ದೇಶದೆಲ್ಲೆಡೆ ಸಂಭ್ರಮದ ರಕ್ಷಾಬಂಧನ ಹಬ್ಬ ಆಚರಿಸಲಾಗುತ್ತಿದೆ. ಸಹೋದರಿಯರು ಪ್ರೀತಿಯ ಅಣ್ಣ, ತಮ್ಮಂದಿರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಿದ್ದಾರೆ. ಗಂಡು ಮಕ್ಕಳು ಕೂಡಾ ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡು ನಿಮಗೆ ಸದಾ ರಕ್ಷೆಯಾಗಿರುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ.
ಈ ರಾಖಿ ಹಬ್ಬದ ಸಂಭ್ರಮ ಸ್ಯಾಂಡಲ್ವುಡ್ನಲ್ಲಿ ಕೂಡಾ ಜೋರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ತಮ್ಮ ಸಹೋದರಿಯರ ಕೈಯ್ಯಲ್ಲಿ ರಾಖಿ ಕಟ್ಟಿಸಿಕೊಂಡು ಆಶೀರ್ವದಿಸಿ ಉಡುಗೊರೆಯನ್ನು ಕೂಡಾ ನೀಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ರಾಮನಗರದ ಕವಿತಾ ಎಂಬುವವರು ಪ್ರತಿ ವರ್ಷದಂತೆ ಈ ಬಾರಿ ಕೂಡಾ ದರ್ಶನ್ಗೆ ರಾಖಿ ಕಟ್ಟಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಗೆ ಆಗಮಿಸಿದ್ದ ಕವಿತಾ, ದರ್ಶನ್ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡ ದರ್ಶನ್ ಆಕೆಗೆ ಚಿನ್ನದ ಒಡವೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಇನ್ನು ರಾಕಿ ಭಾಯ್ ಮನೆಯಲ್ಲಿ ಕೂಡಾ ಪ್ರತಿ ವರ್ಷದಂತೆ ಈ ಬಾರಿ ಕೂಡಾ ರಕ್ಷಾಬಂಧನದ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಯಶ್ ತಮ್ಮ ಮುದ್ದಿನ ತಂಗಿ ನಂದಿನಿ ಕೈಯ್ಯಲ್ಲಿ ರಾಖಿ ಕಟ್ಟಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಯಶ್, ನಂದಿನಿಗೆ ದುಬಾರಿ ಗಿಫ್ಟ್ಗಳನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿ ಕೂಡಾ ತಂಗಿಗೆ ಯಶ್ ಕೂಡಾ ಚಿನ್ನದ ಒಡವೆಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.