ಲಾಕ್ಡೌನ್ ಅನ್ಲಾಕ್ ನಂತರ ನಿಧಾನವಾಗಿ ಚಿತ್ರರಂಗ ಸಹಜ ಸ್ಥಿತಿಗೆ ಮರಳುತ್ತಿದೆ. ಈಗಾಗಲೇ ಸ್ಟಾರ್ ನಟರ ಸಿನಿಮಾಗಳು, ಚಿತ್ರೀಕರಣಗಳೆಲ್ಲಾ ಭರದಿಂದ ಸಾಗಿವೆ. ಆದರೆ, ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ. ಈಗಾಗಲೇ ಸರ್ಕಾರ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ್ದು, ಸಿನಿಮಾ ರಿಲೀಸ್ ಮಾಡೋದಕ್ಕೆ ಕ್ಯೂನಲ್ಲಿವೆ.
-
The wait is over! Ninna Sanihake will be releasing in theatres on 20th August. Join @iamsurajgowda and @DhanyaRamkumar on a romantic journey unlike ever before. 💕#NinnaSanihake
— Ninna Sanihake (@NinnaSanihake) July 23, 2021 " class="align-text-top noRightClick twitterSection" data="
ಆಗಸ್ಟ್ ೨೦ ರಂದು ನಿಮ್ಮ ನೆಚ್ಚಿನ "ನಿನ್ನ ಸನಿಹಕೆ" ಚಿತ್ರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ, ತಪ್ಪದೇ ವೀಕ್ಷಿಸಿ pic.twitter.com/4B3EiRfhwv
">The wait is over! Ninna Sanihake will be releasing in theatres on 20th August. Join @iamsurajgowda and @DhanyaRamkumar on a romantic journey unlike ever before. 💕#NinnaSanihake
— Ninna Sanihake (@NinnaSanihake) July 23, 2021
ಆಗಸ್ಟ್ ೨೦ ರಂದು ನಿಮ್ಮ ನೆಚ್ಚಿನ "ನಿನ್ನ ಸನಿಹಕೆ" ಚಿತ್ರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ, ತಪ್ಪದೇ ವೀಕ್ಷಿಸಿ pic.twitter.com/4B3EiRfhwvThe wait is over! Ninna Sanihake will be releasing in theatres on 20th August. Join @iamsurajgowda and @DhanyaRamkumar on a romantic journey unlike ever before. 💕#NinnaSanihake
— Ninna Sanihake (@NinnaSanihake) July 23, 2021
ಆಗಸ್ಟ್ ೨೦ ರಂದು ನಿಮ್ಮ ನೆಚ್ಚಿನ "ನಿನ್ನ ಸನಿಹಕೆ" ಚಿತ್ರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ, ತಪ್ಪದೇ ವೀಕ್ಷಿಸಿ pic.twitter.com/4B3EiRfhwv
ಇದೀಗ ಟೀಸರ್ ಮತ್ತು ಹಾಡುಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿರೋ ಚಿತ್ರ 'ನಿನ್ನ ಸನಿಹಕೆ. ಈ ಸಿನಿಮಾ ಬಿಡುಗಡೆ ಆಗೋದಿಕ್ಕೆ ರೆಡಿಯಾಗಿದೆ. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಖ್ಯಾತಿಯ ಸೂರಜ್ ಗೌಡ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡ್ತಿರೋ ಈ ಸಿನಿಮಾ, ಗಾಂಧಿನಗರದ ಅಂಗಳದಲ್ಲಿ ಹೊಸ ಭರವಸೆ ಹುಟ್ಟಿಸಿದೆ.
ದೊಡ್ಮನೆಯ ಕುಡಿ ಧನ್ಯ ರಾಮ್‌ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋ ನಿನ್ನ ಸನಿಹಕೆ ಆಗಸ್ಟ್ 20ಕ್ಕೆ ಬಿಡುಗಡೆ ಆಗುತ್ತಿದೆ. ರಘು ದೀಕ್ಷಿತ್ ಸಂಗೀತ ಸಂಯೋಜನೆ ಇದ್ದು, ಚಿತ್ರದ ಹಾಡುಗಳು ಈಗಾಗಲೇ ಕನ್ನಡ ಸಿನಿಪ್ರಿಯರ ಮನ ಸೆಳೆಯುತ್ತಿವೆ.
ಪೋಸ್ಟರ್‌ನಿಂದ, ಸಿನಿಮಾ ಮೇಕಿಂಗ್ ಕ್ವಾಲಿಟಿಯಿಂದ ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ನಿರೀಕ್ಷೆ ಹುಟ್ಟಿಸಿದೆ. ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ : ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ, ಸಿನಿಮಾಗೆ ತೊಂದರೆಯಾಗದಿರಲಿ: ಶಿಲ್ಪಾ ಶೆಟ್ಟಿ