ಕಿರಣ್ ರಾಜ್ ನಿರ್ದೇಶನದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777' ಸಿನಿಮಾ ಶ್ವಾನ ಹಾಗೂ ಮಾನವನ ನಡುವಿನ ಭಾವನಾತ್ಮಕ ಸಂಬಂಧದ ಸುತ್ತ ಹೆಣೆದಿರುವ ಸಿನಿಮಾ. ಸಿನಿಮಾ ಹೆಸರು ಹಾಗೂ ಪೋಸ್ಟರ್ ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿಸಿರುವುದಂತೂ ನಿಜ.
ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಮತ್ತೊಂದು ಪಾತ್ರಕ್ಕೆ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಸಿನಿಮಾ ಖ್ಯಾತಿಯ ದಾನಿಶ್ ಸೇಠ್ ಆಯ್ಕೆಯಾಗಿದ್ಧಾರೆ. ಈಗಾಗಲೇ ದಾನಿಶ್, 'ಚಾರ್ಲಿ 777' ಚಿತ್ರತಂಡ ಸೇರಿದ್ದಾರೆ. ಈ ವಿಷಯವನ್ನು ಚಿತ್ರತಂಡ ಅನೌನ್ಸ್ ಮಾಡಿದ್ದು ದಾನಿಶ್ ಅವರನ್ನು ವೆಲ್ಕಮ್ ಮಾಡಿದೆ. ಚಿತ್ರದಲ್ಲಿ ಕರ್ಷಣ್ ರಾಯ್ ಎಂಬ ಪಾತ್ರದಲ್ಲಿ ದಾನಿಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ದಾನಿಶ್ ಅವರಿಗೆ ಚಿತ್ರತಂಡ ಬರ್ತಡೇ ಶುಭ ಕೂಡಾ ಕೋರಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು ಉಳಿದ ಭಾಗದ ಚಿತ್ರೀಕರಣವನ್ನು ಮುಗಿಸಿ ಚಿತ್ರವನ್ನು ಶೀಘ್ರವೇ ತೆರೆಗೆ ತರಲಾಗವುದು ಎಂದು ಚಿತ್ರತಂಡ ಮಾಹಿತಿ ನೀಡಿದೆ.