ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಮಗಳ ಮದುವೆಯ ಸಂಭ್ರಮ ಜೋರಾಗಿದೆ. ಮುದ್ದಿನ ಮಗಳ ಮದುವೆಯನ್ನು ಅದ್ಬುತವಾಗಿ ಮಾಡಲು ಪ್ಲಾನ್ ಮಾಡಿರುವ ರಣಧೀರನ ಮನೆಯಲ್ಲಿ ಮದುವೆಯ ಸಿದ್ದತೆ ಬಹಳ ಜೋರಾಗಿದೆ.
ನಿನ್ನೆ ರಾತ್ರಿ ನಡೆದ ಅರಿಶಿನ ಶಾಸ್ತ್ರದ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಡದಿಯ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇಂದು ಮತ್ತು ನಾಳೆ ರವಿಮಾಮನ ಮಗಳ ಮದುವೆ ನಗರದ ಅರಮನೆ ಮೈದಾನದ ತ್ರಿಪುರ ವಾಹಿನಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆಯ ಸಕಲ ಸಿದ್ದತೆಯಾಗಿದ್ದು, ಭಾರತೀಯ ಚಿತ್ರರಂಗದ ಬಹುತೇಕ ಸ್ಟಾರ್ಗಳು ಪ್ರೇಮಲೋಕದ ಜನಕನ ಮಗಳ ಮದುವೆಗೆ ಬರುವ ನಿರೀಕ್ಷೆ ಇದೆ.