ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ರಚಿತಾ ರಾಮ್ಗೆ ಇಂದು 29ನೇ ವರ್ಷದ ಹುಟ್ಟುಹಬ್ಬ. 1992ರ ಅಕ್ಟೋಬರ್ 3ರಂದು ಜನಿಸಿದ ರಚಿತಾ ರಾಮ್ ಈಗ ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆಯ ನಟಿಯೂ ಹೌದು.
'ಅರಸಿ' ಧಾರಾವಾಹಿಯ ಮೂಲಕ ಹೆಸರು ಗಳಿಸಿದ ರಚಿತಾ ರಾಮ್, ನಂತರ ದರ್ಶನ್ ಜೊತೆ 'ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇದಾದ ಬಳಿಕ ಗಣೇಶ್ ಅಭಿನಯದ 'ದಿಲ್ ರಂಗೀಲಾ', ಸುದೀಪ್ ನಟನೆಯ 'ರನ್ನ' ಸೇರಿದಂತೆ 'ರಥಾವರ', 'ಚಕ್ರವ್ಯೂಹ' ಮುಂತಾದ ಹಲವು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಗಳ ಮನಸ್ಸು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, 'ರನ್ನ' ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಸೌಥ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಹಿರಿತೆರೆಯಲ್ಲಿ ಮಾತ್ರವಲ್ಲ, ಕಿರುತೆರೆಯಲ್ಲೂ ರಚಿತಾ ಸೈ ಎನಿಸಿಕೊಂಡವರು. ಕನ್ನಡದ ರಿಯಾಲಿಟಿ ಶೋ 'ಕಾಮಿಡಿ ಟಾಕೀಸ್', 'ಮಜಾಭಾರತ- 2' ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದರು.
ರಚಿತಾ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಲವ್ ಯೂ ರಚ್ಚು' ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಈ ಕುರಿತಾದ ಮಾಹಿತಿಯನ್ನು ತಮ್ಮಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಟಿ, ಎಲ್ಲರೂ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಇನ್ನೊಂದೆಡೆ, ಡಿಂಪಲ್ ಕ್ವೀನ್‌ಗೆ ಅಭಿಮಾನಿಗಳು, ಸಿನಿಮಾ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ.
- " class="align-text-top noRightClick twitterSection" data="
">