ETV Bharat / sitara

ಭೀಮಸೇನನ 'ಅಡುಗೆ' ತಡವಾಗುತ್ತಿರುವುದೇಕೆ?...ನಿರ್ದೇಶಕರು ಕೊಟ್ರು ಈ ಕಾರಣ

ಭೀಮಸೇನ ನಳಮಹಾರಾಜ ಸಿನಿಮಾ ತಡವಾಗಲು ಕಾರಣ ಏನು ಎಂಬುದನ್ನು ನಿರ್ದೇಶಕ ಕಾರ್ತಿಕ್ ಹೇಳಿಕೊಂಡಿದ್ದಾರೆ. ನಿನ್ನೆ ತಮ್ಮ ಫೇಸ್​ಬುಕ್​ನಲ್ಲಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಭೀಮಸೇನ ನಳಮಹಾರಾಜ
author img

By

Published : Apr 12, 2019, 12:17 PM IST

ಕನ್ನಡದ 'ಭೀಮಸೇನ ನಳಮಹಾರಾಜ' ಸಿನಿಮಾ ಸೆಟ್ಟೇರಿ ಎರಡು ವರ್ಷ ಕಳೆಯುತ್ತ ಬಂತು. ಆದರೆ, ಈ ಚಿತ್ರಕ್ಕಿನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.

ನಿರ್ದೇಶಕ ಕಾರ್ತಿಕ್ ಸರಗೂರು 'ಭೀಮಸೇನ ನಳಮಹಾರಾಜ' ಹೆಸರಿಟ್ಟು, ಸಿನಿ ಪ್ರೇಮಿಗಳಿಗೆ ರುಚಿಯಾದ ಮೃಷ್ಟಾನ್ನ ಭೋಜನ ಉಣಬಡಿಸಲು ರೆಡಿಯಾಗಿದ್ದರು. ಆದರೆ, ಕಾರಣಾಂತರಗಳಿಂದ ಇವರ ಚಿತ್ರ ತುಂಬ ತಡವಾಗಿದೆ. ಯಾವಾಗ ನಳಮಹಾರಾಜನ ಅಡುಗೆ ಘಮ ಕಡಿಮೆ ಆಯಿತೋ ಗಾಂಧಿನಗರದಲ್ಲಿ ಹಲವು ಬಗೆಯ ರೂಮರ್​ಗಳು ಕೇಳಿ ಬರತೊಡಗಿದವು. ಅವು ನಿರ್ದೇಶಕ ಕಾರ್ತಿಕ್​ ಕಿವಿ ಮೇಲೂ ಬಂದು ಬಿದ್ದಿವೆ. ಹೀಗಾಗಿ ನಿನ್ನೆ ತಮ್ಮ ಫೇಸ್​ಬುಕ್​ನಲ್ಲಿ ಸ್ಪಷ್ಟಣೆ ನೀಡಿರುವ ಅವರು, ಚಿತ್ರ ಡಿಲೇಗೆ ಕಾರಣಗಳನ್ನು ಹೇಳಿದ್ದಾರೆ.

  • " class="align-text-top noRightClick twitterSection" data="">

ಚಿತ್ರೀಕರಣದ ವೇಳೆ ತಮಗೆ ಕಾಡಿದ ಅನಾರೋಗ್ಯ, ಚಿತ್ರದ ನಾಯಕನಿಗೆ ಕಾಲಿಗೆ ಪೆಟ್ಟಾಗಿದ್ದು ಚಿತ್ರ ತಡವಾಗಿದ್ದಕ್ಕೆ ಪ್ರಮುಖ ಕಾರಣ ಎಂದಿದ್ದಾರೆ ಕಾರ್ತಿಕ್​. ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ನಡೆಯುತ್ತಿದೆ. ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಚಿತ್ರ ಬರಲಿದೆ. ಚಿತ್ರದ ಹಾಡಿನಲ್ಲಿ ಹೇಳಿರುವಂತೆ ಚಿತ್ರಕಥೆ ರುಚಿಯಾಗಿದೆ. ಇದು ನಿಮಗೆ ನಿರಾಶೆ ಮಾಡದು ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್​, ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್​ ಅವರ ಭೇಷರತ್​ ಬೆಂಬಲಕ್ಕೆ ಕಾರ್ತಿಕ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು ಈ ಚಿತ್ರದಲ್ಲಿ 'ಕಿರಿಕ್ ಪಾರ್ಟಿ' ಖ್ಯಾತಿಯ ಅರವಿಂದ್ ಅಯ್ಯರ್ ಲೀಡ್ ರೋಲ್​ಲ್ಲಿ ನಟಿಸುತ್ತಿದ್ದಾರೆ. ಸರಳ ಕ್ರಿಶ್ಚಿಯನ್ ಹುಡುಗಿಯಾಗಿ ಪ್ರಿಯಾಂಕಾ, ಅಯ್ಯಂಗಾರಿ ಹುಡುಗಿಯಾಗಿ ಆರೋಹಿ ಕಾಣಿಸಿಕೊಂಡಿದ್ದಾರೆ, ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ಎಂ ರಾವ್, ಮತ್ತು ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಪಕರಾಗಿದ್ದಾರೆ, ಚರಣ್ ರಾಜ್ ಸಂಗೀತ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.