ETV Bharat / sitara

ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಟಾಲಿವುಡ್ ನಿರ್ದೇಶಕ ಆರ್​​ಜಿವಿ - Director Ram Gopal Varma visited Puneeth Rajkumar grave

ತೆಲುಗು ನಿರ್ದೆಶಕ ರಾಮ್ ಗೋಪಾಲ್ ವರ್ಮ, ನಟಿಯರಾದ ಅಪ್ಸರರಾಣಿ ಹಾಗೂ ನೈನಾಗಂಗೂಲಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ಪೂಜೆ ಸಲ್ಲಿಸಿದ್ದಾರೆ.

Director RGV visited Puneeth grave
ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಟಾಲಿವುಡ್ ನಿರ್ದೇಶಕ ಆರ್​​ಜಿವಿ
author img

By

Published : Mar 29, 2022, 11:05 AM IST

ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ನಮ್ಮನಗಲಿ ತಿಂಗಳುಗಳೇ ಕಳೆದಿದೆ. ಆದರೆ, ಅವರ ನೆನಪು, ಅಭಿಮಾನ ಮಾತ್ರ ಹಾಗೆ ಇದೆ. ದಿನ ಕಳೆದಂತೆ ಅನೇಕ ಸ್ಟಾರ್​ ನಟರು, ಗಣ್ಯರು ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಅದರಂತೆ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮ ಪುನೀತ್​ ಸಮಾಧಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಟಾಲಿವುಡ್ ನಿರ್ದೇಶಕ ಆರ್​​ಜಿವಿ

ಪುನೀತ್​ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಪ್ಪು ಕೇವಲ ಕನ್ನಡಚಿತ್ರರಂಗ ಮಾತ್ರವಲ್ಲದೇ ಬೇರೆ ಬೇರೆ ಚಿತ್ರರಂಗದಲ್ಲೂ ಅಧಿಕ ಸಂಖ್ಯೆಯ ಸ್ನೇಹಿತರನ್ನು ಹೊಂದಿದ್ದಾರೆ. ಪುನೀತ್​ ಅಗಲಿಕೆ ಬಳಿಕ ಅನೇಕರು ಸಮಾಧಿಗೆ ಗೌರವ ಸಲ್ಲಿಸಿದ್ದು, ಇದೀಗ ನಿರ್ದೇಶಕ ಆರ್​ಜಿವಿ, ನಟಿಯರಾದ ಅಪ್ಸರರಾಣಿ ಹಾಗೂ ನೈನಾಗಂಗೂಲಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಆರ್​ಜಿವಿ ನಟ ರಾಘವೇಂದ್ರ ರಾಜ್ ಕುಮಾರ್, ಮಗ ಯುವ ರಾಜ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಕತ್ರಾ ಡೇಂಜರಸ್ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರುವ ನಿರ್ದೇಶಕ ಆರ್​ಜಿವಿ, ಅಪ್ಸರರಾಣಿ, ನೈನಾಗಂಗೂಲಿ ಪುನೀತ್ ಸಮಾಧಿಯ ಜೊತೆಗೆ ಡಾ.ರಾಜ್ ಮತ್ತು ಪಾರ್ವತಮ್ಮ ಸಮಾಧಿಗೂ ನಮನ‌ ಸಲ್ಲಿಸಿದರು. ಒಬ್ಬ ಅದ್ಭುತ ನಟನನ್ನು ಕನ್ನನ ಚಿತ್ರರಂಗ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಬಹುಭಾಷಾ ನಟ ಕಮಲ್ ಹಾಸನ್, ಸೂರ್ಯ, ರಾಮ್ ಚರಣ್ ತೇಜಾ, ಅಲ್ಲು ಅರ್ಜುನ್, ನಿರ್ದೇಶಕ ರಾಜಮೌಳಿ, ಸಂಜಯ್​ ದತ್​​ ಸೇರಿದಂತೆ ಅನೇಕರು ಅಪ್ಪು ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ: ಕೈ ಕೈ ಹಿಡಿದು ನಡೆದ ಕತ್ರಿನಾ-ವಿಕ್ಕಿ.. ವಿಡಿಯೋ​ ವೈರಲ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.