ಕಳೆದ ಕೆಲ ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗುತ್ತಿದೆ. ಬಿಡುವು ಕೊಡದೆ ಬೀಳುತ್ತಿರುವ ಅಬ್ಬರದ ಮಳೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಮಳೆಯ ಅವಾಂತರಕ್ಕೆ ಆಸ್ತಿ-ಪಾಸ್ತಿ ಕಳೆದುಕೊಂಡಿರುವ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಜನರ ನೆರವಿಗೆ ನಟ ದರ್ಶನ್, ಸುದೀಪ್, ಶರಣ್, ನವರಸ ನಾಯಕ ಜಗ್ಗೇಶ್, ದುನಿಯಾ ವಿಜಯ್ ಹಾಗೂ ಬಿರುಗಾಳಿ ಚೇತನ್ ಸೇರಿದಂತೆ ಸಾಕಷ್ಟು ತಾರೆಯರು ನೆರವಿಗೆ ಧಾವಿಸಿದ್ದಾರೆ. ಜತೆಗೆ ಸಹಾಯ ಮಾಡುವಂತೆ ಅಭಿಮಾನಿಗಳಿಗೂ ಕರೆ ನೀಡುತ್ತಿದ್ದಾರೆ.
-
ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಗೆ "ರೇಮೊ" ಚಿತ್ರ ತಂಡದಿಂದ ಸಣ್ಣ ಕರ್ತವ್ಯ. 🙏 pic.twitter.com/15zvuMK5jQ
— Pavana Wadeyar (@PavanWadeyar) August 8, 2019 " class="align-text-top noRightClick twitterSection" data="
">ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಗೆ "ರೇಮೊ" ಚಿತ್ರ ತಂಡದಿಂದ ಸಣ್ಣ ಕರ್ತವ್ಯ. 🙏 pic.twitter.com/15zvuMK5jQ
— Pavana Wadeyar (@PavanWadeyar) August 8, 2019ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಗೆ "ರೇಮೊ" ಚಿತ್ರ ತಂಡದಿಂದ ಸಣ್ಣ ಕರ್ತವ್ಯ. 🙏 pic.twitter.com/15zvuMK5jQ
— Pavana Wadeyar (@PavanWadeyar) August 8, 2019
ಇದೀಗ ಸಕ್ಸಸ್ಫುಲ್ ಡೈರೆಕ್ಟರ್ ಪವನ್ ಒಡೆಯರ್ ಉತ್ತರ ಕರ್ನಾಟಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ತಮ್ಮ ರೆಮೋ ಚಿತ್ರತಂಡದ ವತಿಯಿಂದ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಮೂಲಭೂತ ವಸ್ತುಗಳನ್ನು ಗಾಡಿಯಲ್ಲಿ ತುಂಬಿ ಕಳುಹಿಸಿಕೊಡುತ್ತಿದ್ದಾರೆ. ಇತ್ತ ಸುದೀಪ್ ಅವರ ತಂಡ ಸಹ ಬೆಂಗಳೂರಿನಿಂದ ಹೊರಟಿದ್ದು, ಶೀಘ್ರದಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಸ್ಥಳಗಳಿಗೆ ಧಾವಿಸಲಿದೆ.