ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಲ್ಲೆಡೆ ಪ್ರತಿಭಟನೆ ನಡೆಯುವ ಮೂಲಕ ದೇಶವೇ ಹೊತ್ತಿ ಉರಿಯುತ್ತಿದೆ. ಲಖನೌ, ದೆಹಲಿ, ಮಂಗಳೂರು, ಗುಜರಾತ್ ಸೇರಿ ಹಲವೆಡೆ ಪೌರತ್ವ ಹೋರಾಟದ ಕಿಚ್ಚು ಜೋರಾಗಿದೆ. ಆದರೆ, ಈ ಪ್ರತಿಭಟನೆ ನಡುವೆಯೂ ಇಂದು ಸುದೀಪ್ ಹಾಗೂ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾ ಬಿಡುಗಡೆಯಾಗಿದೆ.
ರಾಜ್ಯದಲ್ಲಿ ಕನ್ನಡ ಹಾಗೂ ಹಿಂದಿ ಅವತರಣಿಕೆಯಲ್ಲಿ ಇಂದು ಈ ಸಿನಿಮಾ ಬಿಡುಗಡೆಯಾಗಿದೆ. ಪ್ರೀತಿ, ದ್ವೇಷದ ಕಥೆ ಆಧರಿಸಿರುವ ದಬಾಂಗ್-3 ಸಿನಿಮಾ ಹಿಂದಿನ ಸೀರಿಸ್ಗಳಿಗೆ ಹೋಲಿಸಿದರೆ ಅಷ್ಟು ಚೆನ್ನಾಗಿ ಮೂಡಿ ಬಂದಿಲ್ಲ ಎಂಬುದು ಚಿತ್ರ ನೋಡಿದವರ ಅಭಿಪ್ರಾಯ. ಬಹುಮುಖ ಪ್ರತಿಭೆ ಕಿಚ್ಚ ಸುದೀಪ್, ವಿಲನ್ ಸಿನಿಮಾ ನಂತರ ಪೂರ್ಣಪ್ರಮಾಣದ ಖಳನಾಯಕನಾಗಿ ಚುಲ್ಬುಲ್ ಪಾಂಡೆ ಸಲ್ಮಾನ್ ಖಾನ್ ಎದುರು ಅಬ್ಬರಿಸಿದ್ದಾರೆ.
ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ತೆರೆಕಂಡ ದಬಾಂಗ್- 3 ಸಿನಿಮಾಗೆ ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ಬಿಸಿ ತಟ್ಟಿಲ್ಲ. ಎಂದಿನಂತೆ ಸಿನಿಮಾ ಪ್ರಿಯರು ಥಿಯೇಟರ್ಗೆ ತೆರಳಿ ಕನ್ನಡ ಭಾಷೆಯಲ್ಲಿ ಹಿಂದಿಯ ದಬಾಂಗ್- 3 ಸಿನಿಮಾವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ವಿಲನ್ ಆಗಿ ಅಬ್ಬರಿಸಿರುವ ಸುದೀಪ್ ಪಾತ್ರ ಎಲ್ಲರಿಗೂ ಇಷ್ಟವಾಗಿದೆ.