ಕಳೆದ ಮೂರು ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ, ಸಿನಿಮಾ ಚಿತ್ರೀಕರಣ ಹಾಗು ಚಿತ್ರಮಂದಿಗಳು ಓಪನ್ ಆಗದೆ, ಚಿತ್ರರಂಗ ತಟಸ್ಥವಾಗಿತ್ತು. ಯಾವಾಗ ಚಿತ್ರೀಕರಣಕ್ಕೆ ಹಾಗು ಚಿತ್ರಮಂದಿರಗಳಿಗೆ ಅವಕಾಶ ಸಿಗುತ್ತೆ ಅಂತಾ ಚಿತ್ರರಂಗ ಕಾಯುತ್ತಿತ್ತು. ಅದರಂತೆ ಎರಡು ದಿನದ ಹಿಂದೆ ರಾಜ್ಯ ಸರ್ಕಾರದಿಂದ ಸಿನಿಮಾ ಹಾಗು ಸೀರಿಯಲ್ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ. ಹಲವು ಮಾರ್ಗಸೂಚಿಗಳನ್ನ ಪಾಲಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಗಳನ್ನ ಗಮನಿಸಿದ ಸಿನಿಮಾ ನಿರ್ಮಾಪಕರು ಚಿತ್ರೀಕರಣ ಮಾಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಏಕೆಂದರೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ, ಗಮನಿಸೋದಾದ್ರೆ, ಕೊರೊನಾ ಮಾರ್ಗಸೂಚಿ ದೊಡ್ಡ ಮಟ್ಟದ ನಷ್ಟಕ್ಕೆ ಕಾರಣವಾಗುತ್ತೆ ಅನ್ನೋದು ಕೆಲ ನಿರ್ಮಾಪಕರ ಮಾತು. ಏಕೆಂದರೆ ಫೈನಾನ್ಸ್ನಿಂದ ಹಣ ತಂದು ಸಿನಿಮಾ ಮಾಡುವ ನಿರ್ಮಾಪಕರಿಗೆ ಮತ್ತಷ್ಟು ಹೊರಯಾಗಲಿದೆ. ಸದ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ, ಸಿನಿಮಾ ಚಿತ್ರೀಕರಣಕ್ಕೆ ಬರುವ ಪತ್ರಿಯೊಬ್ಬರಿಗೆ ಆರೋಗ್ಯ ಚಿಕಿತ್ಸೆ ಮಾಡಿಸಿ, ಸರ್ಟಿಫಿಕೇಟ್ ಪಡೆಯುವ ಜವಾಬ್ದಾರಿ ನಿರ್ಮಾಪಕರದ್ದಾಗಿರುತ್ತದೆ.
ಇನ್ನು ದೊಡ್ಡ ದೊಡ್ಡ ಸಿನಿಮಾಗಳ ಚಿತ್ರೀಕರಣದಲ್ಲಿ 50 ಜನರನ್ನ ಇಟ್ಟು ಕೊಂಡು ಸಿನಿಮಾ ಮಾಡೋದಿಕ್ಕೆ ಆಗಲ್ಲ. ಜೊತೆಗೆ ಒಬ್ಬ ಸ್ಟಾರ್ ನಟನ ಮೇಕಪ್ನಿಂದ ಹಿಡಿದು ಪ್ರೊಡಕ್ಷನ್ ಬಾಯ್ವರಗೂ, ದಿನಕ್ಕೆ ಲಕ್ಷದವರಗೆ ಖರ್ಚಾಗುತ್ತದೆ. ಅದು ಹೇಗೆ ಅಂದ್ರೆ ಸಿನಿಮಾ ಅನ್ನೋದು ಕ್ರಿಯೇಟಿವ್ ಫಿಲ್ಡ್. ಒಂದು ಸೀನ್ ಚಿತ್ರೀಕರಣ ಮಾಡೋದಕ್ಕೆ ಒಂದು ಅಥವಾ ಎರಡು ದಿನ ಬೇಕಾಗುತ್ತೆ. ಆಗ ನಿರ್ಮಾಪಕನಿಗೆ ದಿನಕ್ಕೆ ಮೂರು ಲಕ್ಷ ಖರ್ಚು ಆಗುತ್ತಿತ್ತು. ಆದರೆ ಈ ಕೊರೊನಾ ಸಂದರ್ಭದಲ್ಲಿ ಚಿಕ್ಕ ಅಥವಾ ದೊಡ್ಡ ಸಿನಿಮಾಗಳ ನಿರ್ಮಾಪಕರಿಗೆ ಡಬಲ್ ಖರ್ಚು ಆಗುತ್ತೆ ಅಂತೀದ್ದಾರೆ ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು.
