ್ ಗೌಡ ನಟಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎರಡನೇ ಬಾರಿಗೆ ಶಿವನ ಪಾತ್ರ ಲಭಿಸಿದೆ. ನಮ್ಮ ಮನೆಯ ದೇವರು ಕೂಡ ಶಿವ. ಇಂತಹ ಅವಕಾಶ ಸಿಗುವುದು ಅಪರೂಪ. ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಎನ್ನುತ್ತಾರೆ.
![edeyuru siddalingeshwara serial in str suvrna](https://etvbharatimages.akamaized.net/etvbharat/prod-images/kn-bng-04-edeyuru-siddalingeshwara-serial-photo-ka10018_16122020181516_1612f_1608122716_734.jpg)
ಕನ್ನಡದ ನೆಲದ ಕನ್ನಡಿಗರ ಭಾವಾನಾತ್ಮಕ ನೆಲೆಯಲ್ಲಿ ಸೆರೆ ಹಿಡಿದಿರುವ ಎಡೆಯೂರು ಶ್ರೀಸಿದ್ಧಲಿಂಗೇಶ್ವರ ಶೀಘ್ರದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲಲಿದೆ ಎಂಬುದು ನಿರ್ದೇಶಕ ನವೀನ್ ಕೃಷ್ಣ ಅವರ ಅಭಿಪ್ರಾಯ.
![edeyuru siddalingeshwara serial in str suvrna](https://etvbharatimages.akamaized.net/etvbharat/prod-images/kn-bng-04-edeyuru-siddalingeshwara-serial-photo-ka10018_16122020181516_1612f_1608122716_426.jpg)