ಕ್ರಿಸ್ ಮಸ್ ಬಂತು ಅಂದ್ರೆ ಎಲ್ಲೆಡೆ ಸಡಗರ ಸಂಭ್ರಮ. ಇನ್ನು ದೊಡ್ಡ ದೊಡ್ಡ ಹೋಟೆಲ್ಗಳಲ್ಲಂತೂ ಕೇಕ್ ಮಾಡುವುದನ್ನು ನೋಡುವುದೇ ಒಂದು ಚಂದ. ಸೆಲೆಬ್ರಿಟಿಗಳು ಆ ಕೇಕ್ ಮಿಕ್ಸಿಂಗ್ ಸೆರಮನಿಯಲ್ಲಿ ಭಾಗಿಯಾಗಿ ಎಂಜಾಯ್ ಮಾಡ್ತಾರೆ.
ಹೌದು ಕ್ರಿಸ್ ಮಸ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೊಟೇಲ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರಿದ್ದಾರೆ

ಬಣ್ಣ ಬಣ್ಣದ ಚೆರಿಗಳು, ಖರ್ಜೂರ, ಪ್ಲಮ್ ಹಣ್ಣು, ಅಂಜೂರದ ಹಣ್ಣುಗಳು, ವಿವಿಧ ಬಗೆಯ ಒಣಹಣ್ಣುಗಳ ಮೇಲೆ ಜೇನುತುಪ್ಪ, ರಮ್ ಸುರಿದು ಹದವಾಗಿ ಕೇಕ್ ಮಿಕ್ಸಿಂಗ್ ಮಾಡುತ್ತಾ ದರ್ಶನ್ ಕ್ರಿಸ್ ಮಸ್ ಹಬ್ಬದ ಸಡಗರವನ್ನು ಸಂಭ್ರಮಿಸಿದ್ದಾರೆ.

ವರ್ಷದ ಕೊನೆಯ ಹಬ್ಬವಾದ ಕ್ರಿಸ್ಮಸ್ ಗೆ ಮೈಸೂರ ಮಂದಿ ಸಜ್ಜಾಗುತ್ತಿದ್ದು, ನಗರದ ವಿವಿಧ ಮಾಲ್ ಮತ್ತು ಹೋಟೆಲ್ಗಳು ಈ ಬಾರಿಯ ಹಬ್ಬಕ್ಕೆ ಜನರನ್ನು ರಂಜಿಸಲು ಮತ್ತು ಆಕರ್ಷಿಸಲು ಈಗಾಗಲೇ ತಯಾರಿ ನಡೆಸುತ್ತಿವೆ.