ಇದ್ರ ಜೊತೆಗೆ ಶೂಟಿಂಗ್ ಸ್ಥಳದಲ್ಲಿ ಸ್ಯಾನಿಟೈಸಿಂಗ್ , ಥರ್ಮಾ ಮೀಟರ್, ಮಾಸ್ಕ್ , ಪ್ರತಿಯೊಬ್ಬರ ಹೊಣೆ ನಿರ್ಮಾಪಕನ ಜವಾಬ್ದಾರಿ ಆಗಿರುತ್ತೆ. ಇಷ್ಟೇಲ್ಲಾ ಮಾರ್ಗ ಸೂಚಿಗಳನ್ನ ಅನುಸರಿಸಿ ಸಿನಿಮಾ ಚಿತ್ರೀಕರಣ ಮಾಡಲು ಆಗುವುದಿಲ್ಲ. ಅನ್ನೋದು ನಿರ್ಮಾಪಕ ಸೂರಪ್ಪ ಬಾಬು ಅವರ ಮಾತು.
ಚಿತ್ರರಂಗದಲ್ಲಿ ಮೂವತ್ತು ವರ್ಷಗಳಿಂದ ನಾನು ಇದ್ದೇನೆ. ಈ ಕೊರೊನಾ ಎಂಬ ವೈರಸ್ , ಸಿನಿಮಾ ನಿರ್ಮಾಪಕರು, ತಂತ್ರಜ್ಞಾನರ ಬದುಕು ಕಿತ್ತುಕೊಂಡಿದೆ. ಎರಡು ತಿಂಗಳಿಂದ ಸಿನಿಮಾ ಶೂಟಿಂಗ್ ಹಾಗು ಸಿನಿಮಾ ಪ್ರದರ್ಶನ ಇಲ್ಲದೆ ನಮ್ಮಂಥ ನಿರ್ಮಾಪಕರಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಯನ್ನ ಇಟ್ಟುಕೊಂಡು ಸಿನಿಮಾ ಚಿತ್ರೀಕರಣ ಮಾಡೋದಿಕ್ಕೆ ಆಗೋಲ್ಲ. ಇದರಿಂದ ನಿರ್ಮಾಪಕನಿಗೆ ಮತ್ತಷ್ಟು ಹೊರೆಯಾಗುತ್ತೆ ಅಂತಾರೆ ಸೂರಪ್ಪ ಬಾಬು.
ಬಹುಕೋಟಿ ವೆಚ್ಚದಲ್ಲಿ ನಾನು ಕೋಟಿಗೊಬ್ಬ 3 ಸಿನಿಮಾ ನಿರ್ಮಾಣ ಮಾಡಿದ್ದೀನಿ, ನಾನು ಹಾಕಿರುವ ಬಂಡವಾಳ ವಾಪಸ್ ಬರಬೇಕು ಅಂದ್ರೆ ಚಿತ್ರರಂಗ ಸಹಜ ಸ್ಥಿಗೆ ಬರಬೇಕು. ಅಲ್ಲಿವರೆಗೂ ನಾನು ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಮಾಡೋಲ್ಲ. ಏಕೆಂದರೆ ಮಾಲ್ಗಳು ಹಾಗು ಹೋಟೆಲ್ಗಳಿಗೆ ಜನರು ಬರೋದಿಕ್ಕೆ ಭಯ ಪಡ್ತಾ ಇದ್ದಾರೆ. ಇಂತಹ ಸಮಯದಲ್ಲಿ ಚಿತ್ರ ಮಂದಿಗಳು ಓಪನ್ ಆಗಿ ಸಿನಿಮಾ ರಿಲೀಸ್ ಮಾಡಿದ್ರೆ, ಜನರು ಬರೋದು ಡೌಟ್. ಹೀಗೆ ಇರಬೇಕಾದರೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಯನ್ನ ಯಾವ ನಿರ್ಮಾಪಕನು ಮತ್ತಷ್ಟು ಹಣ ಖರ್ಚು ಮಾಡಿಕೊಂಡು ಸಿನಿಮಾ ಚಿತ್ರೀಕರಣ, ಮಾಡೋಲ್ಲ ಅನ್ನೋದು ನಿರ್ಮಾಪಕ ಸೂರಪ್ಪ ಬಾಬು ಅವರ ಅನಿಸಿಕೆಯಾಗಿದೆ.